ಕನ್ನಡ ಗಜಲ್‌ ಸಾಹಿತ್ಯ ಪ್ರಕಾರದ ಬೆಳವಣಿಗೆಗೆ ಸರ್ಕಾರ ಆಶ್ರಯ ನೀಡಲಿ: ಪ್ರಭಾವತಿ ದೇಸಾಯಿ

| Published : Aug 26 2024, 01:30 AM IST

ಸಾರಾಂಶ

ಹಿಂದಿನ ಕಾಲದಲ್ಲಿ ಕವಿಗಳಿಗೆ, ಹಲವು ಸಾಹಿತ್ಯ ಪ್ರಕಾರಗಳಿಗೆ ರಾಜಾಶ್ರಯವಿರುತ್ತಿತ್ತು, ಅದರಂತೆಯೇ ಇಂದು ಗಜಲ್‌ ಸಾಹಿತ್ಯ ಪ್ರಕಾರಕ್ಕೂ ಸರಕಾರ ಆಸರೆಯಾಗಿ ನಿಂತು ಇದನ್ನು ಪೋಷಿಸಲಿ ಎಂದು ಗಜಲ್‌ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಭಾವತಿ ದೇಸಾಯಿ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹಿಂದಿನ ಕಾಲದಲ್ಲಿ ಕವಿಗಳಿಗೆ, ಹಲವು ಸಾಹಿತ್ಯ ಪ್ರಕಾರಗಳಿಗೆ ರಾಜಾಶ್ರಯವಿರುತ್ತಿತ್ತು, ಅದರಂತೆಯೇ ಇಂದು ಗಜಲ್‌ ಸಾಹಿತ್ಯ ಪ್ರಕಾರಕ್ಕೂ ಸರಕಾರ ಆಸರೆಯಾಗಿ ನಿಂತು ಇದನ್ನು ಪೋಷಿಸಲಿ ಎಂದು ಗಜಲ್‌ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಭಾವತಿ ದೇಸಾಯಿ ಕರೆ ನೀಡಿದ್ದಾರೆ.

ಕಲಬುರಿಯ ಜ್ಞಾನಗಂಗೆಯಲ್ಲಿ ಭಾನುವಾರ ನಡೆದ ಚೊಚ್ಚಿಲ ಗಜಲ್‌ ಸಮ್ಮಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಹಿಂದೆ ರಾಜರಿದ್ದರು, ಇಂದು ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಸರಕಾರಗಳು ಪ್ರೋತ್ಸಾಹ ನೀಡಬೇಕು. ಹಾಗಾದಾಗ ಮಾತ್ರ ಕನ್ನಡ ಸಾಹಿತ್ಯ, ಅದರಲ್ಲೂ ಗಜಲ್‌ ಸಾಹಿತ್ಯ ಉನ್ನತಕ್ಕೇರಲು ಸಾಧ್ಯವೆಂದರು.

ಸರಕಾರದ ಸಂಸ್ಥೆಗಳಾದ ಕನ್ನಡ ಸಾಹಿತ್ಯ ಅಕಾಡೆಮಿ, ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ ಸೇರಿದಂತೆ ಅನೇಕ ಕನ್ನಡಪರ ಕೆಲಸ ಮಾಡುವ ಸಂಸ್ಥೆ, ಇಲಾಖೆಗಳು ಗಟ್ಟಿಯಾಗಿ ನಿಂತು ಕನ್ನಡ ಗಜಲ್‌ ಸಾಹಿತ್ಯ ಬೆಳೆಯಲು ಪ್ರೋತ್ಸಾಹಿಸಬೇಕು. ವಿವಿಗಳು ಗಜಲ್‌ ಸಾಹಿತ್ಯ ಪಠ್ಯದಲ್ಲಿ ಸೇರಿಸಬೇಕು.

ಈ ಸಾಹಿತ್ಯ ಜನಪ್ರೀಯವಾಗಲು ಸಿನಿಮಾಗಳಲ್ಲಿ ಹೆಚ್ಚು ಬಳಕೆಯಾಗಬೇಕು. ಸಂಗೀತಗಾರರು ರಾಗ ಸಂಯೋಜಿಸಿ ಗಜಲ್‌ಗಳನ್ನು ಹಾಡಬೇಕು. ಹೀಗೆಲ್ಲಾ ಹಂಗಳಲ್ಲಿ ನಡೆದಲ್ಲಿ ಗಜಲ್‌ಗಳು ಜನಪ್ರೀಯತೆ ಗಲಿಸಲಿವೆ ಎಂದರು.

