ಸುಂಟಿಕೊಪ್ಪ: ಅದ್ಧೂರಿ ಕೃಷ್ಣಜನ್ಮಾಷ್ಟಮಿ ಆಚರಣೆ

| Published : Aug 25 2025, 01:00 AM IST

ಸಾರಾಂಶ

ಮೂರನೇ ವರ್ಷದ ಅದ್ದೂರಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಸುಮಾರು 90 ಮಕ್ಕಳು ಕೃಷ್ಣ ರಾಧೆ ಮತ್ತು ಯಶೋದೆಯ ವೇಷಧರಿಸಿದ್ದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಂಬಿಬಾಣೆ ಕಮಲ ನೆಹರು ಯುವತಿ ಮಂಡಳಿ ವತಿಯಿಂದ ಮೂರನೇ ವರ್ಷದ ಅದ್ಧೂರಿ ಕೃಷ್ಣಜನ್ಮಾಷ್ಟಮಿಯನ್ನು ಭಾನುವಾರ ಅನ್ನಪೂರ್ಣೇಶ್ವರಿ ಫಂಕ್ಷನ್ ಹಾಲ್‌ನಲ್ಲಿ ಆಚರಿಲಾಯಿತು.ಈ ಬಾರಿ ವಿಶೇಷವಾಗಿ ಕೃಷ್ಣ -ರಾಧೆ ಸ್ಪರ್ಧೆಗಳಲ್ಲಿ 6 ತಿಂಗಳಿನಿಂದ 2 ವರ್ಷದ ಮಕ್ಕಳಿಗೆ ಮುದ್ದು ಕೃಷ್ಣ, 3 ವರ್ಷದಿಂದ 5 ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ, 6 ವರ್ಷದಿಂದ 12 ವರ್ಷ ಮಕ್ಕಳಿಗೆ ತುಂಟ ಕೃಷ್ಣ ಸ್ಪರ್ಧೆ, ಅದೇ ರೀತಿಯಲ್ಲಿ 6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ರಾಧೆ, 6 ವರ್ಷದಿಂದ 12ವರ್ಷದ ಮಕ್ಕಳಿಗೆ ರಾಧ ಮಣಿ ಹಾಗೂ ಮಹಿಳೆಯರಿಗೆ ಯಶೋಧ ಸ್ಪರ್ಧೆ ನಡೆಯಿತು. ಅಲ್ಲದೇ 1 ವರ್ಷದಿಂದ 12 ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಲ ಯುವತಿ ಮಂಡಳಿಯ ಅಧ್ಯಕ್ಷೆ ವೀಣಾ ರಾಮಚಂದ್ರ ವಹಿಸಿದ್ದರು.ಸುಮಾರು 90 ಮಕ್ಕಳು ಕೃಷ್ಣ ರಾಧೇ ಮತ್ತು ಯಶೋದೆಯ ವೇಷವನ್ನು ಧರಿಸಿದ್ದರು. ಮಾತ್ರವಲ್ಲದೆ ಇತರ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ಧ್ವಿತಿಯ ಬಹುಮಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಯಿತು. ಕೊನೆಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಕಂಬಿಬಾಣೆ, ಅತ್ತೂರು ನಲ್ಲೂರು, ಚಿಕ್ಲಿಹೊಳೆ, ಕೊಡಗರಹಳ್ಳಿ, ಉಪ್ಪುತೋಡು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು ಈ ಸಂದರ್ಭ ಯುವತಿ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.