ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಿಂದ ಜನರಿಗೆ ಸಾಕಷ್ಟು ಅನುಕೂಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Jun 26 2024, 12:32 AM IST

ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಿಂದ ಜನರಿಗೆ ಸಾಕಷ್ಟು ಅನುಕೂಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಯಶಸ್ಸು ಕಂಡಿದೆ. ಕಾರ್ಯಕ್ರಮಕ್ಕೂ ಮೊದಲು ನಾನು ಸೇರಿದಂತೆ ಅಧಿಕಾರಿಗಳಲ್ಲೂ ಸಾಕಷ್ಟು ಗೊಂದಲ ಇತ್ತು. ಎಲ್ಲವನ್ನು ನಿಭಾಯಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಸಕಾರಗೊಳಿಸಿದ್ದೇವೆ ಎಂಬ ಸಮಾಧಾನ ಇದೆ. ಇನ್ನೂ ಐದು ದಿನಗಳಲ್ಲಿ ಕಾರ್ಯಕ್ರಮ ಮುಗಿಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೆನ್ನಾಳು ಗ್ರಾಮದಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆ ಮನೆಬಾಗಿಲಿಗೆ ಕಾರ್‍ಯಕ್ರಮದಲ್ಲಿ ಸಾಕಷ್ಟು ಅನುಕೂಲವಾಗಿದೆ ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.

ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಮನ್ಮುಲ್‌ನಿಂದ ಮಂಗಳವಾರ ಆಯೋಜಿಸಿದ್ದ ರಾಸುಗಳಿಗೆ ವಿಮೆ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಯಶಸ್ಸು ಕಂಡಿದೆ. ಕಾರ್ಯಕ್ರಮಕ್ಕೂ ಮೊದಲು ನಾನು ಸೇರಿದಂತೆ ಅಧಿಕಾರಿಗಳಲ್ಲೂ ಸಾಕಷ್ಟು ಗೊಂದಲ ಇತ್ತು. ಎಲ್ಲವನ್ನು ನಿಭಾಯಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಸಕಾರಗೊಳಿಸಿದ್ದೇವೆ ಎಂಬ ಸಮಾಧಾನ ಇದೆ ಎಂದರು.

15 ದಿನಗಳ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿ ಮನೆ ಮನೆಗಳಿಗೂ ತೆರಳಿ ಜನರಿಗೆ ಅಗತ್ಯವಿದ್ದ ಸರ್ಕಾರಿ ಸೇವೆಗಳನ್ನು ಗುರುತಿಸಿ ಪಟ್ಟಿ ಮಾಡಿದರು. ಹೀಗಾಗಿ ಕಾರ್ಯಕ್ರಮ ಅಂದುಕೊಂಡಂತೆ ನಡೆಯಿತು. ಇನ್ನೂ ಐದು ದಿನಗಳಲ್ಲಿ ಕಾರ್ಯಕ್ರಮ ಮುಗಿಲಿದೆ ಎಂದರು.

ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಇಡೀ ತಾಲೂಕು ಆಡಳಿತವನ್ನು ಕೆನ್ನಾಳು ಗ್ರಾಪಂಗೆ ವರ್ಗಾಯಿಸಿ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಯಶಸ್ವಿಯಾಗಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿಯೇ ರಾಸುಗಳ ವಿಮೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ರಾಸುಗಳಿಗೆ ಮಾಲೀಕರು ವಿಮೆ ಮಾಡಿಸಿದರೆ ಚರ್ಮ ಗಂಟು, ಉಣ್ಣು ಇತ್ಯಾದಿ ವೈರಸ್ ರೋಗಗಳಿಂದ ಆಕಸ್ಮಿಕವಾಗಿ ಮೃತಪಟ್ಟರೆ 40 ರಿಂದ 60 ಸಾವಿರದವರೆಗೆ ವಿಮೆ ಹಣ ಪಾವತಿಯಾಗುತ್ತದೆ. ತಪ್ಪದೇ ಎಲ್ಲರೂ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರದಲ್ಲಿ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿ ಜಗದೀಶ್, ಪಶು ಇಲಾಖೆ ಮುಖ್ಯ ವೈದ್ಯಾಧಿಕಾರಿ ಹಿಮಾಚಲ್, ಡಾ.ಸಂತೋಷ್, ಡೇರಿ ಅಧ್ಯಕ್ಷ ಚೇತನ್‌ ಕುಮಾರ್, ಉಪಾಧ್ಯಕ್ಷೆ ಭಾಗ್ಯಮ್ಮ ಸೇರಿದಂತೆ ಡೇರಿ ಆಡಳಿತ ಮಂಡಳಿ ನಿರ್ದೇಶಕರು ಮುಖಂಡರು ಇದ್ದರು.