ಸರ್ಕಾರದ ಯೋಜನೆ ಅರ್ಹರಿಗೆ ತಲುಪಬೇಕು: ಬಿಜೆಪಿ ಧುರೀಣ ಎನ್‌.ವಿ. ಹೆಗಡೆ

| Published : Jan 26 2024, 01:52 AM IST

ಸಾರಾಂಶ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಫಲಾನುಭವಿಗಳಿದ್ದರೂ ಎಲ್ಲರನ್ನೂ ಫಲಾನುಭವಿಗಳನ್ನಾಗಿ ಗುರುತಿಸಿದರೆ ಯಾರಿಗೆ ಯೋಜನೆಗಳು ತಲುಪಬೇಕಿತ್ತು ಅವರಿಗೆ ತಲುಪುವುದಿಲ್ಲ.

ಜೋಯಿಡಾ:

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಫಲಾನುಭವಿಗಳಿದ್ದರೂ ಎಲ್ಲರನ್ನೂ ಫಲಾನುಭವಿಗಳನ್ನಾಗಿ ಗುರುತಿಸಿದರೆ ಯಾರಿಗೆ ಯೋಜನೆಗಳು ತಲುಪಬೇಕಿತ್ತು ಅವರಿಗೆ ತಲುಪುವುದಿಲ್ಲ ಎಂದು ಬಿಜೆಪಿ ಧುರೀಣ ಎನ್‌.ವಿ. ಹೆಗಡೆ ಹೇಳಿದರು.ಅವರು ತಾಲೂಕಿನ ನಂದಿಗದ್ದೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ಬಂದ ಯೋಜನೆಗಳನ್ನು ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅರ್ಹರಿಗೆ ತಲುಪುವಲ್ಲಿ ಸಹಕರಿಸಬೇಕು. ಯೋಜನೆಗಳು ಬಂದಾಗ ಎಲ್ಲರೂ ಅದರ ಹಿಂದೆ ಓಡುತ್ತಾರೆ. ಆದರೆ ಯಾರಿಗೆ ಅಗತ್ಯವೋ ಅವರಿಗೆ ಅದು ತಲುಪಬೇಕು. ಇದ್ದವರು ಯೋಜನೆ ಲಾಭ ಪಡೆದು ಇಲ್ಲದವರಿಗೆ ಅನ್ಯಾಯ ಆಗಬಾರದು ಎಂದರು.ದೇಶದ ಅಭಿವೃದ್ಧಿಗೆ ಈ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರದ ಕೆಲವು ಗಟ್ಟಿ ನಿರ್ಧಾರದಿಂದ ಭಾರತ ಉತ್ತಮ ಸ್ಥಿತಿಯಲ್ಲಿದೆ. ಎಲ್ಲವನ್ನೂ ಪಡೆಯುತ್ತಿರುವ ನಾವು ದೇಶಕ್ಕಾಗಿ ಏನಾದರೂ ಮಾಡಲೇಬೇಕು. ಕೇಂದ್ರ ಸರ್ಕಾರದ ಜತೆ ಕೈ ಜೋಡಿಸಬೇಕು ಎಂದರು.ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಜೋಯಿಡಾ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ್ ನಾಯ್ಕ, ಗುಂದ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಸುನೀಲ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಕಲ್ಪನಾ, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಮಾಹಿತಿ ಒದಗಿಸಿದರು.

ಕೇಂದ್ರ ಸರ್ಕಾರದ ಹಲವು ಮಾಹಿತಿ ಒದಗಿಸುವ ಚಿತ್ರ ಪ್ರದರ್ಶನ ಮಾಡಲಾಯಿತು. ಧಾನ ಸೇವಾ ಸಂಸ್ಥೆಯ ಮಾರುತಿ ಸಂಗಡಿಗರು ನಂದಿಗದ್ದಾ ಗ್ರಾಪಂ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು.