ಸಾರಾಂಶ
ಕಳ್ಳಿಕೊಪ್ಪ ಕ್ರೀಡಾಂಗಣಕ್ಕೆ ಈಗಾಗಲೇ ವೈಯ್ಯಕ್ತಿಕವಾಗಿ ಸಹಾಯ ಧನ ನೀಡಿದ್ದು ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲೂ ಸಹಾಯ ನೀಡುತ್ತೇನೆ ಎಂದು ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
- ಲೀಗ್ - ನಾಕ್ ಔಟ್ ಮಾದರಿ ಕ್ರಿಕೆಟ್ ಪಂದ್ಯಾವಳಿ ಸಮಾರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಳ್ಳಿಕೊಪ್ಪ ಕ್ರೀಡಾಂಗಣಕ್ಕೆ ಈಗಾಗಲೇ ವೈಯ್ಯಕ್ತಿಕವಾಗಿ ಸಹಾಯ ಧನ ನೀಡಿದ್ದು ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲೂ ಸಹಾಯ ನೀಡುತ್ತೇನೆ ಎಂದು ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
ಭಾನುವಾರ ಸಂಜೆ ಕಳ್ಳಿಕೊಪ್ಪ ಪ್ರೆಂಡ್ಸ್ ಕಳ್ಳಿಕೊಪ್ಪದ ಆಟದ ಮೈದಾನದಲ್ಲಿ ಆಯೋಜಿಸಿದ್ದ 2 ದಿನಗಳ ಲೀಗ್ ಮತ್ತು ನಾಕ್ ಔಟ್ ಮಾದರಿ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಯುವಕರು ಕ್ರೀಡೆ, ಕಲೆ,ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ತೊಡಗಿಸಿಕೊಂಡರೆ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು.ಇದರಿಂದ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ. ಈ ಕ್ರೀಡಾಂಗಣದ ಸುತ್ತ ಮರ, ಗಿಡಗಳನ್ನು ನೆಟ್ಟರೆ ವಾತಾವರಣ ತಂಪಾಗಿರಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಬಿಳಾಲು ಮನೆ ಉಪೇಂದ್ರ, ಬಿ.ಎಸ್.ಸುಬ್ರಮಣ್ಯ ಕೆ.ಎಂ.ಸುಂದರೇಶ್, ಮಾಳೂರು ದಿಣ್ಣೆ ರಮೇಶ್, ಇ.ಸಿ.ಜೋಯಿ, ಸಂಜಯ್, ಹರ್ಷ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ್ದ ಪ್ರೆಂಡ್ಸ್ ಕ್ರಿಕೆಟರ್ಸ ನ ಮುಖ್ಯಸ್ಥರಾದ ಬಿಬಿನ್, ಮಣಿ, ಶಶಿ ಇದ್ದರು.
ಶನಿವಾರ ಹಾಗೂ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ರೆಬಲ್ ಕ್ರಿಕೆಟರ್ಸ್ ಪ್ರಥಮ, ಅಜಿತ್ ಬಾಯ್ಸ್ ತಂಡ ದ್ವಿತೀಯ, ವಿರಾಟ್ ಕ್ರಿಕೆಟರ್ಸ ತೃತೀಯ ಬಹುಮಾನ ಹಾಗೂ ನರಸಿಂಹರಾಜಪುರ ಕಿಕೆಟರ್ಸ್ ತಂಡ 4 ನೇ ಬಹುಮಾನ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರೆಬಲ್ ಕ್ರಿಕೆಟರ್ಸ ನ ನಟೇಶ್ ಪಡೆದುಕೊಂಡರು. ಅಭಿನವ ಗಿರಿರಾಜ್ ಕಾರ್ಯಕ್ರಮ ನಿರ್ವಹಿಸಿದರು.