ಮುದ್ದೇಬಿಹಾಳ ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯಪಾಲರು ಅಸ್ತು ಎಂದಿದ್ದು, ಇದರಿಂದ ಮುದ್ದೇಬಿಹಾಳ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಸಿಕ್ಕಂತಾಗಿದೆ. ವೇಗವಾಗಿ ಬೆಳೆಯುತ್ತಿರುವ ಮುದ್ದೇಬಿಹಾಳ ಪ್ರದೇಶದ ಯೋಜನಾಬದ್ಧ ಅಭಿವೃದ್ಧಿಗಾಗಿ ಮುದ್ದೇಬಿಹಾಳ ನಗರ ಯೋಜನಾ ಪ್ರಾಧಿಕಾರವು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 289 ಬೆಮಪ್ರಾ 2024 (ಇ-ಕಡತ), ದಿನಾಂಕ: 05.10.2026ರನ್ವಯ ರಾಜ್ಯಪಾಲರ ಅನುಮೋದನೆ ಪಡೆದಿರುವ ಈ ನೂತನ ಪ್ರಾಧಿಕಾರವು, ಮುದ್ದೇಬಿಹಾಳ ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ ಭಾಗಗಳ ಒಟ್ಟಾರೆ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ.
ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಮುದ್ದೇಬಿಹಾಳ ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯಪಾಲರು ಅಸ್ತು ಎಂದಿದ್ದು, ಇದರಿಂದ ಮುದ್ದೇಬಿಹಾಳ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಸಿಕ್ಕಂತಾಗಿದೆ. ವೇಗವಾಗಿ ಬೆಳೆಯುತ್ತಿರುವ ಮುದ್ದೇಬಿಹಾಳ ಪ್ರದೇಶದ ಯೋಜನಾಬದ್ಧ ಅಭಿವೃದ್ಧಿಗಾಗಿ ಮುದ್ದೇಬಿಹಾಳ ನಗರ ಯೋಜನಾ ಪ್ರಾಧಿಕಾರವು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 289 ಬೆಮಪ್ರಾ 2024 (ಇ-ಕಡತ), ದಿನಾಂಕ: 05.10.2026ರನ್ವಯ ರಾಜ್ಯಪಾಲರ ಅನುಮೋದನೆ ಪಡೆದಿರುವ ಈ ನೂತನ ಪ್ರಾಧಿಕಾರವು, ಮುದ್ದೇಬಿಹಾಳ ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ ಭಾಗಗಳ ಒಟ್ಟಾರೆ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ.
ಸ್ಥಳೀಯ ಶಾಸಕರು ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರ ಸಾಮಾಜಿಕ ಚಿಂತನೆ ಮತ್ತು ಅಭಿವೃದ್ಧಿಯ ದೂರದೃಷ್ಟಿಯ ಫಲವಾಗಿ ಈ ನೂತನ ಪ್ರಾಧಿಕಾರ ಪ್ರಾರಂಭಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದೆ.ಪ್ರಾಧಿಕಾರಕ್ಕೆ ಒಳಪಡಲಿರುವ 7 ಗ್ರಾಮಗಳು:ಈ ಹಿಂದೆ ಭಾಗಶಃ ಕಂದಾಯ ಗ್ರಾಮಗಳ ರೂಪದಲ್ಲಿದ್ದ ಯೋಜನಾ ಪ್ರದೇಶವು ಇದೀಗ ಒಟ್ಟು 10,405.77 ಹೆಕ್ಟೇರ್ ವಿಸ್ತೀರ್ಣಕ್ಕೆ ಹಾಗೂ 2011ರ ಜನಗಣತಿಯ ಪ್ರಕಾರ 47,851 ಜನಸಂಖ್ಯೆಗೆ ವಿಸ್ತರಣೆಗೊಂಡಿದೆ. ಮುದ್ದೇಬಿಹಾಳ ಪಟ್ಟಣ (963.00 ಹೆಕ್ಟೇರ್) ಬಿದರಕುಂದಿ ಗ್ರಾಮ (1928.71 ಹೆಕ್ಟೇರ್)ಕುಂಟೋಜಿ ಗ್ರಾಮ (3614.08 ಹೆಕ್ಟೇರ್)
ಕವಡಿಮಟ್ಟಿ ಗ್ರಾಮ (1116.17 ಹೆಕ್ಟೇರ್-ಹೊಸ ಸೇರ್ಪಡೆ)ಮುನ್ನಾಳ ಗ್ರಾಮ (970.26 ಹೆಕ್ಟೇರ್-ಹೊಸ ಸೇರ್ಪಡೆ)
ಹಡಲಗೇರಿ ಗ್ರಾಮ (927.87 ಹೆಕ್ಟೇರ್-ಹೊಸ ಸೇರ್ಪಡೆ)ಶಿರೋಳ ಗ್ರಾಮ (885.68 ಹೆಕ್ಟೇರ್)
