ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರದ ಪಾತ್ರ: ಮುತಾಲಿಕ್ ಆರೋಪ

| Published : Aug 24 2025, 02:00 AM IST

ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರದ ಪಾತ್ರ: ಮುತಾಲಿಕ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಯಾರು ಇದ್ದಾರೋ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಆದರೆ, ಅದರ ಹೆಸರಲ್ಲಿ ಬಂದೂಕು ಇಟ್ಟು ಹಿಂದೂಗಳನ್ನು, ಹಿಂದೂ ದೇವಸ್ಥಾನಗಳನ್ನು, ಧರ್ಮಸ್ಥಳವನ್ನು ಟಾರ್ಗೆಟ್‌ ಮಾಡುತ್ತಿರುವುದು ಸರಿಯಲ್ಲ.

ಧಾರವಾಡ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರದ ಪಾತ್ರವಿದೆ. ಸಿದ್ದರಾಮಯ್ಯ ನಾಸ್ತಿಕವಾದಿ, ಹಿಂದೂ ವಿರೋಧಿ. ಇದರ ಹಿಂದೆ ಅವರ ಕೈವಾಡ ಇದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಯಾರು ಇದ್ದಾರೋ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಆದರೆ, ಅದರ ಹೆಸರಲ್ಲಿ ಬಂದೂಕು ಇಟ್ಟು ಹಿಂದೂಗಳನ್ನು, ಹಿಂದೂ ದೇವಸ್ಥಾನಗಳನ್ನು, ಧರ್ಮಸ್ಥಳವನ್ನು ಟಾರ್ಗೆಟ್‌ ಮಾಡುತ್ತಿರುವುದು ಸರಿಯಲ್ಲ ಎಂದರು.

ಸೆಂಥಿಲ್ ಎಂಬ ಎಂಪಿ ಬಗ್ಗೆ ಸಂಶಯವಿದೆ. ಅವನೊಬ್ಬ ಕ್ರಿಶ್ಚಿಯನ್‌. ಇವರ ಹೈಕಮಾಂಡ್ ಸೋನಿಯಾ ಗಾಂಧಿ, ಪ್ರಿಯಾಂಕಾ, ರಾಹುಲ್ ಗಾಂಧಿ ಕೂಡ ಕ್ರಿಶ್ಚಿಯನ್. ಇದು ಮುಗಿದ ಮೇಲೆ ಇನ್ನೊಂದು ತೆಗೆದುಕೊಳ್ಳುತ್ತಾರೆ. ಹಿಂದೂ ಶಾಂತ‌ ಇದ್ದಾನೆ ಎಂದು ದುರ್ಲಾಭ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಮೀರ್ ಎಂಬಾತ ಮುಸ್ಲಿಮರ ಅತ್ಯಾಚಾರ, ದೌರ್ಜನ್ಯ ಬಗ್ಗೆ ತೋರಿಸಿದ್ದಾನಾ? ಮಸೀದಿ, ಮದರಸಾಗಳಲ್ಲಿ ದೌರ್ಜನ್ಯ ನಡೆದಿದೆ. ಈ ಬಗ್ಗೆ ಏನಾದರೂ ತೋರಿಸಿದ್ದಾನಾ? ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಕ್ರಿಶ್ಚಿಯನ್ನರು, ಕಮ್ಯುನಿಸ್ಟರು,‌ ಮುಸ್ಲಿಮರು ಇದ್ದಾರೆ. ಇವರೊಂದಿಗೆ ಕಾಂಗ್ರೆಸ್‌ನ ಕೆಲವರು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಮಗೆ ಧರ್ಮಸ್ಥಳವೇ ಏಕೆ ಬೇಕು? ಧರ್ಮಸ್ಥಳ ಹಿಂದೂಗಳ ಪವಿತ್ರ ಸ್ಥಳ, ಹೀಗಾಗಿ ಇದನ್ನು ಮಾಡಲಾಗುತ್ತಿದೆ. ತನಿಖೆ ಆದ ಮೇಲೆ ಕಥೆ ಕಟ್ಟಿದವರು, ಅವರಿಗೆ ಬೆಂಬಲ ನೀಡಿದವರಿಗೆ ಗುಂಡು ಹೊಡೆಯಿರಿ. ಇಲ್ಲದೇ ಹೋದರೆ ಇದೇ ಮುಂದುವರಿಯಲಿದೆ. ಇವತ್ತು ಧರ್ಮಸ್ಥಳ, ನಾಳೆ ತಿರುಪತಿ, ನಾಡಿದ್ದು ಮತ್ತೊಂದು. ನಮ್ಮ ಶ್ರದ್ಧೆ ಭಂಗ ಮಾಡುವ ಷಡ್ಯಂತ್ರ ನಡೆದಿದೆ. ಇದನ್ನು ನಾವು ವಿರೋಧಿಸುತ್ತೇವೆ. ರಾಜ್ಯದ ಜನ ಧರ್ಮಸ್ಥಳ ಪರ ನಿಂತಿದ್ದು ಸಂತಸದ ಸಂಗತಿ. ಅದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.