ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಭಾರತದಲ್ಲಿ ಶಿಕ್ಷಣ ಕ್ಷೇತ್ರ ತನ್ನದೇಯಾದ ಜವಾಬ್ದಾರಿ, ಗೌರವ ಕಾಪಾಡಿಕೊಂಡು ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕಡಿಮೆಯಾದರೇ ಇಡಿ ಭವ್ಯ ಭಾರತಕ್ಕೆ ಬಹುದೊಡ್ಡ ನಷ್ಟ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಮಟ್ಟದ ಗಣಿತ ವಿಷಯದ ಶೈಕ್ಷಣಿಕ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ದೇಶದ ಆಸ್ತಿ ಎಂದರೆ ಅದು ಸುಶಿಕ್ಷಿತ ಮಕ್ಕಳು, ಮಕ್ಕಳಲ್ಲಿನ ಬಹುಮುಖ ಪ್ರತಿಭೆಯನ್ನು ಹೊರತೆಗೆಯುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಗಣಿತ ವಿಷಯ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದೆ. ಶಿಕ್ಷಕರಿಗೆ ಮಕ್ಕಳಿಗೆ ತಿಳಿಯುವ ಪದ್ಧತಿಯಲ್ಲಿ ಹೇಳಿದಾಗ ಸರಳವಾಗುತ್ತದೆ. ಸರಳವಾಗಿಸುವುದೇ ಈ ಕಾರ್ಯಗಾರದ ಉದ್ದೇಶ. ಶಿಕ್ಷಕರಾದವರು ಮಾನವೀಯತೆಯಿಂದ ವರ್ತಿಸಿ ಉತ್ತಮ ಪ್ರಜೆಗಳನ್ನು ರೂಪಿಸುವ ವ್ಯವಸ್ಥೆ ಹೊಂದಿರಬೇಕು ಎಂದು ಸಲಹೆ ನೀಡಿದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಮಾತನಾಡಿ, ನಮ್ಮ ದೇಶ ಯಾವುದೇ ವಿಷಯದಲ್ಲೂ ಹಿಂದಿಲ್ಲ. ಜಗತ್ತಿಗೆ ಶೂನ್ಯವನ್ನು ಕೊಡುಗೆಯನ್ನಾಗಿ ಕೊಟ್ಟಿದ್ದು ನಮ್ಮ ದೇಶ. ಸಹ ಶಿಕ್ಷಕರು ತಮ್ಮ ವೃತ್ತಿಗೆ ನ್ಯಾಯವನ್ನು ಕೊಡುವುದರ ಜೊತೆಗೆ ಸಂಘಟನೆಯ ಉದ್ದೇಶಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿರುವ ಏಕೈಕ ಸಂಘಟನೆ ಅದು ಪ್ರೌಢಶಾಲಾ ಸಹಶಿಕ್ಷಕರ ಸಂಘ. ಶೀಘ್ರದಲ್ಲಿ ಎನ್‌ಪಿಎಸ್ ರದ್ದಾಗಿ ಒಪಿಎಸ್ ಮರು ಪ್ರಾರಂಭವಾಗಲಿದೆ ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರ ನಿಲಜಗಿ, ರಾಜ್ಯ ಉಪಾಧ್ಯಕ್ಷ ಎಂ.ಕೆ.ಬಿರಾದಾರ ಅವರು ಗಣಿತ ವಿಷಯದ ಕುರಿತು ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ ಬಾಗೆನ್ನವರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಈ ವೇಳೆ ತಾಲೂಕು ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತು. ಹಲವಾರು ಜನ ಶಿಕ್ಷಕರು ಕಾರ್ಯಗಾರದಲ್ಲಿ ಗಣಿತ ವಿಷಯದ ಆಸಕ್ತ ವಿಷಯಗಳನ್ನು ಹಂಚಿಕೊಂಡರು.ಈ ವೇಳೆ ಸಂದೀಪ ಬೆಳಗಲಿ, ಎ.ಸಿ.ಗಂಗಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ, ವಿ.ಎಸ್.ಕಾಂಬಳೆ, ಎಚ್.ಎಸ್.ಕಾಡೆ, ಮಮತಾ ಶಿಂಧೆ, ಮಲ್ಲೇಶ ತುಗಶೆಟ್ಟಿ, ರೇಣುಕಾ ಬಡಕಂಬಿ, ಎಸ್.ಎಂ.ರಾಠೋಡ, ಸುನೀಲ ದಾದಾಗೋಳ, ಶಿರೀಶ ಕುಲಕರ್ಣಿ, ಪವಾಡೆಪ್ಪ ಕಾಂಬಳೆ, ಸಿ.ಜೆ.ಗಸ್ತಿ, ಸಿ.ಎಂ.ಕಾಂಬಳೆ, ಎ.ಎಚ್.ಮುಲ್ಲಾ, ವಿಶ್ವನಾಥ ಸೂರ್ಯವಂಶಿ, ಎಂ.ಎ.ತುಗಶೆಟ್ಟಿ, ಸುರೇಶ ಅಥಣಿ, ನಾಗಪ್ಪ ಉಗಾರ, ಅನಿಲ ಗಸ್ತಿ, ವಿ ಬಿ ಮೇತ್ರಿ, ಎಸ್.ಎ.ಸಲಗರೆ, ಅಮಗೊಂಡ ಬೇರಡ, ರಾಮಗೊಂಡ ಪಾಟೀಲ, ಎಸ್.ಎಂ.ರಾಠೋಡ ಸೇರಿದಂತೆ ಅನೇಕರಿದ್ದರು. ಸುರೇಶ ಅಥಣಿ ನಿರೂಪಿಸಿದರು. ನಾಗಪ್ಪ ಉಗಾರೆ ಸ್ವಾಗತಿಸಿದರು.