ರಾಜ್ಯ ಮಟ್ಟದಲ್ಲಾದಂತೆ ಜಿಲ್ಲೆ, ತಾಲೂಕು, ಹೋಬಳಿ ಹಂತಗಳಲ್ಲೂ ಗಜಲ್‌ ಸಾಹಿತ್ಯ ಸಮ್ಮೇಳನಗಳು ನಡೆಯಲಿ, ಗಜರ್‌ ರಚನೆ ಕಮ್ಟಗಳು ಆಗಲಿ, ಕಸಾಪದಂತಹ ಸಂಸ್ಥೆಗಳು ಗಜಲ್‌ ರಚನೆ ಮಬಗ್ಗೆ ತರಬೇತಿ ತರಗತಿ ನಡೆಸಲಿ. ಗಜಲ್‌ ಗೋಷ್ಠಿ, ಮುಶಾಯರಾಗಳನ್ನು ಸರಕಾರವೇ ಮುಂದೆಗಿ ಆಯೋಜಿಸಲಿ ಎಂದು ಆಗ್ರಹಿಸಿದರು.

ರಾಜ್ಯ ಗಜಲ್‌ ಅಕಮೆಡಿ ಹುಟ್ಟು ಹಾಕಿ ಸಮ್ಮೇಳನ ನಡೆಸುತ್ತಿರುವ ಮಪ್ರಯತ್ನವನ್ನು ಮೆಚ್ಚಿಕೊಂಡ ಪ್ರಭಾವತಿ ಇದಕ್ಕೆ ಕಾರಣರಾದ ಮಹಿಪಾಲರೆಡ್ಡಿ ಮುನ್ನೂರ್‌, ರಂಗಸ್ವಾಮಿ ಸಿದ್ದಯ್ಯ ಹಾಗೂ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು.

ದಜಲ್‌ ರಚನೆಯಲ್ಲಿ ಕವಿಗಳು ಆಯ್ಕೆ ಮಾಡುವ ರದೀಫ್‌, ಕಾಫಿಯಾ ಓದುಗರನ್ನು ಸೆಳೆಬೇಕು, ಬಳಸಿ ಸವಕಾಲದ ರದೀಫ್‌ಗಳನ್ನೇ ಹೆಚ್ಚು ಬಳಸೋದು ಸರಿಯಲ್ಲ, ಹೊಸತನದಲ್ಲಿ ಗಜಲ್‌ ಇರುವಂತೆ ನೋಡಿಕೊಂಡಾಗ ಜನಮನ ಸೆಳೆಯುತ್ತದೆ ಎಂದರು.

ಉ್ದು ಹಿನ್ನೆಲೆ ಇದ್ದವರು ಗಜಲ್‌ ಬರೆಯುತ್ತಾರಂಬುದು ಸುಳ್ಳು, ಕನ್ನ]ಡ ಕವಿಗಳೂ ಗಜಲ್‌ ಬರೆಯುತ್ತಾರೆ. ಗಜಲ್‌ ರಾಣಿ ಕನ್ನಡಿಗರಿಗೆ ಒಲಿಯುತ್ತಿದ್ದಾಳೆ. ಗಜಲ್‌ ರಾಣಿ ಎಲ್ಲರಿಗೂ ಒಲಿಯೋದಿಲ್ಲ. ಯಾರು ಗಜಲಿನ ಅಂತರಾಳ ಗಂಭೀರವಾಗಿ ಅಧ್ಯಯನ ಮಾಡಿ ಧ್ಯಾಿಸುವರೋ ಅಂತಹವರಿಗೆ ಗಜಲ್‌ ರಾಣಿ ಒಲಿಯುತ್ತಾಳಂದರು.

ಮನಬಂದಂತೆ ಬರೆಯಲು ಗಜಲ್‌ ಮುಕ್ತ ಛಂದಸ್ಸಿನ ಭಾವಗೀತೆ ಅಲ್ಲ, ಗಜಲ್‌ಗೆ ಗೇ ತನ್ನದೇ ನಿಯಮಗಳಿವೆ. ಛಂದಸ್ಸೂ ಕೂಡಾ ಇದೆ. ಹಲವಾರು ಪ್ರಕಾರದ ವೃತ್ತಗಳೂ ಇವೆ. ಅವುಗಳನ್ನೆಲ್ಲ ಕನ್ನಡ ಗಜಲ್‌ಕಾರರು ಗಮನಿಸಬೇಕು. ಗಜಲ್‌ ಒಂದು ಹಾಡುಗಬ್ಬ, ಹಾಡಲು ಬರಬೇಕೆಂದರೆ ಗಜಲ್‌ ಛಂದಸ್ಸು, ವೃತ್ತದಲ್ಲಿರಬೇಕೆಂದು ಗಜಲ್‌ ಲಕ್ಷಣಗಳು ಹೇಳಿದರು.

