ಸಾರಾಂಶ
ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿ ಸ್ಟೇಟಸ್ ಇಟ್ಟಿದ್ದ ಯುವಕನನ್ನುಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ: ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿ ಚಿತ್ರವನ್ನು ವಾಟ್ಸಪ್ ಸ್ಟೇಟಸ್ ಇಡುವ ಮೂಲಕ ಕಿಡಿಗೇಡಿತನ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಅಟ್ಟಿದ್ದಾರೆ.
ತಾಲೂಕಿನ ತಡಕೋಡ ಗ್ರಾಮದ ಸದ್ದಾಂಹುಸೇನ್ ಇಸ್ಮಾಯಿಲ್ ಸಾಬ್ ನದಾಫ್ ಎಂಬಾತ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿ ''''''''ಇಸ್ಲಾಮಿಕ್ ಪವರ್ ತೋರಿಸುತ್ತೇವೆ'''''''' ಎಂದು ಓವೈಸಿ ಭಾವಚಿತ್ರ ಸಮೇತ ಎರಡು ದಿನಗಳ ಹಿಂದೆ ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದನು. ಇದನ್ನು ಗಮನಿಸಿದ ಗರಗ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದು ಸದ್ಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.ಯುವಕನ ವಿರುದ್ಧ ಶ್ರೀರಾಮ ಸೇನೆ ಆಕ್ರೋಶ ವ್ಯಕ್ತಪಡಿಸಿದ್ದು, ಯುವಕನ ಮನೆಗೆ ಹೋಗಿ ಆಯೋಧ್ಯೆಗೆ ಬರಲು ಆಮಂತ್ರಣ ನೀಡಲು ತೀರ್ಮಾನಿಸಿದೆ. ಜ. 30ರಂದು ತಡಕೋಡ ಗ್ರಾಮಕ್ಕೆ ತೆರಳಲು ಶ್ರೀರಾಮ ಸೇನೆ ನಿರ್ಧಾರ ಮಾಡಿದ್ದು, ನಾವೇ ಖರ್ಚು ಕೊಟ್ಟು ಅಯೋಧ್ಯೆಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿಗೆ ಬಂದು ಹಸಿರು ಧ್ವಜ ಹಾರಿಸು ಎಂದು ಶ್ರೀರಾಮ ಸೇನೆಯ ಮುಖಂಡ ಗಂಗಾಧರ ಕುಲಕರ್ಣಿ ಸವಾಲು ಹಾಕಿದ್ದಾರೆ.