ಬಳ್ಳಾರಿ: ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ತಮ್ಮ ವಿಶಿಷ್ಟ ಕಲಾಸೃಷ್ಟಿಗಳ ಮೂಲಕ ಜನರ ಮನಸ್ಸಿನಲ್ಲಿ
ಶಾಶ್ವತ ಸ್ಥಾನ ಪಡೆದಿದ್ದು, ಅವರ ಕಲೆಯ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದು ಹಿರಿಯ ಚಿಂತಕ ಲೋಹಿಯಾ ಚನ್ನಬಸವಣ್ಣ ಹೇಳಿದರು.ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಹಾಗೂ ಸಂಸ್ಕಾರ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾನ-ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಜುನಾಥ ಗೋವಿಂದವಾಡ ಕೇವಲ ಚಿತ್ರಕಲಾವಿದರಲ್ಲ, ಸಮಾಜದ ನೋವು-ನಲಿವುಗಳನ್ನು ತಮ್ಮ ಕುಂಚದ ಮೂಲಕ ಅಭಿವ್ಯಕ್ತಗೊಳಿಸಿದ ಅಪರೂಪದ ಕಲಾವಿದರಾಗಿದ್ದರು ಎಂದು ಹೇಳಿದರು. ಕನ್ನಡ, ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಮಾತನಾಡಿದರು.ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ, ವೀವಿ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಮತ್ತಿತರರು ಗೋವಿಂದವಾಡ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಹಿರಿಯ ರಂಗಭೂಮಿ ಕಲಾವಿದೆ ಆದವಾನಿ ವೀಣಾ, ಬೆಳಗಲ್ಲು ವರಲಕ್ಷ್ಮಿ, ಹನುಮಂತ, ದೊಡ್ಡಯ್ಯ ಕಲ್ಲೂರು ಗವಾಯಿ, ದೊಡ್ಡಬಸವ ಗವಾಯಿ ಡಿ.ಕಗ್ಗಲ್, ನಾಗಭೂಷಣ ಗವಾಯಿ, ಹನುಮಯ್ಯ, ಚಿಗುರು ಕಲಾ ತಂಡದ ಹುಲುಗಪ್ಪ, ಹೇಮಂತ್, ಕಾಸೀಂ ವಲಿ ಸೇರಿದಂತೆ ವಿವಿಧ ಕಲಾವಿದರು ಗಾನ ನಮನ ಸಲ್ಲಿಸಿದರು.
ಸಂಸ್ಕಾರ ಭಾರತಿ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಹಿರಿಯ ನೃತ್ಯ ಕಲಾವಿದ ಜಿಲಾನಿಬಾಷಾ, ಬಯಲಾಟ ಕಲಾವಿದ ದೂತಪ್ಪ ಮಾಸ್ತರ್, ಕಲಾವಿದ ಮಹ್ಮದ್ ರಫೀ, ಲೇಖಕ ದಸ್ತಗೀರ್ ಸಾಬ್ ದಿನ್ನಿ, ಜೋಳದರಾಶಿ ಬಸವರಾಜ್, ಅಂಬರೇಷ್ ಹಚ್ಚೊಳ್ಳಿ, ಹಿರಿಯ ಕಲಾವಿದ ಪಾಂಡುರಂಗಪ್ಪ, ಸಿದ್ಧಲಿಂಗಸ್ವಾಮಿ ಮತ್ತಿತರರಿದ್ದರು. ತಿಪ್ಪೇಸ್ವಾಮಿ ಮುದ್ದಟನೂರು ಹಾರ್ಮೋನಿಯಂ ಸಾಥ್, ಯೋಗೀಶ್ ಸಂಗನಕಲ್ಲು, ಹರ್ಷ ಆಚಾರ್ ತಬಲಾ ಸಾಥ್ ನೀಡಿದರು. ಪ್ರಭುದೇವ ಕಪ್ಪಗಲ್ಲು ಕಾರ್ಯಕ್ರಮ ನಿರ್ವಹಿಸಿದರು.