ಸರ್ಕಾರಿ ಶಾಲೆಯ ಆವರಣ ಪುಂಡಪೋಕರಿ, ಮದ್ಯಪ್ರಿಯರ ಆವಾಸಸ್ಥಾನ!

| Published : Aug 08 2025, 02:00 AM IST

ಸರ್ಕಾರಿ ಶಾಲೆಯ ಆವರಣ ಪುಂಡಪೋಕರಿ, ಮದ್ಯಪ್ರಿಯರ ಆವಾಸಸ್ಥಾನ!
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾ ದೇಗುಲ ಎನ್ನಿಸಿದ ಆವರಣ ಪಾಳು ಬಿದ್ದ ಕಟ್ಟಡದ ಆವರಣವಾಗಿ ಪರಿವರ್ತನೆಯಾಗುತ್ತಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣ ಪುಂಡಪೋಕರಿಗಳು ಮತ್ತು ಮದ್ಯಪ್ರಿಯರ ಆವಾಸಸ್ಥಾನವಾಗುತ್ತಿದೆ. ವಿದ್ಯಾ ದೇಗುಲ ಎನ್ನಿಸಿದ ಆವರಣ ಪಾಳು ಬಿದ್ದ ಕಟ್ಟಡದ ಆವರಣವಾಗಿ ಪರಿವರ್ತನೆಯಾಗುತ್ತಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಈ ಸಮಸ್ಯೆ ಇರದೆ ಹೋಬಳಿಯಾದ್ಯಂತ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ಗಂಭೀರ ಸಮಸ್ಯೆಯಿಂದ ಹೊರತಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಶಾಲೆಗಳಲ್ಲಿ ರಾತ್ರಿ ಕಾವಲುಗಾರರ ಕೊರತೆ ಮತ್ತು ನೇಮಕಾತಿ ಇಲ್ಲದೆ ಇರುವುದು ಕಾರಣವಾಗಿದೆ. ಗುಮಾಸ್ತರ ಮತ್ತು ರಾತ್ರಿ ಕಾವಲುಗಾರರ ನಿವೃತ್ತಿ ಇಲ್ಲವೇ ವರ್ಗಾವಣೆಯಿಂದ ತೆರವಾದ ಸ್ಥಾನಗಳಿಗೆ ಮರುನೇಮಕಗೊಳ್ಳದಿರುವುದರಿಂದ ಕೆಲವು ಗ್ರಾಮೀಣ ಭಾಗದ ಶಾಲೆಗಳಲ್ಲಿ ಪುಂಡಪೋಕರಿಗಳ, ಮದ್ಯಪ್ರಿಯರು, ವಯೋವೃದ್ಧರು ಆವಾಸಸ್ಥಾನವಾಗುತ್ತಿದೆ. ಪ್ರವಾಸಿ ಪುಂಡಪೋಕರಿಗಳು ಶಿಕ್ಷಣ ನೀಡುವ ದೇಗುಲವನ್ನು ಶನಿವಾರ ಮತ್ತು ಭಾನುವಾರ ಮಲಿನಗೊಳಿಸುತ್ತಿರುವುದು ಕಾಣಬಹುದಾಗಿದೆ. ಸೋಮವಾರ ಕೆಲವು ಶಾಲಾ ಶಿಕ್ಷಕರು ಅದನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗುವುದನ್ನು ಹಲವಷ್ಟು ಸಂದರ್ಭಗಳಲ್ಲಿ ಕಾಣಸಿಗುತ್ತಿದೆ. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶಾಲೆಗಳ ಆವರಣದಲ್ಲಿ ಪುಂಡ ಪೋಕರಿಗಳ ತಡೆಗಟ್ಟಲು ಕ್ರಮವಹಿಸಲು ಶಾಲೆಗಳಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲಾಗಿದೆ. ಆದರೂ ಅದನ್ನು ಹಾನಿಗೊಸುವ ಮೂಲಕ ವಿಕೃತ ಮನಸ್ಥಿತಿಯನ್ನು ಹೊಂದಿರುವ ಮಂದಿ ಪುಂಡಾಟಿಕೆಯನ್ನು ಶಾಲಾವರಣದಲ್ಲಿ ಮೆರೆಯುತ್ತಿದ್ದಾರೆ. ಜಿಲ್ಲೆಗೆ ಮಾದರಿ ಶಾಲೆ: ಶತಮಾನೋತ್ಸವ ಆಚರಿಸದ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹಳೇ ವಿದ್ಯಾರ್ಥಿ ಸಂಘ ರಚಿಸಿ ಶಾಲೆ ಕಟ್ಟಡದ ಪುನಶ್ಚೇತನಕ್ಕೆ ಉದ್ಯಮಿಗಳು, ಕಾಫಿ ಬೆಳೆಗಾರರು ಸೇರಿದಂತೆ ದಾನಿಗಳ ಮೂಲಕ 13 ಲಕ್ಷಕ್ಕೂ ಮಿಕ್ಕಿ ವ್ಯಯಿಸಿ ಶಾಲೆಯ ಗೋಡೆ, ಮೇಲ್ಛಾವಣಿ ಹಾಗೂ ಕೀಟಕಿ ಬಾಗಿಲುಗಳನ್ನು ದುರಸ್ತಿಗೊಳಿಸಲಾಗಿದೆ. ಇತಿಹಾಸ ಕಂಡ ಈ ಶಾಲೆಗೆ ಹೊಸರೂಪ ನೀಡುವ ಖಾಸಗಿ ಶಾಲೆಗಳನ್ನು ಹಿಮ್ಮಟ್ಟಿಸುವ ರೀತಿಯಲ್ಲಿ ಶಾಲೆಯ ಪುನಶ್ಚೇತನಕ್ಕೆ ನಾಂದಿ ಹಾಡಿದ್ದು ಇದು ಜಿಲ್ಲೆಗೆ ಮಾದರಿ ಶಾಲೆಯಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ರಾತ್ರಿ ವೇಳೆ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದೆ. ಶಾಲೆಯ ಪರಿಸರವನ್ನು ಧೂಮಪಾನ ಮದ್ಯಪಾನ ಸೇರಿದಂತೆ ಅನೈತಿಕ ಚಟುವಟಿಕೆಗಳಿಂದ ಮಲಿನಗೊಳಿಸುತ್ತಿದ್ದಾರೆ. ಇದನ್ನು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಚರ್ಚಿಸಿ ಶಾಲೆಗಳ ಶುಚಿತ್ವಕ್ಕೆ ಆದ್ಯತೆ ನೀಡುವಲ್ಲಿ ಮುಂದಾಗಲೆಂದು ಪೋಷಕರು ಹಾಗೂ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. 7ನೇ ಹೊಸಕೋಟೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಾರ್ಯಾಚರಿಸುತ್ತಿದೆ. ಕಂಬಿಬಾಣೆ, ಚಿಕ್ಲಿಹೊಳೆ, ಕಲ್ಲೂರು, ಹೆರೂರು, ಕಾನ್‌ಬೈಲ್, ಮಂಜಿಕೆರೆ ಪ್ರೌಢಶಾಲೆ, ಕೆದಕಲ್, ಹೊರೂರು, ಭಾಗಗಳಲ್ಲಿ ಶಾಲೆಗಳಲ್ಲೂ ಇದೇ ರೀತಿಯ ಸಮಸ್ಯೆ. ವಾರಾಂತ್ಯದ ದಿನಗಳಲ್ಲಿ ಹಾಗೂ ಮಧ್ಯದ ದಿನಗಳಲ್ಲಿ ಕೆಲವು ಶಾಲೆಗಳ ಆವರಣದಲ್ಲಿ ಪುಂಡಾಟಿಕೆಯನ್ನು ಪುಂಡಪೋಕರಿಗಳು ವಿಕೃತ ರೀತಿಯಲ್ಲಿ ಮೆರೆದು ಹೋಗುತ್ತಿದ್ದಾರೆ ಎಂದು ಗ್ರಾಮೀಣ ಪ್ರದೇಶದ ಕೆಲವು ಶಾಲೆಗಳ ಪೋಷಕರು ಆಳಲು ತೋಡಿಕೊಂಡಿದ್ದಾರೆ.ಪೋಷಕರು, ಗ್ರಾಮಸ್ಥರ ಆಗ್ರಹ: ಈ ಪುಂಡಾಟಿಕೆಯು ಕೇವಲ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ಶಾಲೆಗಳಿಗೆ ಸಿಮೀತವಾಗಿರದೆ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳ ಕಿಟಕಿಗಳ ಗಾಜು ಹಾಗೂ ಬಾಗಿಲುಗಳನ್ನು ಮುರಿದು ಹಾಕಿ ತಮ್ಮ ಮನ:ಸ್ಥಿತಿ ತೋರ್ಪಡಿಸುವುದರಿಂದ ಮಕ್ಕಳು ಚಳಿ ಗಾಳಿಯಲ್ಲಿ ಕುಳಿತು ಪಾಠಪ್ರವಚನ ಕೇಳುವಂತಾಗಿದೆ. ಇದಕ್ಕೆ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕು ಎಂದು ಪೋಷಕರು, ಗ್ರಾಮಸ್ಥರ ಆಗ್ರಹವಾಗಿದೆ.