ಪ್ರಾಧಿಕಾರದಿಂದ ಅನುಕೂಲಗಳೇನು?ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರ ಆದೇಶದಂತೆ, ಮುದ್ದೇಬಿಹಾಳ ಪುರಸಭಾ ಯೋಜನಾ ಪ್ರಾಧಿಕಾರದ ಆಸ್ತಿ ಹಾಗೂ ಹೊಣೆಗಾರಿಕೆಯನ್ನು ನೂತನ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಹಾಲಿ ಸ್ಥಳೀಯ ಯೋಜನಾ ಪ್ರದೇಶದೊಂದಿಗೆ ಹೆಚ್ಚುವರಿಯಾಗಿ ಮೂರು ಗ್ರಾಮಗಳನ್ನು ಸೇರಿಸಿ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, 2 ವರ್ಷದೊಳಗೆ ಮಹಾಯೋಜನೆ ತಯಾರಿಸಿ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸುವುದು ಕಡ್ಡಾಯ. ಈ ಪ್ರಾಧಿಕಾರದಿಂದ ಇಡೀ ನಗರಕ್ಕೆ ಸೂಕ್ತವಾದ ಮಹಾಯೋಜನೆ ರೂಪಿಸಲಾಗುತ್ತಿದ್ದು, ವಾಸಸ್ಥಳ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳನ್ನು ಸ್ಪಷ್ಟವಾಗಿ ವಿಂಗಡಿಸುವುದರಿಂದ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಭವಿಷ್ಯದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಅಗಲವಾದ ರಸ್ತೆಗಳು, ರಿಂಗ್ ರೋಡ್‌ಗಳು, ಯು.ಜಿ.ಡಿ ಒಳಚರಂಡಿ ವ್ಯವಸ್ಥೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಮಳೆನೀರು ಚರಂಡಿಗಳು, ಉದ್ಯಾನಗಳು ಹಾಗೂ ಆಟದ ಮೈದಾನಗಳು ನಿರ್ಮಾಣವಾಗಲಿವೆ. ಪ್ರಾಧಿಕಾರವೇ ಸ್ವತಃ ಮಾದರಿ ವಸತಿ ಲೇಔಟ್‌ಗಳನ್ನು ರಚಿಸಿ ಕೈಗೆಟುಕುವ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಿದೆ. ಖಾಸಗಿ ಡೆವಲಪರ್‌ಗಳು ಕಡ್ಡಾಯವಾಗಿ ಪ್ರಾಧಿಕಾರದ ಅನುಮೋದನೆ ಪಡೆಯಬೇಕಾಗಿದ್ದು, ಅನಧಿಕೃತ ಲೇಔಟ್‌ಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.ಈ ಪ್ರಾಧಿಕಾರ ರಚನೆಯ ಪರಿಣಾಮವಾಗಿ ಗ್ರಾಮೀಣ ಮಟ್ಟದ ರೈತರ ಜಮೀನುಗಳು ಹಾಗೂ ನಿವೇಶನಗಳು ಈಗಿನ ದರಕ್ಕಿಂತ ದುಪ್ಪಟ್ಟಾಗಲಿವೆ. ರಸ್ತೆ, ಚರಂಡಿ, ಉದ್ಯಾನ ಸೇರಿದಂತೆ ವಿವಿಧ ಮೂಲಸೌಲಭ್ಯಗಳೊಂದಿಗೆ ಪ್ರದೇಶವು ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಿ, ಸ್ಥಳೀಯ ಭೂಮಾಲೀಕರಿಗೆ ಹಾಗೂ ರೈತರಿಗೆ ಭರ್ಜರಿ ಆರ್ಥಿಕ ಲಾಭ ದೊರೆಯಲಿದೆ.ಮುದ್ದೇಬಿಹಾಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂಬುವುದರ ಬಗ್ಗೆ ಸರ್ಕಾರವನ್ನು ಒತ್ತಾಯಿಸುವ ಮೂಲಕ ಸದ್ಯ ರಾಜ್ಯಪಾಲರಿಂದ ಅನುಮೋದನೆಗೆ ಕಾರಣರಾದ ಶಾಸಕ ಅಪ್ಪಾಜಿ ನಾಡಗೌಡರ ಪರಿಶ್ರಮ ಹಾಗೂ ಸಾಮಾಜಿಕ ಜವಾಬ್ದಾರಿ ಶ್ಲಾಘನೀಯ.-ಮಲ್ಲನಗೌಡ ಬಿರಾದಾರ,
ಪುರಸಭೆ ಮುಖ್ಯಾಧಿಕಾರಿ.ಸದ್ಯ ಮುದ್ದೇಬಿಹಾಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ಗೊಂಡಿರುವುದು ತುಂಬಾ ಸಂತಸ ತಂದಿದೆ. ಇದರಿಂದ ಕಟ್ಟಡ ಪರವಾನಿಗೆ ಹೊಸದಾಗಿ ಲೇಔಟ್ ಮಾಡಲು ವಿಜಯಪುರಕ್ಕೆ ಹೋಗಬೇಕಿತ್ತು. ಇದರಿಂದ ಸಮಯವೂ ಸೇರಿದಂತೆ ಸಾಕಷ್ಟು ವೆಚ್ಚ ಭರಿಸಬೇಕಾಗಿತ್ತು. ಆದರೆ, ಸದ್ಯ ನೂತನ ವಾಗಿ ಮುದ್ದೇಬಿಹಾಳ ದಲ್ಲಿ ಟೌನ್‌ಪ್ಲ್ಯಾನ್ ಕಚೇರಿ ಪ್ರಾರಂಭಗೊಳ್ಳುತ್ತಿರುವುದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿ. ಇದಕ್ಕೆ ಕಾರಣರಾದ ಶಾಸಕರಾದ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಮುದ್ದೇಬಿಹಾಳ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.-ಪ್ರಭುರಾಜ ಕಲಬುರ್ಗಿ, ಅಧ್ಯಕ್ಷರು, ತಾಲೂಕು ವೀರಶೈವ ಲಿಂಗಾಯತ ಸಮಾಜ ಮುದ್ದೇಬಿಹಾಳ.