ಸಾರಾಂಶ
ರೈತರ ಬಹು ದಿನಗಳ ಬೇಡಿಕೆಯಾದ ಕೋಲ್ಡ್ ಸ್ಟೋರೇಜ್ ಸ್ಥಾಪನೆಗಾಗಿ ₹6 ಕೋಟಿ ಮಂಜೂರು ಮಾಡಲಾಗಿದೆ. ಈಗಾಗಲೇ ಇದರ ಕ್ರಿಯಾಯೋಜನೆ ತಯಾರಿಸುತಿದ್ದು, ಶೀಘ್ರವೇ ಕೆಲಸ ಆರಂಭವಾಗಲಿದೆ.
ಕುಂದಗೋಳ:
ರಾಜ್ಯ ಸರ್ಕಾರವು ಸಹಕಾರಿ ಸಂಘಗಳ ಬಲವರ್ಧನೆ ಹಾಗೂ ರೈತರ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಕ್ರಮಕೈಗೊಂಡಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಸೋಯಾಬಿನ್ ಖರೀದಿ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ರೈತರ ಬಹು ದಿನಗಳ ಬೇಡಿಕೆಯಾದ ಕೋಲ್ಡ್ ಸ್ಟೋರೇಜ್ ಸ್ಥಾಪನೆಗಾಗಿ ₹6 ಕೋಟಿ ಮಂಜೂರು ಮಾಡಲಾಗಿದೆ. ಈಗಾಗಲೇ ಇದರ ಕ್ರಿಯಾಯೋಜನೆ ತಯಾರಿಸುತಿದ್ದು, ಶೀಘ್ರವೇ ಕೆಲಸ ಆರಂಭವಾಗಲಿದೆ. ಇದು ಮೆಣಸಿನಕಾಯಿ, ಶೇಂಗಾ ಸೇರಿದಂತೆ ಇತರ ಬೆಳೆಗಳನ್ನು ಸ್ಥಳೀಯವಾಗಿಯೇ ಶೇಖರಿಸಲು ಅನುಕೂಲ ಕಲ್ಪಿಸುತ್ತದೆ. ಜತೆಗೆ ಸ್ಥಳೀಯ ಎಪಿಎಂಸಿ ಅಭಿವೃದ್ಧಿಗೆ ₹1 ಕೋಟಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.ಖರೀದಿ ಕೇಂದ್ರಗಳ ವಿಳಂಬಕ್ಕೆ ಸ್ಪಷ್ಟನೆ ನೀಡಿದ ಶಾಸಕರು, ಮಳೆಗಾಲ ಹೆಚ್ಚಾಗಿದ್ದರಿಂದ ಬೆಳೆಗಳಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ರೈತರ ಹಿತದೃಷ್ಟಿಯಿಂದ ಬೆಳೆಗಳು ಸರಿಯಾಗಿ ಒಣಗಿದ ನಂತರವೇ ಖರೀದಿ ಪ್ರಾರಂಭವಾಗಲಿದೆ. ಉದ್ದು ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ₹7,800 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದರು.
ಸಹಕಾರಿ ಸಂಘಗಳ ಆಡಳಿತ ಮಂಡಳಿ ಗೊಬ್ಬರ, ಬೀಜ ವಿತರಣೆ ಹಾಗೂ ಖರೀದಿ ಕೇಂದ್ರಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಶಾಸಕರು ತಾಕೀತು ಮಾಡಿದರು.ಈ ವೇಳೆ ಸಹಕಾರಿ ಧುರೀಣ ಅರವಿಂದ ಕಟಗಿ, ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು, ಕೆಸಿಸಿ ಬ್ಯಾಂಕಿನ ನಿರ್ದೇಶಕ ಶಂಕರಗೌಡ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು:
;Resize=(128,128))
;Resize=(128,128))
;Resize=(128,128))