ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಗರದಲ್ಲಿ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯಿಂದ ಆಚರಿಸಲಾಗುವ ನವರಾತ್ರಿ ಉತ್ಸವ ಅದ್ದೂರಿಯಾಗಿದ್ದು, ಜನರನ್ನು ಆಕರ್ಷಿಸುವಲ್ಲಿ ವಿಶೇಷ ಖ್ಯಾತಿ ಪಡೆದಿದೆ ಎಂದು ಮಂಡಳಿಯ ಸಂಚಾಲಕ ಹಾಗೂ ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರ ರಾಜೇಶ ದೇವಗಿರಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯಿಂದ ಆಚರಿಸಲಾಗುವ ನವರಾತ್ರಿ ಉತ್ಸವ ಅದ್ದೂರಿಯಾಗಿದ್ದು, ಜನರನ್ನು ಆಕರ್ಷಿಸುವಲ್ಲಿ ವಿಶೇಷ ಖ್ಯಾತಿ ಪಡೆದಿದೆ ಎಂದು ಮಂಡಳಿಯ ಸಂಚಾಲಕ ಹಾಗೂ ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರ ರಾಜೇಶ ದೇವಗಿರಿ ಹೇಳಿದರು.ನಗರದ ಶಹಾಪೇಟಿ ಗಲ್ಲಿ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವರಾತ್ರಿ ಉತ್ಸವದಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ ಪಟ್ನಾಯಕ ಪಾಕಿಸ್ತಾನದಲ್ಲಿ ಕೈದಿಯಾಗಿರುವ ಸತ್ಪರ್ಜಿತ ಸಿಂಗ್ ತನ್ನ ಬಿಗುಗಡೆಗಾಗಿ ದೇವಿಯಲ್ಲಿ ಪ್ರಾರ್ಥಿಸುವ ದೃಶ್ಯವನ್ನು ಮರುಳಿನಲ್ಲಿ ರೂಪಿಸಲಾಗಿತ್ತು. ಹಾಗೂ ದೇಶದ ಯಾತ್ರಾ ಸ್ಥಳವಾಗಿರುವ ಅಮರಾನಾಥದ ಹಿಮಲಿಂಗ ದರ್ಶನ ಸ್ತಬ್ದ ರೂಪಕವನ್ನು ರೂಪಿಸಿ ಕರ್ನಾಟಕ ಅಸಂಖ್ಯಾತ ಭಕ್ತರ ಗಮನ ಸೆಳೆಯುವಲ್ಲಿ ಮಂಡಳಿಯು ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಈ ಮಂಡಳಿಯು ಬೆಳೆಯಲು ಓಣಿಯ ಗುರು-ಹಿರಿಯರು ಗಣ್ಯರು, ವ್ಯಾಪಾರಸ್ಥರು, ಲಾರಿ ಟ್ರಾನ್ಸಪೋರ್ಟ್ ಕಂಪನಿಗಳು ಸಂಘ ಸಂಸ್ಥೆಗಳ ಬೆಂಬಲ ಹಾಗೂ ಸ್ಪೂರ್ತಿಯೊಂದಿಗೆ ಹಾಗೂ ಮಂಡಳಿಯ ಪದಾಧಿಕಾರಿಗಳು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.ಜ್ಞಾನಯೋಗಾಶ್ರಮ ವ್ಯವಸ್ಥಾಪಕ ಬಸವಲಿಂಗ ಮಹಾಸ್ವಾಮೀಜಿ ಶಿಷ್ಯ ವೃಂದದೊಂದಿಗೆ ಗಾಯತ್ರಿ ಮಂತ್ರದೊಂದಿಗೆ ಪೂಜಿಸಿ ಆಚರಣೆಗೆ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಬ್ದುಲ ರಜಾಕ ಹೊರ್ತಿ, ಮಹಾನಗರ ಪಾಲಿಕೆ ಸದಸ್ಯ ಅಸೀಫ ಶಾನವಾಲೆ, ಶಫೀಕ ಮನಗೂಳಿ ಮುಂತಾದವರು ಇದ್ದರು.