ಪ್ರವಾಸಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

| Published : Dec 07 2024, 12:31 AM IST

ಪ್ರವಾಸಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಹೈದ್ರಾಬಾದಗೆ ವಿಮಾನದ ಮೂಲಕ ಪ್ರಯಾಣ ಮಾಡಿದ್ದಾರೆ. ಇದು ಚರ್ಚೆಗೂ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಹೈದ್ರಾಬಾದಗೆ ವಿಮಾನದ ಮೂಲಕ ಪ್ರಯಾಣ ಮಾಡಿದ್ದಾರೆ. ಇದು ಚರ್ಚೆಗೂ ಗ್ರಾಸವಾಗಿದೆ.

ಶಾಲೆಯ ವಿವಿಧ ತರಗತಿಯ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, 6 ಜನ ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿ 6 ಜನರು ಪ್ರಯಾಣ ಬೆಳೆಸಿದ್ದಾರೆ.ವಿವಿಧೆಡೆಯಿಂದ ದೇಣಿಗೆ ಸಂಗ್ರಹಿಸಿ, ಶಾಲೆಯ ವಿದ್ಯಾರ್ಥಿಗಳನ್ನು ವಿಮಾನದಲ್ಲಿಯೇ ಪ್ರಯಾಣ ಮಾಡಿಸಬೇಕು ಎನ್ನುವ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಪ್ರಯತ್ನದ ಫಲವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿಮಾನದಲ್ಲಿ ಇದೇ ಮೊದಲ ಬಾರಿ ಪ್ರಯಾಣ ಬೆಳೆಸಿದ್ದಾರೆ ಎನ್ನುವುದು ವಿಶೇಷ.

ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರಯ್ಯ, ಶಿಕ್ಷಕರಾದ ನಾಗರಾಜ, ಹರೀಶ, ನೇತ್ರಾವತಿ, ಹನುಮಂತಪ್ಪ ಹಾಗೂ ಮಂಜುನಾಥ ಪೂಜಾರ ಅವರ ಪ್ರಯತ್ನ ಫಲವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿಮಾನದಲ್ಲಿ ಹೈದ್ರಾಬಾದ್‌ಗೆ ಶುಕ್ರವಾರ ತೋರಗಲ್ ವಿಮಾನ ನಿಲ್ದಾಣದ ಮೂಲಕ ತೆರಳಿದ್ದಾರೆ.ಮಕ್ಕಳ ವಿಮಾನಯಾನದ ಪ್ರವಾಸಕ್ಕೆ ಚಾಲನೆ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ, ಕಲ್ಯಾಣ ಕರ್ನಾಟಕದಲ್ಲಿಯೇ ಇದೇ ಮೊದಲ ಬಾರಿಗೆ ನಮ್ಮ ಕೊಪ್ಪಳ ತಾಲೂಕಿನ ಲಿಂಗದಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ವಿಮಾನದ ಮುಖಾಂತರ ಪ್ರವಾಸ ಕೈಗೊಂಡಿರುವುದು ಅತ್ಯಂತ ಹರ್ಷ ತಂದಿದೆ. ವಿದ್ಯಾರ್ಥಿಗಳನ್ನು ಅತ್ಯಂತ ಸುರಕ್ಷಿತೆಯಿಂದ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಶಿಕ್ಷಕರಿಗೆ ಸೂಚಿಸಿ ವಿದ್ಯಾರ್ಥಿಗಳ ಪ್ರವಾಸಕ್ಕೆ ಶಾಸಕರು ಶುಭ ಹಾರೈಸಿದರು.ಈ ಸಂದರ್ಭ ಕಿರ್ಲೊಸ್ಕರ್ ಕಂಪನಿಯ ಡಿ. ನಾರಾಯಣ, ಬಿಇಒ ಶಂಕ್ರಯ್ಯ, ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ನಾಯಕ್, ಮುರಳಿ ಲಿಂಗದಹಳ್ಳಿ, ಮುದ್ದಪ್ಪ ಬೇವಿನಳ್ಳಿ, ನಿಂಗಜ್ಜ ಶಹಾಪುರ, ಗಿರೀಶ ಹಿರೇಮಠ, ನಾಗರಾಜ್ ಬಹಾದ್ದೂರ ಬಂಡಿ, ಶಿವಮೂರ್ತಿ ಬೇವಿನಳ್ಳಿ, ವೆಂಕನಗೌಡ ಪಾಟೀಲ್, ಪಿಡಿಒ ಗೀತಾ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.