ಹಲವರು ಭಾವ ಪ್ರಧನವೆಂದು ನಿಯಮ ಗಾಳಿಗೆ ತೂರಿ ಗಜಲ್‌ ಬರೆಯುತ್ತಿದ್ದಾರೆ. ಹೀಗೆ ಬರೆದು ಅದಕ್ಕೇ ಗಜಲ್‌ ಅನ್ನೋದು ತಪ್ಪು. ಇದು ಗಜಲ್‌ ಸಾಹಿತ್ಯಕ್ಕೆ ಮಾಡುವ ಅವಮಾನ, ದ್ವಿಪದಿ ಇದ್ದು ಅಂತಿಮ ರಚನೆಯಲ್ಲಿ ಪ್ರಾಸ್‌ ಬಂದಲ್ಲಿ ಅದು ಗಜಲ್‌ ಅಲ್ಲವೇ ಅಲ್ಲ ಗಜಲ್‌ ರಚನೆಕಾರರು ಇಂತಹ ಸೂಕ್ಷ್ಮಗಳನ್ನು ಅರಿತು ಕನ್ನಡ ಗಜಲ್‌ ರಚನೆಗೆ ತೊಡಗಿಸಿಕೊಂಡಲ್ಲಿ ಗಜಲ್‌ ಪ್ರಪಂಚ ವಿಸ್ತರಣೆ ಸಾಧ್ಯವೆಂದರು.

ಕರ್ನಾಟಕ ಗಜಲ್ ಅಕಾಡೆಮಿ ವತಿಯಿಂದ ಗುವಿವಿ ಸಹಕಾರದೊಂದಿಗೆ ನಡೆದ ಒಂದು ದಿನದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದಲ್ಲಿ ಹಲವು ಗೋಷ್ಠಿಗಳು ನಡೆದವು.

ಕನ್ನಡದಲ್ಲಿ ಗಜಲ್ ಆರಂಭಿಸಿದ ಆದ್ಯ ಗಜಲಕಾರ, ಗಜಲ್ ಗಾರುಡಿಗ ಶಾಂತರಸ ಅವರ ಹೆಸರಿನ ವೇದಿಕೆ ಹಾಗೂ ಗಜಲ್ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಂಬಣ್ಣ ಅಮರಚಿಂತ ರಾಯಚೂರು, ಚಂದ್ರಕಾಂತ ಕುಸನೂರ ಕಲಬುರಗಿ, ಅಬ್ದುಲ ಮಜೀದಖಾನ್ ಸಾಗರ, ಇಟಗಿ ಈರಣ್ಣ ಬಳ್ಳಾರಿ, ಸುಜಾತಾ ಲಕ್ಮನೆ ಬೆಂಗಳೂರು ಹಾಗೂ ರಮೇಶ ಹೆಗಡೆ ಸಿರಸಿ ಹೆಸರಿನ ಮಹಾದ್ವಾರಗಳು ಗಮನ ಸೆಳೆದವು.

ವಿಜಯಪುರದ ಕವಯಿತ್ರಿ, ಒಂಬತ್ತು ಗಜಲ್ ಸಂಕಲನ ಸೇರಿ 23 ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ಗಜಲಕಾರ್ತಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದು ಔಚಿತ್ಯ ಪೂರ್ಣವಾಗಿತ್ತು.

ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಿದರು. ಕವಯಿತ್ರಿ ಬಸ್ಸಮ್ಮ ಸಜ್ಜನ್ ಸಂಪಾದಿಸಿರುವ ಗಜಲ್ ನಾದಲೋಕ’ ಪ್ರಾತಿನಿಧಿಕ ಕೃತಿಯನ್ನು ಗುಲಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ ಬಿಡುಗಡೆ ಮಾಡಿದರು. ಗುಲಬರ್ಗ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮಜರ್ ಆಲಂ ಖಾನ್ , ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ , ಮಹಿಪಾಲರೆಡ್ಡಿ ಮುನ್ನೂರ್‌ ಹಾಜರಿದ್ದು ಪ್ರಾಸ್ತಾವಿಕ, ಆಶಯ ನುಡಿಗಳನ್ನಾಡಿದರು.

