ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಡೆಸ್ಕ್ ವಿತರಣೆ

| Published : Jan 20 2024, 02:04 AM IST

ಸಾರಾಂಶ

ಯಾವುದಾದರೂ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೆ ನಮ್ಮ ಸಂಘದ ವತಿಯಿಂದ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ವೇತನ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮೂಗೂರು

ಮೂಗೂರಿನ ಕೆ.ಪಿ.ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ .ಸಿ. ಟ್ರಸ್ಟ್ ವತಿಯಿಂದ ಹಾಗೂ ದಾನಿಗಳ ಸಹಕಾರದಿಂದ ಡೆಸ್ಕ್ ವಿತರಿಸಲಾಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಉದ್ಘಾಟಿಸಿದರು. ಟ್ರಸ್ಟ್ ನ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಸಂಘದ ವತಿಯಿಂದ ಸದ್ಯಸರಿಗೆ ಸಾಲ ಕೊಟ್ಟು ಮರುಪಾವತಿ ಮಾಡುವುದೇ ಅಲ್ಲ ದುಶ್ಚಟಗಳ ವ್ಯಾಮೋಹ ಬಿಡಿಸುವುದು ಹಾಗೂ ಮದ್ಯಪಾನ ಬಿಡಸಿವ ಶಿಬಿರ ಹಾಗೂ ಇನ್ನಿತರ ಸಮಾಜ ಕಾರ್ಯವನ್ನು ಮಾಡುವತ್ತಿದ್ದೇವೆ ಎಂದು ಹೇಳಿದರು.

ಯಾವುದಾದರೂ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೆ ನಮ್ಮ ಸಂಘದ ವತಿಯಿಂದ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ವೇತನ ನೀಡಲಾಗುವುದು.

ತಾಲೂಕಿನಲ್ಲಿ ಈ ಬಾರಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಡೆಸ್ಕ್ ವಿತರಣೆಗೆ ನಮ್ಮ ಸಂಘದ ವತಿಯಿಂದ 3,18,000 ರೂಪಾಯಿ ಕೊಡಲಾಗಿದೆ. ದಾನಿಗಳ ಸಹಕಾರದಿಂದ 63,000 ರೂ. ನೀಡಿದ್ದಾರೆ ಎಂದರು.

ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಾಂಪೌಂಡ್ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಮತ್ತು ಗ್ರಾಮದಲ್ಲಿ ದೇವಾಲಯದ ಜೀರ್ಣೋದ್ಧಾರ ಹಾಗೂ ರೈತರಿಗೆ ನಮ್ಮಾರು ನಮ್ಮ ಕೆರೆ ಅಭಿವೃದ್ಧಿ ಹಾಗೂ ಇಂದ್ರ ರುದ್ರಭೂಮಿ ಅಭಿವೃದ್ಧಿ ಇನ್ನು ಹಲವಾರು ಬಗ್ಗೆ ಮಾಹಿತಿ ನೀಡಿದರು.

ಶಾಲೆಯ ಮೂಗೂರು ಹಿರಿಯ ಪ್ರಾಥಮಿಕ ಬಾಲಕರ ಹಾಗೂ ಬಾಲಕಿಯರ ಶಾಲೆಯ ವಿದ್ಯಾರ್ಥಿಗಳಿಗೆ 15 ಡೆಸ್ಕ್ ವಿತರಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು ಮಹೇಶ ಹಾಗೂ ಮೂಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹೇಶ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ, ಕೆ.ಪಿ.ಎಸ್ ಉಪಾಧ್ಯಕ್ಷ ಎಂ.ಎನ್. ಸೋಮಣ್ಣ, ಕಾಲೇಜು ಪ್ರಾಂಶುಪಾಲ ಮಹೇಶ, ಉಪ ಪ್ರಾಂಶುಪಾಲ ಪುಟ್ಟಸ್ವಾಮಿ, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ. ಶಿಕ್ಷಣ ಇಲಾಖೆ ಬಿ.ಆರ್.ಪಿ ಮಹದೇವಸ್ವಾಮಿ, ಮೂಗೂರು ಕುಮಾರಸ್ವಾಮಿ. ಸಿ.ಆರ್.ಪಿ ಶಿವರಾಜು, ಬಾಲು. ರಾಮನಾಥ್, ತೊಟ್ಟೇಶ, ಮಖ್ಹ ಶಿಕ್ಷಕಿ ಸಲೀನಾ, ಮುಖ್ಯ ಶಿಕ್ಷಕ ಕೃಷ್ಣೇಗೌಡ, ಸೇವಾಪ್ರತಿನಿಧಿ ಪುನೀತ್, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಇದ್ದರು.