ಲಯನ್ಸ್ ಕಣ್ಣಿನ ಆಸ್ಪತ್ರೆ ಅಭಿವೃದ್ಧಿಗೆ ಅನುದಾನ ನೀಡುವೆ: ಶಾಸಕ ಪಟ್ಟಣ

| Published : Jul 16 2024, 12:32 AM IST

ಲಯನ್ಸ್ ಕಣ್ಣಿನ ಆಸ್ಪತ್ರೆ ಅಭಿವೃದ್ಧಿಗೆ ಅನುದಾನ ನೀಡುವೆ: ಶಾಸಕ ಪಟ್ಟಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಮದುರ್ಗ: ಬಡವರ ಅನುಕೂಲಕ್ಕಾಗಿ ಲಯನ್ಸ್ ಸಂಸ್ಥೆ ಆರಂಭಿಸಿರುವ ಕಣ್ಣಿನ ಆಸ್ಪತ್ರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ವಿವಿಧ ಮೂಲಗಳಿಂದ ₹50 ಲಕ್ಷ ಅನುದಾನ ಒದಗಿಸುವ ಮೂಲಕ ಆಸ್ಪತ್ರೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಿಸುವುದಾಗಿ ಸರ್ಕಾರದ ಮುಖ್ಯಸಚೇತಕ, ಶಾಸಕ ಅಶೋಕ ಪಟ್ಟಣ ಹೇಳಿದರು.

ಲಯನ್ಸ್ ಸಂಸ್ಥೆಯ ಪ್ಯಾರಿಬಾಯಿ ಪಾಲರೇಶ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಲಯನ್ಸ್ ಕ್ಲಬ್‌ನ ೨೦೨೪-೨೫ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಪರಿಸರ ಜಾಗೃತಿ ಸೇರಿದಂತೆ ಜಾಗೃತಿ ಮೂಡಿಸುವ ಕೆಲಸ ಮಾಡುವ ಲಯನ್ಸ್ ಸಂಸ್ಥೆ ಕಣ್ಣಿನ ಆಸ್ಪತ್ರೆ ನಿರಂತರ ಕಾರ್ಯನಿರ್ವಣೆ ಮಾಡುವ ಮೂಲಕ ಜನರಿಗೆ ದೃಷ್ಟಿ ನೀಡುವ ಕೆಲಸ ಮಾಡಲಿ ಎಂದರು.ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪ್ರಭಾಕರ ಕಂಬಾರ ಮಾತನಾಡಿ, ತಿಂಗಳಲ್ಲಿ ಕನಿಷ್ಠ ಎರಡು ದಿನ ಹುಬ್ಬಳ್ಳಿಯ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರಲು ವ್ಯವಸ್ಥೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸದಸ್ಯರ ಮತ್ತು ಜನರ ಸಹಕಾರದಿಂದ ಕೆಲಸ ಮಾಡುವುದಾಗಿ ಹೇಳಿದರು. ಪದಗ್ರಹಣ ಕಾರ್ಯ ನಿರ್ವಹಿಸಿದ ಲಯನ್ಸ್ ಸಂಸ್ಥೆ ವಲಯ ಸಂಚಾಲಕಿ ಭಾರತಿ ವಡವಿ, ಸಾಹಿತಿ ಜ್ಯೋತಿ ಬದಾಮಿ ಮಾತನಾಡಿದರು. ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬಣ್ಣಾ ಪತ್ತೆಪೂರ, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಜಾಯಿ, ಗಂಗಾಧರ ಕಮ್ಮಾರ, ಹಾಗೂ ಇತರರು ವೇದಿಕೆಯ ಮೇಲೆ ಇದ್ದರು. ವೈಶಾಲಿ ಹಿರೇರಡ್ಡಿ ನಿರೂಪಿಸಿದರು, ವೈಶಾಲಿ ಸಂಕನಗೌಡ್ರ ವಂದಿಸಿದರು.