ಕನ್ನಡಪ್ರಭ ವಾತೆ ಶಿರಾ ಮಾಜಿ ಉಪಪ್ರಧಾನಿ ಡಾ. ಬಾಬುಜಗಜೀವನ್ ರಾಮ್ ಅವರು ದೇಶ ಕಂಡಂತಹ ಅಪ್ರತಿಮ ದೇಶ ಪ್ರೇಮಿ, ಆಡಳಿತಗಾರ ಹಾಗೂ ಹಸಿರು ಕ್ರಾಂತಿಯ ಹರಿಕಾರಾಗಿದ್ದರು. ಇದರಿಂದಲೇ ದೇಶದಲ್ಲಿ ಆಹಾರ ಮತ್ತು ಕೃಷಿ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಹೊಂದಲು ಸಾಧ್ಯವಾಯಿತು ಎಂದು ತಹಸೀಲ್ದಾರ್ ಆನಂದ್ ಕುಮಾರ ಹೇಳಿದರು. ನಗರದ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಮ್ ರವರ ೧೧೯ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಡಾ. ಬಾಬು ಜಗಜೀವನ್ ರಾಮ್ ಅವರು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಭಟನೆ ಹಾಗೂ ಸ್ವಾಭಿಮಾನವನ್ನು ಮೈಗೂಡಿಸಿಕೊಂಡಿದ್ದರು. ಇದರಿಂದಲೇ ಅವರು ದಲಿತರಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸಫಲರಾಗಿದ್ದರು. ಬಾಬು ಜಗಜೀವನ್ ಅವರು ಕಾರ್ಮಿಕ, ರೈಲ್ವೆ ಹಾಗೂ ಕಷಿ ಸಚಿವರಾಗಿ ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ಕಾಲ ಶಾಸಕರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ್ದರು. ದೇಶಕ್ಕೆ ಬರಗಾಲ ಎದುರಾಗಿದ್ದ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರ ಹಿನ್ನೆಲೆಯಲ್ಲಿ ದೇಶದಲ್ಲಿ ಕೃಷಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಅದರಿಂದಲೇ ಬಾಬು ಜಗಜೀವನ ರಾಂ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲಾಗುತ್ತಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ.ಬಡಿಗೇರ ಮಾತನಾಡಿ ಡಾ. ಬಾಬು ಜಗಜೀವನ್ ಅವರು ಬಡತನದಲ್ಲಿ ಹುಟ್ಟಿ ಉನ್ನತ ಸ್ಥಾನವನ್ನು ಅಲಂಕರಿಸಿದ ಅವರು ತಮ್ಮ ಬಾಲ್ಯದಿಂದಲೇ ಶೋಷಣೆ ಮುಕ್ತ ಸಮಾಜವನ್ನು ರಚನೆ ಮಾಡುವಲ್ಲಿ ಹೋರಾಡಿದವರು. ದೃಢ ನಿರ್ಧಾರ, ಆದರ್ಶ ಹೆಜ್ಜೆಗಳು, ದೂರದಷ್ಟಿಕೋನದಿಂದ ದೇಶದ ಅಭಿವದ್ಧಿಗೆ ಶ್ರಮಿಸಿದವರು. ಹಿಂದುಳಿದ ಜನರನ್ನು ಮೇಲೆತ್ತಲು, ದಲಿತ, ಶೋಷಿತ ಜನಾಂಗದ ಶ್ರೇಯೋಭಿವೃದ್ಧಿಗೆ ಸೇವೆ ಸಲ್ಲಿಸಿದ್ದರು ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪೌರಾಯುಕ್ತ ರುದ್ರೇಶ.ಕೆ, ನಗರಸಭಾ ಸದಸ್ಯ ಅಜಯ್ ಕುಮಾರ, ಎಸ್ಎಸ್, ಇಓ ಹರೀಶ.ಆರ್, ವಲಯ ಅರಣ್ಯಾಧಿಕಾರಿ ನವನೀತ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್, ಪಿಡಬ್ಲ್ಯೂಡಿ ಎಇಇ ರಮೇಶ, ಸಿಡಿಪಿಒ ಹರಿಪ್ರಸಾದ, ಹಿಂದುಳಿದ ವರ್ಗಗಳ ಇಲಾಖೆಯ ಶಶಿಧರ, ಸಮಾಜ ಕಲ್ಯಾಣ ಇಲಾಖೆಯ ಹನುಮಂತರಾಜು, ಹರೀಶ, ದಸಂಸ ತಾಲೂಕು ಅಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಗಜಮಾರನಹಳ್ಳಿ ನಾಗರಾಜು, ಮುಖಂಡರಾದ ಮಾಗೋಡು ಯೋಗಾನಂದ ಎಸ್ ಆರ್.ರಂಗನಾಥ., ಧರಣಿ ಕುಮಾರ, ಭಾರತೀಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರವಿ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಹಸಿರು ಕ್ರಾಂತಿಯ ಹರಿಕಾರ ಬಾಬುಜಗಜೀವನ್ ರಾಮ್
ಮಾಜಿ ಉಪಪ್ರಧಾನಿ ಡಾ. ಬಾಬುಜಗಜೀವನ್ ರಾಮ್ ಅವರು ದೇಶ ಕಂಡಂತಹ ಅಪ್ರತಿಮ ದೇಶ ಪ್ರೇಮಿ, ಆಡಳಿತಗಾರ ಹಾಗೂ ಹಸಿರು ಕ್ರಾಂತಿಯ ಹರಿಕಾರಾಗಿದ್ದರು. ಇದರಿಂದಲೇ ದೇಶದಲ್ಲಿ ಆಹಾರ ಮತ್ತು ಕೃಷಿ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಹೊಂದಲು ಸಾಧ್ಯವಾಯಿತು ಎಂದು ತಹಸೀಲ್ದಾರ್ ಆನಂದ್ ಕುಮಾರ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.