ಸಾರಾಂಶ
ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ನಗರದ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿದರು.
ಚಳ್ಳಕೆರೆ: ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ನಗರದ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಮುಸ್ಲಿಂ ಸಮುದಾಯದ ಬಂಧುಗಳಿಗೆ ರಂಜಾನ್ ಶುಭಾಶಯ ಕೋರಿದರು. ಒಂದು ತಿಂಗಳ ಕಾಲ ಉಪವಾಸ ನಂತರ ನೀವೆಲ್ಲರೂ ಶ್ರದ್ಧೆಯಿಂದ ಇಲ್ಲಿಗೆ ಆಗಮಿಸಿ ಪ್ರಾರ್ಥಿಸಿದ್ದೀರಿ, ಎಲ್ಲಾ ಧರ್ಮಗಳು ಧಾರ್ಮಿಕ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರ ಮಾಡುತ್ತಿವೆ. ಗಾಂಧಿನಗರ, ಅಂಬೇಡ್ಕರ್ ನಗರ, ಸೂಜಿಮಲ್ಲೇಶ್ವರ ನಗರ, ಹಳೇಟೌನ್, ರಹೀಂನಗರ, ಶಾಂತಿನಗರ, ಸೋಮಗುದ್ದುರಸ್ತೆ ಮುಂತಾದ ಕಡೆಗಳಿಂದ ಬೆಳಗ್ಗೆ ಜಾಮೀಯ ಮಸೀದಿಯಲ್ಲಿ ಸೇರಿ ಅಲ್ಲಿಂದ ಮೆರವಣಿಗೆಯ ಮೂಲಕ ನೆಹರೂ ವೃತ್ತ, ಬಸವೇಶ್ವರ ವೃತ್ತದ ಮೂಲಕ ಈದ್ಗಾ ಮೈದಾನ ತಲುಪಿದರು.ನೂರುಲ್ಲಾ ಮೌಲಾನ, ಅತಿಕೂರ್ ರೆಹಮಾನ್, ಅನ್ವರ್ ಮಾಸ್ಟರ್, ಸೈಯದ್, ಮುಜೀಬ್, ಬಿ.ಫರೀದ್ ಖಾನ್, ಇಮ್ರಾನ್ ಖಾನ್, ದಾದಾಪೀರ್, ನಯಾಜ್, ಖಾದರ್, ಸಲೀಂ, ಸ್ವಾಲೇಹ, ಎಂ.ಚೇತನ್ ಕುಮಾರ್, ಬಿ.ಟಿ.ರಮೇಶ್‌ಗೌಡ ಇದ್ದರು.
.