------------------ಕೋಟ್ಸ್‌----------------ಸರ್ಕಾರಿ ಶಾಲೆಗಳಲ್ಲಿ ಪುಂಡಪೋಕರಿಗಳ ಹಾವಳಿಯಿಂದ ಶಾಲಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರವು ಕಟ್ಟಡಗಳಿಗೆ ಸೂಕ್ತ ಬಂದೋಬಸ್ತ್ ಮತ್ತು ಭದ್ರತೆಯನ್ನು ಒದಗಿಸಿ ವಠಾರದಲ್ಲಿ ಪುಂಡ ಪೋಕರಿಗಳ ಹಾವಳಿ ತಡೆಗೆ ಮುಂದಾಗಬೇಕು.। ನಾಗೇಶ್ ಪೂಜಾರಿ, ಸುಂಟಿಕೊಪ್ಪ ಹೋಬಳಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ---------------------------------------------------ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯನ್ನು ಹಳೆಯ ವಿದ್ಯಾರ್ಥಿ ಸಂಘಟನೆಯವರು ಊರಿನ ಉದ್ಯಮಿಗಳು ಹಾಗೂ ದಾನಿಗಳ ಸಹಾಯ ಪಡೆದು ಲಕ್ಷಾಂತರ ರು. ವೆಚ್ಚ ಮಾಡಿ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಸುಸಜ್ಜಿತಗೊಳಿಸಿದ್ದಾರೆ. ಆದರೆ ಪುಂಡ ಪೋಕರಿಗಳು ಶಾಲೆ ಕಟ್ಟಡವನ್ನು ವಿರೂಪಗೊಳಿಸುವುದಲ್ಲದೆ, ದುಶ್ಚಟಗಳ ಕೇಂದ್ರ, ಅನೈತಿಕ ಚಟುವಟಿಕೆಗಳ ಬಗ್ಗೆ ಆಗಿಂದಾಗ್ಗೆ ದೂರುಗಳು ಕೇಳಿ ಬರುತ್ತಿದೆ. ನಾವು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಶಾಲೆಗಳಲ್ಲಿ ಗುಮಾಸ್ತರು ಇರುತ್ತಿದ್ದು ಇಂತಹ ದುಶ್ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಆದರೆ ಗುಮಾಸ್ತರ ಹುದ್ದೆಯು ತೆರವಾಗಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಕಾಣುವಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಗುಮಾಸ್ತರನ್ನು ನೇಮಕಗೊಳಿಸುವುದರಿಂದ ಮಾತ್ರ ಸಾಧ್ಯವಾಗಲಿದೆ. ಸಂಬಂಧಿಸಿದ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಇದರ ಗಮನಹರಿಸುವುದು ಸೂಕ್ತ.। ಪಿ.ಆರ್.ಸುನಿಲ್‌ಕುಮಾರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ-------------------------------------