ಕನ್ನಡಪ್ರಭ ವಾರ್ತೆ ಮದ್ದೂರು

ನಾಲ್ಕನೇ ಬಾರಿ ಸಚಿವರಾಗಿ ಸ್ವಕ್ಷೇತ್ರ ನಾಗಮಂಗಲಕ್ಕೆ ತೆರಳುತ್ತಿದ್ದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕ್ಷೇತ್ರ ವ್ಯಾಪ್ತಿಯ ತಾಲೂಕು ಕೊಪ್ಪಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.

ಬೆಂಗಳೂರಿನಿಂದ ನೆಲ್ಲಿಗೆರೆ ಟೋಲ್ ಬಳಿ ಆಗಮಿಸಿದ ಸಚಿವರಿಗೆ ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ನೇತೃತ್ವದಲ್ಲಿ ನೆರೆದಿದ್ದ ಹೋಬಳಿಯ ನೂರಾರು ಕಾರ್ಯಕರ್ತರು ಮೋಸಂಬಿ, ಸೇಬು, ಮುಸುಕಿನ ಜೋಳ ಮತ್ತು ಬೆಲ್ಲದ ಹಾರದೊಂದಿಗೆ ಮಾಲಾರ್ಪಣೆ ಮಾಡಿ ಭವ್ಯ ಸ್ವಾಗತ ನೀಡಿದರು.

ನಂತರ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಬೈಕ್ ರ್‍ಯಾಲಿ ನಡೆಸಿದರು. ಮಾರ್ಗ ಮಧ್ಯ ಬರುವ ಗ್ರಾಮಗಳಲ್ಲಿ ಮಹಿಳೆಯರು ಸಚಿವ ಚಲುವರಾಯಸ್ವಾಮಿ ಅವರಿಗೆ ಆರತಿ ಬೆಳಗಿ ಶುಭಕೋರಿದರು.

ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮಾಜಿ ಅಧ್ಯಕ್ಷ ಕೆ.ಸಿ.ಜೋಗಿ ಗೌಡ, ನಿರ್ದೇಶಕ ದಿನೇಶ್‌, ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಮುಖಂಡರಾದ ಲಕ್ಷ್ಮಿಕಾಂತ್, ಅಪ್ಪಾಜಿಗೌಡ, ಸುನಿಲ್, ಮೂಡ್ಲಿಗೌಡ, ನರಸಿಂಹಮೂರ್ತಿ, ದಿನೇಶ್, ರಾಜೇಶ್ ಸೇರಿದಂತೆ ಹಲವಾರು ಸಚಿವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.