ಸಾರಾಂಶ
ಪ್ಲಾಸ್ಟಿಕ್ ನಿರ್ವಹಣೆ ಕುರಿತು ಜಾಗೃತಿ, ಮಕ್ಕಳಿಗೆ ಚಿತ್ರಕಲೆ, ಸಂಗೀತ ಕುರ್ಚಿ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಯಲ್ಲಾಪುರತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ನಡೆದ ಬೆಂಗಳೂರಿನ ಅಂತರಂಗ ಪ್ರತಿಷ್ಠಾನದ ಪ್ರೇರಣಾ ಮಾಸದ ಸರಣಿಯ ಹಸಿರು ಹೆಜ್ಜೆ ವಿಶೇಷ ಕಾರ್ಯಕ್ರಮವನ್ನು ಹಿರಿಯರಾದ ನಾಗಪ್ಪ ಗಾಂವ್ಕರ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಪ್ಲಾಸ್ಟಿಕ್ ನಿರ್ವಹಣೆ ಕಡಿಮೆ ಮಾಡುವಲ್ಲಿ ಮಹಿಳೆ ಮತ್ತು ಮಕ್ಕಳ ಪಾತ್ರ ಏನು ಎಂಬ ಕುರಿತು ಅರ್ಥಧಾರಿ ಶಾರದಾ ಗಾಂವ್ಕರ ಬೆಟ್ನೆಮನೆ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಗಾಂವ್ಕರ ಗೋಡೆಪಾಲ್ ಕಾರ್ಯಕ್ರಮದ ಆಯೋಜನೆ ಮತ್ತು ಅಂತರಂಗ ಪ್ರತಿಷ್ಠಾನದ ವಿಭಿನ್ನ ಯೋಚನೆ-ಯೋಜನೆಯನ್ನು ಶ್ಲಾಘಿಸಿದರು.ಮೈತ್ರಿ ಕಲಾ ಬಳಗದ ಕಾರ್ಯದರ್ಶಿ ಮಂಜುನಾಥ ಗಾಂವ್ಕರ್ ಮೂಲೆಮನೆ ಮಾತನಾಡಿ, ಅಂತರಂಗ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಮಾತನಾಡಿ, ಮೈತ್ರಿ ಬಳಗದಲ್ಲಿ ಮಧುರಾ ಗಾಂವ್ಕರ ಅವರ ಪಾಲ್ಗೊಳ್ಳುವಿಕೆಯಿಂದ ಬೆಳೆದು ಬಂದ ಸಂಘಟನಾತ್ಮಕ ಶಕ್ತಿಯೇ ಈಗ ಬೆಂಗಳೂರಿನಲ್ಲಿ ಅಂತರಂಗ ಪ್ರತಿಷ್ಠಾನ ಹುಟ್ಟುಹಾಕಲು ಕಾರಣವಾಗಿರಬಹುದು ಎಂದರು. ಹಸಿರು ಹೆಜ್ಜೆ ಕಾರ್ಯಕ್ರಮದ ಔಚಿತ್ಯ ಕುರಿತು ಮಾತನಾಡಿದರು.ಅಂತರಂಗ ಪ್ರತಿಷ್ಠಾನದ ಅಧ್ಯಕ್ಷೆ ಮಧುರಾ ಗಾಂವ್ಕರ, ಪ್ರೇರಣಾ ವಾರ್ಷಿಕ ಮಾಸ ಸರಣಿ ಕಾರ್ಯಕ್ರಮದ ವಿಶೇಷತೆ ಮತ್ತು ಹಸಿರು ಹೆಜ್ಜೆ ಕಾರ್ಯಕ್ರಮದ ರೂಪರೇಷೆ, ಕಾರ್ಯಕ್ರಮದ ಅಗತ್ಯತೆ ವಿವರಿಸಿದರು.
ಪ್ರಖ್ಯಾತ ಕಾದಂಬರಿಕಾರರಾಗಿದ್ದ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪ್ಲಾಸ್ಟಿಕ್ ಮುಕ್ತ ಭೂಮಿ ಎಂಬ ವಿಷಯದ ಕುರಿತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧೆ ನಡೆಸಲಾಯಿತು. ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಮಾನಸಾ ಗಾಂವ್ಕರ್ ಪ್ರಥಮ, ಧಾತ್ರಿ ಭಟ್ ದ್ವಿತೀಯ, ಅಕ್ಷರ ಹೆಗಡೆ ತೃತೀಯ ಮತ್ತು ಮನಸ್ವಿನಿ ಭಟ್ ಸಮಾಧಾನಕರ ಬಹುಮಾನ ಪಡೆದುಕೊಂಡರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಮೈತ್ರಿ ಗಾಂವ್ಕರ್ ಪ್ರಥಮ, ನವ್ಯಾ ನಾಯ್ಕ ದ್ವಿತೀಯ ಹಾಗೂ ಧಾತ್ರಿ ಭಟ್ ತೃತೀಯ ಸ್ಥಾನ ಪಡೆದುಕೊಂಡರು. ಸ್ಪರ್ಧಾ ವಿಜೇತರಿಗೆ ಜಯರಾಮ ಶೆಟ್ಟಿ ಬ್ರಹ್ಮಾವರ ನೀಡಿದ ಬಹುಮಾನವನ್ನು ಗಣ್ಯರು ವಿತರಿಸಿದರು.
ಹಿರಿಯರಾದ ಗಣಪತಿ ಗಾಂವ್ಕರ ಗೋಡೆಪಾಲ ಉಪಸ್ಥಿತರಿದ್ದರು. ವೈಭವಿ ಗಾಂವ್ಕರ ನಿರ್ವಹಿಸಿದರು. ಧನ್ಯಾ ಭಟ್ಟ ಪ್ರಾರ್ಥಿಸಿದರು.