ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಯಿತು. ಡಿಜೆ ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದು ಎಲ್ಲೆಡೆ ಕೇಸರಿಮಯವಾಗುವಂತೆ ಮಾಡಿತ್ತು.
- ಶ್ರೀರಾಮ, ಶ್ರೀ ಆಂಜನೇಯಸ್ವಾಮಿ ಬೃಹತ್ ಟ್ಯಾಬ್ಲೋಗಳ ಆಕರ್ಷಣೆ
- ಡಿಜೆಯೊಂದಿಗೆ ಜೈ ಶ್ರೀರಾಮ್ ಹಾಡಿಗೆ ಭಕ್ತರ ಭರ್ಜರಿ ಡ್ಯಾನ್ಸ್ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಯಿತು. ಡಿಜೆ ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದು ಎಲ್ಲೆಡೆ ಕೇಸರಿಮಯವಾಗುವಂತೆ ಮಾಡಿತ್ತು.ನಗರದ ಶಂಕರಮಠದ ಶ್ರೀ ಶನೇಶ್ವರ ದೇಗುಲದಿಂದ ಶೋಭಾಯಾತ್ರೆ ಶುರುವಾಯಿತು. ಮೆರವಣಿಗೆಯಲ್ಲಿ ಶ್ರೀರಾಮ, ಶ್ರೀ ಆಂಜನೇಯಸ್ವಾಮಿಯ ಬೃಹತ್ ಟ್ಯಾಬ್ಲೋಗಳು ಆಕರ್ಷಿಸಿದವು. ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಪೊಲೀಸ್ ಸರ್ಪಗಾವಲಿನಲ್ಲಿ ಶೋಭಾಯಾತ್ರೆ ಮುಂದುವರಿಯಿತು.
ಶೋಭಾಯಾತ್ರೆ ಸಮಯದಲ್ಲಿ ಡಿಜೆ ಸದ್ದಿಗೆ ಹನುಮ ಭಕ್ತರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಜೈ ಶ್ರೀರಾಮ್ ಹಾಡಿಗೆ ಭಕ್ತರ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಾ ಸಾಗಿದರು. ಕೇಸರಿ ಬಾವುಟ ಹಿಡಿದು ಯುವಕರು ಭರ್ಜರಿ ಸ್ಟೆಪ್ ಹಾಕಿದರು.ಮಂಡ್ಯದ ಹೊಳಲು ವೃತ್ತದ ಹಳೆ ಎಂ.ಸಿ. ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ಮೆರವಣಿಗೆ ಶ್ರೀ ಕಾಳಿಕಾಂಬ ದೇವಾಲಯವನ್ನು ತಲುಪಿತು. ಮುಂದೆ ಅಲ್ಲಿಂದ ಬೆಂಗಳೂರು-ಮೈಸೂರು ಹೆದ್ದಾರಿಗೆ ಆಗಮಿಸಿ ವಿಶ್ವೇಶ್ವರಯ್ಯ ರಸ್ತೆ, ನೂರಡಿ ರಸ್ತೆ, ಆರ್.ಪಿ.ರಸ್ತೆ, ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿ ಅಂತ್ಯಗೊಂಡಿತು.ಕೇಸರಿ ಬಾವುಟ, ಬಂಟಿಂಗ್ಸ್ ನಗರಸಭೆಯಿಂದ ತೆರವು
ಕನ್ನಡಪ್ರಭ ವಾರ್ತೆ, ಮಂಡ್ಯಶೋಭಾಯಾಯತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆದ್ದಾರಿಯುದ್ದಕ್ಕೂ ಅಳವಡಿಸಿದ್ದ ಕೇಸರಿ ಬಾವುಟ ಹಾಗೂ ಬಂಟಿಂಗ್ಸ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ಶೋಭಾಯಾತ್ರೆಗಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜಂಗಸೇನೆ ಕಾರ್ಯಕರ್ತರು ಹೆದ್ದಾರಿ ರಸ್ತೆಯುದ್ದಕ್ಕೂ, ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್‌ಗಳನ್ನು ಎಲ್ಲೆಡೆ ಅಳವಡಿಸಿ ಸಂಪೂರ್ಣ ಕೇಸರಿಮಯಗೊಳಿಸಿದ್ದರು.
ಬ್ಯಾನರ್, ಬಂಟಿಂಗ್ಸ್, ಕೇಸರಿ ಬಾವುಟ ಅಳವಡಿಕೆಗೆ ಅನುಮತಿ ಪಡೆದಿಲ್ಲವೆಂಬ ಕಾರಣಕ್ಕೆ ಬೆಳಗ್ಗೆಯೇ ನಗರಸಭೆ ಸಿಬ್ಬಂದಿ ಎಲ್ಲವನ್ನೂ ತೆರವುಗೊಳಿಸಿದರು. ಸಂಜೆ ಬೃಹತ್ ಶೋಭಾಯಾತ್ರೆ ನಡೆದರೂ ಕೇಸರಿಮಯ ವಾತಾವರಣ ಮಾಯವಾಗಿತ್ತು. ಬಂಟಿಂಗ್ಸ್, ಕೇಸರಿ ಬಾವುಟ ತೆರವಿಗೆ ಹಿಂದೂ ಕಾರ್ಯಕರ್ತರ ಬೇಸರಗೊಂಡರು. ಮಂಡ್ಯ ಜಿಲ್ಲಾ ಬಿಜೆಪಿಯಿಂದಲೂ ಅಧಿಕಾರಿಗಳ ನಡೆಗೆ ಖಂಡನೆ ವ್ಯಕ್ತವಾಯಿತು. 2ಕೆಎಂಎನ್‌ಡಿ-7ಮಂಡ್ಯದಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದಿಂದ ನಡೆದ ಶೋಭಾಯಾತ್ರೆಯ ದೃಶ್ಯ.2ಕೆಎಂಎನ್‌ಡಿ-8
ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟವನ್ನು ಹಾರಿಸುತ್ತಿರುವುದು.