ಸಾರಾಂಶ
-ಚಿತ್ರದುರ್ಗದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆ ಆಗ್ರಹ
----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಒಳಮೀಸಲಾತಿ ಜಾರಿಯಾಗುವವರೆಗೂ ಬ್ಯಾಕ್‍ಲಾಗ್ ಹುದ್ದೆ ಅಥವಾ ಹೊಸ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಯಾವುದೇ ಪ್ರಯತ್ನವ ರಾಜ್ಯ ಸರ್ಕಾರ ಮಾಡಬಾರದೆಂದು ಮಾದಿಗ ಸಮುದಾಯದ ಮುಖಂಡರ ಆಗ್ರಹಿಸಿದ್ದಾರೆ.ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಒಳ ಮೀಸಲಾತಿ ಜಾರಿಗೆ ಭವಿಷ್ಯದಲ್ಲಿ ಹೋರಾಟ ರೂಪಿಸುವ ಸಂಬಂಧ ಕರೆಯಲಾದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ದಲಿತ, ಮಾದಿಗ ಜನಾಂಗ, ನೌಕರರ ಸಂಘಟನೆಗಳ ಒಕ್ಕೂಟದ ಸದಸ್ಯರು ಪಾಲ್ಗೊಂಡು ಪ್ರಮುಖ ನಿರ್ಣಯ ಕೈಗೊಂಡರು. ಒಳ ಮೀಸಲು ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಧಾನ ಪ್ರವೃತ್ತಿಯ ಸಭೆ ತೀವ್ರವಾಗಿ ಖಂಡಿಸಿತು. ಹಾಗೊಂದು ವೇಳೆ ಹುದ್ದೆಗಳ ಭರ್ತಿ ಮಾಡಲು ಮುಂದಾದರೆ ಸಮಾನ ಪ್ರಾತಿನಿಧ್ಯದ ಅವಕಾಶವನ್ನು ಕಿತ್ತುಕೊಳ್ಳುವ ತಂತ್ರವಾಗುತ್ತದೆ. ಇಡೀ ಕರ್ನಾಟಕ ರಾಜ್ಯದ ಮಾದಿಗ ಸಮುದಾಯ ಆಕ್ರೋಶ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೆ ತಂದು ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆ, ನೌಕರಿ ಹಂಚುವುದೇ ಸಾಮಾಜಿಕ ನ್ಯಾಯದ ಮೊದಲ ಪಾಠ ಎಂಬುದನ್ನು ಕಾಂಗ್ರೆಸ್ ಮಾರೆ ಮಾಚುತ್ತಿದೆ. ಒಳಮೀಸಲಾತಿ ಜಾರಿ ಮುನ್ನವೇ ಹೊಸ ಹುದ್ದೆ, ಬ್ಯಾಕ್‍ಲ್ಯಾಗ್ ಹುದ್ದೆ ನೇಮಕಾತಿ ತರಾತುರಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಮಾದಿಗರ ವಿರೋಧಿಯಾಗಿದೆ. ಈ ಸರ್ಕಾರಕ್ಕೆ ಸಾಮಾಜಿಕ ಬದ್ಧತೆ ಇದ್ದರೆ ಒಳಮೀಸಲಾತಿ ಜಾರಿ ಮಾಡಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಸಭೆ ಒತ್ತಾಯಿಸಿತು.ಚಿತ್ರದುರ್ಗ ಜಿಲ್ಲೆಯ ಎಲ್ಲಾ ದಲಿತ, ಅಂಬೇಡ್ಕರ್ ವಾದಿ ಮಾದಿಗ ಸಂಘಟನೆಗಳು ಒಳಗೊಂಡಂತೆ ಅಡಕ್ ಸಮಿತಿ ರಚಿಸುವ ಜವಾಬ್ಧಾರಿಯನ್ನು ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ ಹಾಗೂ ಹುಲ್ಲೂರು ಕುಮಾರ್ ಅವರಿಗೆ ವಹಿಸಲಾಯಿತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವಿಧೇಯಕ ಜಾರಿಗೆ ತರುವುದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದರಿಂದ ಇದೇ ಜಿಲ್ಲೆಯಲ್ಲೇ ರಾಜ್ಯ ಮಟ್ಟದ ಸಮಾವೇಶ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅಂತಿಮ ಗಡುವು ವಿಧಿಸಲು ತೀರ್ಮಾನಿಸಿದರು.ರಾಜ್ಯ ಮಟ್ಟದ ಸಮಾವೇಶದಲ್ಲಿ ಹಿರಿಯ ಹೋರಾಟಗಾರರು, ಬರಹಗಾರರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಬಿಎಸ್ಪಿ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು, ಸಚಿವರು, ಸಂಸದರು ಹಾಗೂ ಮಾದಿಗ ಜನಾಂಗದ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ತರಲು ತೀರ್ಮಾನಿಸಲಾಯಿತು.
ವಿದ್ಯಾರ್ಥಿಗಳು, ನೌಕರರು, ಕೃಷಿಕರು, ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಿ ಕೊಳ್ಳುವ ಮೂಲಕ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಆರಂಭಿಸುವ ಮೂಲಕ ಹೋರಾಟದ ತೀವ್ರತೆಗೆ ಮಾದಿಗ ಜನಾಂಗ ಸಜ್ಜುಗೊಳಿಸಬೇಕು.ಒಳಮೀಸಲಾತಿ ಜಾರಿ ವಿರೋಧಿ ರಾಜಕಾರಣಿಗಳಿಗೆ ಪ್ರವೇಶವಿಲ್ಲವೆಂಬ ನಾಮಫಲಕ ಗಳನ್ನು ಎಲ್ಲಾ ಕಾಲೋನಿಗಳಲ್ಲಿ ಹಾಕಿಸಲು ತೀರ್ಮಾನಿಸಲಾಯಿತು.ಆದಿಜಾಂಭವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೋಡಿಹಳ್ಳಿ ಸಂತೋಷ್, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶ್‍ಮೂರ್ತಿ, ಹೊಸದುರ್ಗದ ಲಕ್ಷ್ಮಣ್, ನರಸಿಂಹ ರಾಜು, ಮಾಜಿ ತಾಪಂ ಅಧ್ಯಕ್ಷ ಪೆನ್ನಣ್ಣ, ರಾಜ್ಯ ನಾಯಕರಾದ ಅಂಬಣ್ಣ ಹಾರೋಲಿಕರ್, ಬಸವರಾಜ್ ಕೌತಳ್, ಸಾಮಾಜಿಕ ಸಂಘರ್ಷ ಸಮಿತಿ ಕೆ.ಕುಮಾರ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ದಲಿತ ನಾಯಕ ಶಂಕರ್ ಕೊಟ್ಟ, ಹರಿಹರ ಎಚ್.ಆರ್.ಮಲ್ಲೇಶ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಹುಲ್ಲೂರು ಕುಮಾರ್, ಜೈಭೀಮ್ ಯುವಕ ಸಂಘದ ಯಲ್ಲಪ್ಪ, ಕೆ.ಪಿ.ಶ್ರೀನಿವಾಸ್, ಹೆಗ್ಗೆರೆ ಮಂಜುನಾಥ್, ಕಲಾವಿದ ಮಾರುತೇಶ್ ಇತರರಿದ್ದರು.ನವಯಾನ ಬುದ್ದ ಸಂಘ ಟಿ.ರಾಮು, ಭೀಮನಕೆರೆ ಶಿವಮೂರ್ತಿ, ಬಿಬಿಎಸ್ಪಿ ಅಧ್ಯಕ್ಷ ಪ್ರಕಾಶ್, ಭೀಮಾಆರ್ಮಿ ಅಧ್ಯಕ್ಷ ಸಿ.ಎಲ್.ಅವಿನಾಶ್, ರಾಜೇಂದ್ರ ನಗರ ಶಿವರಾಜ್, ಕುಂಚಿಗನಾಳ್ ಮಹಲಿಂಗಪ್ಪ, ವಿಜಯ ಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ನಿವೃತ್ತಿ ಎಸ್ಟಿ ಜಿಲ್ಲಾಧಿಕಾರಿ ದಯಾನಂದ, ಬಿಜೆಪಿ ಮುಖಂಡ ಮುರಾರ್ಜಿ, ಹೆಗ್ಗೆರೆ ಶಂಕರಪ್ಪ, ಮಾಜಿ ಕೌನ್ಸಿಲ್ ಚಳ್ಳಕೆರೆ ಶಿವಮೂರ್ತಿ, ಹೊಳಲ್ಕೆರೆ ಕಾಂಗ್ರೆಸ್ ಮುಖಂಡ ಪಾಡಿಗಟ್ಟೆ ಸುರೇಶ್, ಕಿರಣ್ ಶಿವಪುರ, ಆರನಕಟ್ಟೆ ರಂಗನಾಥ್, ಲಾಯರ್ ಚಂದ್ರಪ್ಪ, ಬಿಸ್ನಹಳ್ಳಿ ಜಯಪ್ಪ, ಭೀಮಾಯಾತ್ರೆ ಅಧ್ಯಕ್ಷ ರವೀಂದ್ರ ಇತರರಿದ್ದರು.
-----------------ಪೋಟೋ:
ಚಿತ್ರದುರ್ಗದಲ್ಲಿ ನಡೆದ ಒಳಮೀಸಲು ಜಾರಿ ಸಂಬಂಧದ ಸಭೆಯಲ್ಲಿ ಮಾದಿಗ ಸಮುದಾಯದ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.--------
ಫೋಟೋ ಫೈಲ್ ನೇಮ್- 8 ಸಿಟಿಡಿ7