ಸಾರಾಂಶ
ಬೀರೂರು, ದೀಪಾವಳಿ ಹಬ್ಬ ಆಚರಣೆ ಹಿನ್ನಲೆಯಲ್ಲಿ ಅಂಗಡಿಗಳ ಬಳಿ ತೆರಳಿ ಮುಂಜಾಗ್ರತ ಕ್ರಮವಾಗಿ ಪಟ್ಟಣದ ಗಣಪತಿ ಪೆಂಡಾಲ್ ನಲ್ಲಿ ವರ್ತಕರು ಹಾಕಿದ್ದ ಪಟಾಕಿ ಅಂಗಡಿಗಳನ್ನು ಗುರುವಾರ ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ,ಬೀರೂರು.
ದೀಪಾವಳಿ ಹಬ್ಬ ಆಚರಣೆ ಹಿನ್ನಲೆಯಲ್ಲಿ ಅಂಗಡಿಗಳ ಬಳಿ ತೆರಳಿ ಮುಂಜಾಗ್ರತ ಕ್ರಮವಾಗಿ ಪಟ್ಟಣದ ಗಣಪತಿ ಪೆಂಡಾಲ್ ನಲ್ಲಿ ವರ್ತಕರು ಹಾಕಿದ್ದ ಪಟಾಕಿ ಅಂಗಡಿಗಳನ್ನು ಗುರುವಾರ ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್ ಪರಿಶೀಲನೆ ನಡೆಸಿದರು.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬೆಳಕಿನ ಹಬ್ಬ ದೀಪಾವಳಿಗೆ ಜಿಲ್ಲಾಧಿಕಾರಿ ಕೇವಲ ಎರಡು ದಿನ ಮಾತ್ರ ಪಟಾಕಿ ಮಾರುವಂತೆ ಅನುಮತಿ ನೀಡಿದ್ದಾರೆ. ಅಂಗಡಿ ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಪಟಾಕಿ ಅನಾಹುತಗಳು ಸಂಭವಿಸದಂತೆ ಏನೇನು ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದಾರೆಂದು ಪರಿಶೀಲಿಸಲಾಗಿದೆ. ಅದರಂತೆ ಅಂಗಡಿಯವರ ಮಾಹಿತಿಯನ್ನು ಈಗಾಗಲೇ ಪಡೆದಿದ್ದು ಯಾವುದೇ ಅನಾಹುತಗಳು ಆಗದಂತೆ ಎಚ್ಚರಿಸಲಾಗಿದೆ ಎಂದರು.ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿ ಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿಮಾಡಿಕೊಳ್ಳುವುದೇ ದೀಪಾವಳಿ ಆಚರಣೆಯಾಗಿದೆ ಎಂದರು.ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್ ಮಾತನಾಡಿ, ಸರ್ಕಾರ ಕಡ್ಡಾಯವಾಗಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುವಂತೆ ಸೂಚಿಸಿದ ಹಿನ್ನಲೆಯಲ್ಲಿ ವರ್ತಕರು ಸಹ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾತ್ರಿ 10ಗಂಟೆ ನಂತರ ಯಾರು ಪಟಾಕಿ ಸಿಡಿಸಬಾರದು. ಜೊತೆಗೆ ಪಟಾಕಿ ಹಚ್ಚುವವರು ಸುರಕ್ಷತಾ ಕ್ರಮ ಅನುಸರಿಸಿ ಹಚ್ಚಿರಿ, ಯಾವುದೇ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದರು.31 ಬೀರೂರು 1ಬೀರೂರಿನ ಗಣಪತಿ ಪೆಂಡಾಲ್ ನಲ್ಲಿ ವರ್ತಕರು ಹಾಕಿದ್ದ ಪಟಾಕಿ ಅಂಗಡಿಗಳನ್ನು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಮತ್ತು ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಪರಿಶೀಲನೆ ನಡೆಸಿದರು.