ಹುಲಿಯೂರು ದುರ್ಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭ

| Published : Nov 24 2024, 01:46 AM IST

ಹುಲಿಯೂರು ದುರ್ಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಿಯೂರುದುರ್ಗ ಭಾಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುತ್ತದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಹುಲಿಯೂರುದುರ್ಗ ಭಾಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುತ್ತದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ ಸಮಿತಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಆಧುನಿಕತೆ ಬೆಳೆದಂತೆ ಗ್ರಾಮೀಣ ಮಕ್ಕಳು ಕೂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ಪೈಪೋಟಿ ಕೊಡುವ ಅನಿವಾರ್ಯತೆ ಉಂಟಾಗಿದೆ, ಅದಕ್ಕಾಗಿ ಪ್ರತಿ ಮಗು ತನ್ನದೇ ಆದ ತಂತ್ರಜ್ಞಾನವನ್ನ ಬಳಸಿಕೊಂಡು ಬೆಳೆಯುವ ಅನಿವಾರ್ಯತೆ ಇದೆ. ಕಂಪ್ಯೂಟರ ಸಾಮಾನ್ಯ ಜ್ಞಾನ, ಸಾಮಾಜಿಕ ಜಾಲತಾಣ ಇವುಗಳ ಪ್ರಭಾವ ಹೆಚ್ಚಾಗಿದ್ದು ಮನುಷ್ಯನ ಸ್ವಭಾವ ಗುಣದ ಜೊತೆಗೆ ಕೃತಕ ಬುದ್ಧಿಮತ್ತೆ ಬಳಕೆಯಿಂದ ಸ್ಪರ್ಧೆ ಬಹು ಕಷ್ಟವಾಗುತ್ತಿದೆ ಆದ್ದರಿಂದ ಪ್ರತಿ ಮಗುವಿಗೆ ಗರಿಷ್ಟ ತರಗತಿ ಮತ್ತು ಶಿಕ್ಷಣವನ್ನು ನೀಡುವ ಅನಿವಾರ್ಯತೆ ಇದೆ ಎಂದರು, ಸಿನಿಮಾ ಗೀತ ರಚನೆಕಾರರಾದ ವಿ. ನಾಗೇಂದ್ರ ಪ್ರಸಾದ್ ಮಾತನಾಡಿ ಶಿಕ್ಷಣ ಕೇವಲ ವಿಜ್ಞಾನಿಗಳು ತಂತ್ರಜ್ಞರು ವೈದ್ಯರು, ಎಂಜಿನಿಯರ್, ಶಿಕ್ಷಕರು, ವಕೀಲರುಗಳಂತಹ ಹುದ್ದೆಗಳನ್ನ ನಿರ್ಮಾಣ ಮಾಡುವ ಕೆಲಸದತ್ತ ಸಾಗುತ್ತಿದೆ ಇದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲೂ ಕೂಡ ಆಸಕ್ತಿ ಉಳ್ಳವರನ್ನು ಬೆಳೆಸುವ ಕೆಲಸ ಶಿಕ್ಷಣದಲ್ಲಿ ಜೊತೆಜೊತೆಗೆ ನಡೆಯಬೇಕಿದೆ. ಕಲೆ ಸಾಹಿತ್ಯ ಸಂಗೀತ ಇವುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಾಗ ದೇಶದ ಗೌರವ ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ, ಕುಣಿಗಲ್ ಮಾಜಿ ಶಾಸಕ ಬಿಬಿ ರಾಮಸ್ವಾಮಿಗೌಡ, ಸಹಾಯಕ ನಿರ್ದೇಶಕರು ಗುಬ್ಬಿಗೂಡು ರಮೇಶ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ, ತಾಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್ ಸೇರಿದಂತೆ ಹಲವಾರು ಜಿಲ್ಲೆಯ ವಿವಿಧಡೆಗಳಿಂದ ಬಂದಿದ್ದ ಹಲವಾರು ಅಧಿಕಾರಿಗಳು ಇದ್ದರು. ಆಕರ್ಷಣೆ ಮೆರವಣಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಸಾರ್ವಜನಿಕರನ್ನು ಆಕರ್ಷಣೆ ಮಾಡಿತು, ಹಳ್ಳಿ ಸೊಗಡನ್ನು ಬಿಂಬಿಸುವ ಮೂಲಕ ಎತ್ತಿನ ಗಾಡಿಯಲ್ಲಿ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆತರಲಾಯಿತು ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡದ ಬಾವುಟವನ್ನು ಹಿಡಿದು ಮೆರವಣಿಗೆಗೆ ಕನ್ನಡದ ಕಂಪು ತಂದರು.

ತಾಲೂಕಿನ ಹಲವಾರು ಕ್ಷೇತ್ರದ ಪರಿಚಯ ಮಾಡುವ ವಿವಿಧ ಶಬ್ದ ಚಿತ್ರಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಬಂದಿದ್ದ ಎಲ್ಲರಿಗೂ ರಾಗಿ ಮುದ್ದೆ ಅವರೆಕಾಳು ಸಾರು ನೀಡುವ ಮುಖಾಂತರ ಹಳ್ಳಿ ಸೊಬಗಿನ ಕಾರ್ಯಕ್ರಮ ನಡೆಯಿತು.