ಸಾರಾಂಶ
ಈ ಹಿಂದೆ ಕುಸ್ತಿಪಟುಗಳಿಗೆ ಸಕಲ ಉತ್ತಮ ತಿಂಡಿ, ಹಾಲು, ಆಹಾರದ ಸೌಕರ್ಯ ನೀಡಿ ಪ್ರತಿ ದಿನ ಗರಡಿ ಮನೆಯಲ್ಲಿ ಅವರಿಗೆ ತಾಕತ್ ಬರುವಂತೆ ವ್ಯಾಯಾಮ ಮಾಡಿಸಿ ಅವರ ಬೆಳವಣಿಗೆಗೆ ಸಹಕಾರ ಕೊಡುತ್ತಿದ್ದರು. ಈಗ ಅಂತರ ಬೆಳವಣಿಗೆ ಇಲ್ಲ. ನಶಿಸುತ್ತಿರುವ ಗ್ರಾಮೀಣ ಕುಸ್ತಿಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಶಿಸುತ್ತಿರುವ ಗ್ರಾಮೀಣ ಕುಸ್ತಿ ಆಟಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಪುರಸಭೆ ಸದಸ್ಯ ದಯಾನಂದ್ ಆಗ್ರಹಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ದಸರಾ ಕಾಟಾ ಕುಸ್ತಿ ಹಿನ್ನೆಲೆಯಲ್ಲಿ ಕುಸ್ತಿ ಜೊತೆ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಮನೆಗೊಬ್ಬರಂತೆ ಪೈಲ್ವಾನರನ್ನು ಇಟ್ಟುಕೊಂಡಿದ್ದರು. ಕುಸ್ತಿ ಕ್ರೀಡೆ ಹಂತ ಹಂತವಾಗಿ ನಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಕುಸ್ತಿಪಟುಗಳಿಗೆ ಸಕಲ ಉತ್ತಮ ತಿಂಡಿ, ಹಾಲು, ಆಹಾರದ ಸೌಕರ್ಯ ನೀಡಿ ಪ್ರತಿ ದಿನ ಗರಡಿ ಮನೆಯಲ್ಲಿ ಅವರಿಗೆ ತಾಕತ್ ಬರುವಂತೆ ವ್ಯಾಯಾಮ ಮಾಡಿಸಿ ಅವರ ಬೆಳವಣಿಗೆಗೆ ಸಹಕಾರ ಕೊಡುತ್ತಿದ್ದರು. ಈಗ ಅಂತರ ಬೆಳವಣಿಗೆ ಇಲ್ಲ. ನಶಿಸುತ್ತಿರುವ ಗ್ರಾಮೀಣ ಕುಸ್ತಿಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.ಪುರುಷ ವಿಭಾಗದಲ್ಲಿ ಹೆಸರಾಂತ ಪೈಲ್ವಾನರಾದ ಶಿವಮೊಗ್ಗ ಶಿಕಾರಿಪುರದ ಅಕ್ರಮ್ ಹಾಗೂ ದರಸಗುಪ್ಪೆಯ ವಿಜೇಂದ್ರ ಅವರಿಗೆ ಮೊದಲ ಜೊತೆಯಾಗಿ ಅವರಿಬ್ಬರ ಜೋಡಿಗಳಾಗಿ ಒಟ್ಟು ಪುರುಷರ 40 ಜೋಡಿ ನೋಂದಣಿ ಮಾಡಿದರು. ಮಹಿಳಾ ವಿಭಾಗದಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಮೇಳಾಪುರದ ಪೈಲ್ವಾನ್ ಚೈತನ್ಯ ಶ್ರೀ ಹಾಗೂ ಮದ್ದೂರಿನ ಕೆಸ್ತೂರು ವಿದ್ಯಾಶ್ರೀ ಇವರ ಜೋಡಿಗಳು ಸೇರಿದಂತೆ ಒಟ್ಟು 15 ಜೋಡಿಗಳು ಸೇರಿದಂತೆ ಒಟ್ಟಾರೆ 55 ಜೋಡಿಗಳನ್ನು ನೋಂದಾವಣೆ ಮಾಡಲಾಯಿತು.
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಅ.6 ರಂದು ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಗಳು ನಡೆಯಲಿವೆ. ಈ ವೇಳೆ ಹೊಸಹಳ್ಳಿ ಶಿವು, ಬಾಲಸುಬ್ರಮಣ್ಯ, ಪ್ರಕಾಶ್, ನಾರಾಯಣ, ಮಲ್ಲು ಸ್ವಾಮಿ, ರವಿಪ್ರಸಾದ್, ಕುಬೇರ ನಾರಾಯಣ್, ರಾಜು, ಟಿ. ಕೃಷ್ಣ, ಕೆ.ಬಿ. ಬಸವರಾಜು ಸೇರಿದಂತೆ ಇತರರಿದ್ದರು.