ಸಾರಾಂಶ
ಕೊಪ್ಪ: ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಶಾಸಕ ರಾಜೇಗೌಡ ಹೇಳಿದರುಪಟ್ಟಣದ ಬಸ್‌ನಿಲ್ದಾಣದ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ರಾಷ್ಟ್ರಪತಿ ಮತ್ತು ಸಂವಿಧಾನದ ಪ್ರತಿನಿಧಿ ಯಾಗಿ ರಾಜ್ಯಪಾಲರು ಕಾರ್ಯಚರಿಸಬೇಕೆ ಹೊರತು ಯಾವುದೇ ಪಕ್ಷದ ಕೈಗೊಂಬೆಯಾಗಬಾರದು ಮುಡಾ ಹಗರಣಕ್ಕೂ ಸಿದ್ಧರಾಮಯ್ಯನವರಿಗೂ ಸಂಬಧವೆ ಇಲ್ಲದೆ ಇದ್ದರು ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಿ ಸಿದ್ಧರಾಮಯ್ಯ ರಾಜೀನಾಮೆ ಕೇಳುತ್ತಿವೆ. ರಾಜ್ಯಪಾಲರು ಬಿಜೆಪಿಗರ ಮನವೊಲಿಸುವ ಪ್ರಯತ್ನ ಎಂಬಂತೆ ಅವಸರ ಅವಸರವಾಗಿಯೆ ವಿಚಾರಣೆಗೆ ಅನುಮತಿ ನೀಡಿ ಸಿದ್ಧರಾಮಯ್ಯ ನೇತೃತ್ವದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವಂತಿದೆ. ಇದನ್ನು ಮರುಪರಿಶೀಲನೆ ನಡೆಸ ಬೇಕೆಂದರು.ರಾಜ್ಯ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳ್ಳಿ ಮಾತಾನಾಡಿ ಪ್ರಕರಣ ಅಂದಿನ ಬಿಜೆಪಿ ಸರಕಾರದಲ್ಲೇ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಹಣಿಯಲು ರಾಜ್ಯಪಾಲರು ತನಿಖೆಗೆ ಆದೇಶಿಸಿರುವುದು ಖಂಡನೀಯ ಎಂದರು. ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಕಾಲದಲ್ಲಿ ನಡೆದ ಭ್ರಷ್ಟಾ ಚಾರಗಳನ್ನು ಮುಚ್ಚಿಹಾಕಿ ಈಗ ಸಿದ್ಧರಾಮಯ್ಯ ಅವರ ವಿರುದ್ಧ ಬೀದಿಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು