ಫೆ.20ರಂದು ಅದ್ಧೂರಿ ಮಹಾಕವಿ ಸರ್ವಜ್ಞ ಜಯಂತಿ

| Published : Feb 04 2024, 01:30 AM IST

ಸಾರಾಂಶ

ಸರ್ವಜ್ಞನವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಹಿಸಲಾದ ಕೆಲಸ-ಕಾರ್ಯ ಅಚ್ಚುಕಟ್ಟಾಗಿ, ಯಾವುದೇ ಲೋಪ ಆಗದಂತೆ ಜವಾಬ್ದಾರಿಯಿಂದ ನಿರ್ವಹಿಸಲು ಅಧಿಕಾರಿಗಳಿಗೆ ಅಪರ ಡಿಸಿ ಸೂಚಿಸಿದರು.

ಯಾದಗಿರಿ:

ಜಿಲ್ಲಾಡಳಿತ ವತಿಯಿಂದ ಮಹಾಕವಿ ಸರ್ವಜ್ಞನವರ ಜಯಂತ್ಯುತ್ಸವವನ್ನು ಜಿಲ್ಲೆಯಾದ್ಯಂತ ಫೆ.20ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅಧ್ಯಕ್ಷತೆಯಲ್ಲಿ ನಡೆದ ಮಹಾಕವಿ ಸರ್ವಜ್ಞನವರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ನಗರದ ವಿದ್ಯಾಮಂಗಲ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯುವ ಜಿಲ್ಲಾಮಟ್ಟದ ಸರ್ವಜ್ಞನವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಹಿಸಲಾದ ಕೆಲಸ-ಕಾರ್ಯ ಅಚ್ಚುಕಟ್ಟಾಗಿ, ಯಾವುದೇ ಲೋಪ ಆಗದಂತೆ ಜವಾಬ್ದಾರಿಯಿಂದ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಯಂತಿ ಆಚರಣೆ ಸಂದರ್ಭದಲ್ಲಿ ಶಿಷ್ಠಾಚಾರ ಪಾಲನೆ, ಅತಿಥಿ ಗಣ್ಯರ, ನುರಿತ ಉಪನ್ಯಾಸಕರ ಆಹ್ವಾನಿಸುವುದು ಸೇರಿ ಎಲ್ಲಾ ರೀತಿಯ ಸೌಕರ್ಯವನ್ನು ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಬೇಕು. ಅದೇ ರೀತಿ ವೇದಿಕೆ, ಕುಡಿವ ನೀರು, ವಿದ್ಯುತ್, ಅಲಂಕಾರ, ಧ್ವನಿವರ್ಧಕ, ಸ್ವಚ್ಛತೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಮಾಜದ ಮುಖಂಡರಾದ ದೇವಿಂದ್ರಪ್ಪ ದರ್ಶನಾಪೂರ, ಬಸವರಾಜ ಗುರುಮಿಠಕಲ್, ಶಿವಶರಣಪ್ಪ ಕುಂಬಾರ ಯಾದಗಿರಿ, ರಮೇಶ ಬದ್ದೆಪಲ್ಲಿ, ದೇವಿಂದ್ರಪ್ಪ ಯರಗೋಳ, ನರಸಪ್ಪ ಸೌರಾಷ್ಟ್ರಹಳ್ಳಿ, ಹಣಮಂತ ಮೊಗದಂಪುರ, ಗುರುಬಸಲಿಂಗಪ್ಪ, ಮಲ್ಲಿಕಾರ್ಜುನ ಗುಂಡಳ್ಳಿ, ರವಿಕುಮಾರ ಗುರುಮಿಠಕಲ್, ಶಿಕ್ಷಕರಾದ ರಾಜೇಂದ್ರ, ಮಹೇಶ ಗುಂಡಳ್ಳಿ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.