ಸಾರಾಂಶ
ಜನರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯನಿರ್ವಹಿವೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಜನರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯನಿರ್ವಹಿವೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ನಗರದ ಶ್ರೀಲಕ್ಷ್ಮೀದೇವಿ ಪಾದಗಟ್ಟಿ ಸೇವಾ ಸಮಿತಿ ಹಾಗೂ ಮಹಿಳಾ ಮಂಡಳದಿಂದ ಮಂಗಳವಾರ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ತಂದೆ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡುತ್ತೇನೆ. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ವೀರುಪಾಕ್ಷಿ ಮಿರ್ಜಿ, ಜಯಾ ಕಮತ, ಎಂ.ಎಸ್.ಹಿತ್ತಲಮನಿ, ಮಹಾದೇವ ಕೌಜಲಗಿ, ದುಂಡಪ್ಪ ಪರುಶೆಟಿ, ಫಕೀರಪ್ಪ ಹಿತ್ತಲಮನಿ, ಕರುಣಸಾಗರ ಪ್ಯಾಟಿ, ಡಾ.ಸಿದ್ದಣ್ಣ ಕಮತ, ಸೂರಜ ಪಾಟೀಲ, ಪ್ರಮೋದ ಅಂಗಡಿ, ರಾಜೇಶ್ವರಿ ಕಲಬುರ್ಗಿ, ಗೀತಾ ವಸ್ತ್ರದ, ಸುಶೀಲಾ ಕಲ್ಯಾಣಶೆಟ್ಟಿ, ಸವಿತಾ ಕಲಬುರ್ಗಿ, ರಜನಿ ಜೀರಗ್ಯಾಳ, ಶಿವಲೀಲಾ ಪಾಟೀಲ, ಡಾ.ಶ್ರೀದೇವಿ ಪೂಜಾರಿ ಸೇರಿದಂತೆ ಅನೇಕರು ಇದ್ದರು.