ಗಮನ ಸಳೆದ ಗೋಷ್ಠಿಗಳು

ಸಮ್ಮೇಳನಾಧ್ಯಕ್ಷರ ಬದುಕು-ಬರಹ’ ಮೊದಲ ಗೋಷ್ಠಿಗೆ ಬೆಂಗಳೂರಿನ ಗಜಲಕಾರ ಸಂಗಮೇಶ್ ಬಾದವಾಡಗಿ ಚಾಲನೆ ನೀಡಿದರು ಬಳ್ಳಾರಿಯ ಗಜಲಕಾರ ಸಿಕಂದರ್ ಅಲಿ, ಯುವ ಗಜಲಕಾರ ನಂರುಶಿ ಕಡೂರು ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡಿದರು.

ಗಜಲ್ ಹೆಜ್ಜೆ ಗುರುತು ಕುರಿತು ಎರಡನೇ ಗೋಷ್ಟಿಯಲ್ಲಿ ಮಂಗಳೂರಿನ ಗಜಲಕಾರ ಡಾ. ಸುರೇಶ್ ನೆಗಳಗುಳಿ, ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಹಾಜರಿದ್ದು , ಸವದತ್ತಿಯ ವಿಮರ್ಶಕ ಡಾ. ಎಂ.ವೈ. ಯಾಕೋಳ್ಳಿ- ಗಜಲ್ ಆಕೃತಿ ಮತ್ತು ಆಶಯ, ಅಂಕೋಲಾ ಗಜಲ್ ಕವಯಿತ್ರಿಶ್ರೀದೇವಿ ಕೆರೆಮನೆ- ಕನ್ನಡ ಸಾಹಿತ್ಯದಲ್ಲಿಗಜಲ್’ ಹಾಗೂ ಕೊಪ್ಪಳದ ಕವಯಿತ್ರಿ ಅರುಣಾ ನರೇಂದ್ರ – ಕಲ್ಯಾಣ ಕರ್ನಾಟಕ ನೆಲದಲ್ಲಿ ಗಜಲ್’ ಕುರಿತು ಉಪನ್ಯಾಸಗಳನ್ನು ಆಲಿಸಿ ಚರ್ಚೆಗೆ ಮುನ್ನುಡಿ ಬರೆದರು.

2 ಗಜಲ್‌ ವಾಚನ ಗೋಷ್ಠಗಳು ನೆದವು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್, ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ್ ಇದ್ದ ಗೋಷ್ಠಿಯಲ್ಲಿ ಅನೇಕ ಗಜಲಕಾರರು ಭಾಗವಹಿಸಿದ್ದರು. ನನ್ನ ಕವಿತೆ- ಜುಗಲ್‍ಬಂದಿ’ ನಡೆಯಿತು.

ಹಿರಿಯ ಗಜಲಕಾರ ಡಾ. ಕಾಶಿನಾಥ ಅಂಬಲಗೆ, ಹುಬ್ಬಳ್ಳಿಯ ಗಜಲ್ ಕವಯಿತ್ರಿ ಡಾ. ರೇಣುಕಾತಾಯಿ ಸಂತಬಾ ಸೇರಿದಂತೆ 45 ಜನ ಗಜಲಕಾರರು ಗಜಲ್‌ ವಾಚಿಸಿದರು.

ಸಮಾರೋಪದಲ್ಲಿ ಮೆಚ್ಚುಗೆ ಮಾತು

ಸಮಾರೋಪ ಸಮಾರಂಭದಲ್ಲಿ ಗುಲ್ಬರ್ಗಾ ವಿ.ವಿ ಉರ್ದು-ಪರ್ಶಿಯನ್ ವಿಭಾಗ ಮುಖ್ಯಸ್ಥ ಅಬ್ದುಲ್ ರಬ್ ಉಸ್ತಾದ್ ಸಮಾರೋಪ ನುಡಿಗಳನ್ನಾಡಿ ಸಮ್ಮೇಳನ ಯಶಸ್ಸಿಗೆ ಮೆಚ್ಚುಗೆ ಮಾತನ್ನಾಡಿದರು. ಅಧ್ಯಕ್ಷೆ ಪ್ರಭಾವತಿ ಎಸ್.ದೇಸಾಯಿ, ಗುವಿವಿ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಗಜಲಕಾರ ಬೋಡೆ ರಿಯಾಜ್ ಅಹ್ಮದ್ , ರಾಯಚೂರಿನ ಗಜಲಕಾರ ಮಂಡಲಗಿರಿ ಪ್ರಸನ್ನ ಇದ್ದರು.