ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಏತ ನೀರಾವರಿಗಳು ರೈತರಿಗೆ ಅನುಕೂಲವಾಗುವ ಯೋಜನೆಗಳು. ಕ್ಷೇತ್ರದ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿಕೊಂಡಿರುವ ಶಾಸಕ ಜೆ.ಟಿ. ಪಾಟೀಲರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ದೇವನಾಳ ಗ್ರಾಮದ ಬಳಿ ಅನವಾಲ ಏತ ನೀರಾವರಿ ಯೋಜನೆ ಹಂತ-1ರ ಅಡಿಗಲ್ಲು, ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜಕಾರಣಕ್ಕೆ ಬರುವುದು ಹೋಗುವುದು ಇರುವುದೇ. ಆದರೆ ಶಾಶ್ವತವಾದ ಹೆಜ್ಜೆ ಗುರುತುಗಳು ಇರುವಂತೆ ಅಭಿವೃದ್ಧಿ ಕೆಲಸ ಮಾಡುವುದು ಮುಖ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಕೋಡುವುದಲ್ಲದೆ, ನೀರಾವರಿ ಯೋಜನೆಗಳಿಗೂ ಕೋಟಿ ಕೋಟಿ ಅನುದಾನ ಕೊಡುತ್ತಿದೆ. ಆದರೆ ವಿರೋಧ ಪಕ್ಷದವರು ದುಡ್ಡು ಖಾಲಿ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಾರೆ, ಈಗ ನೆರವೇರುತ್ತಿರುವ ನೀರಾವರಿ ಯೋಜನೆಗಳಿಗೆ ದುಡ್ಡು ಕೋಟ್ಟಿದ್ದಾರಲ್ಲವೇ ?, ಗೃಹಲಕ್ಷ್ಮೀ ಯೋಜನೆಯಿಂದ ರಾಜ್ಯದಲ್ಲಿ ಮಹಿಳೆಯರು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಮುಳುಗಡೆ ಕನ್ಸಂಟ್ ಅವಾರ್ಡ್ ತರುವ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಅನಲವಾಲ ಏತ ನೀರಾವರಿ ಯೋಜನೆ ಹಂತ -1 ವರ್ಷದ ಹಿಂದೇಯೇ ಮಂಜೂರು ಆಗಿತ್ತು, ಹಂತ ಎರಡು ಮಂಜೂರು ಆಗಿರಲಿಲ್ಲ, ಈಗ ಹಂತ ಎರಡೂ ಕೂಡ ಮಂಜೂರು ಆಗಿದ್ದು ಅದರ ಭೂಮಿಪೂಜಾ ಕಾರ್ಯಕ್ರಮ ಬೀಳಗಿ ಮತಕ್ಷೇತ್ರದ ಬದಾಮಿ ತಾಲೂಕಿನ ಹಳ್ಳಿಯಲ್ಲಿ ಮಾಡಲಿದ್ದೇನೆ, ಕಾಡರಕೊಪ್ಪ ನೀರಾವರಿ ಕಾಮಗಾರಿ ಕೂಡ ಮಂಜೂರಾಗಿದ್ದು, ಮೇ ತಿಂಗಳಲ್ಲಿ ಭೂಮಿಪೂಜೆ ನಡೆಯಲಿದೆ. ಯೋಜನೆಯಿಂದ ಬಾಗಲಕೋಟೆ, ಬಾದಾಮಿ ತಾಲೂಕಿನ ನೀರಾವರಿ ಸೌಲಭ್ಯ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ, ಈಗಿನ ಸರಕಾರ ರಸ್ತೆ, ನೀರಾವರಿಗೆ ಒತ್ತು ಕೊಡುತ್ತಿದೆ, ಗ್ಯಾರಂಟಿ ಯೋಜನೆಗಳು ಶೇ.98 ಜನರಿಗೆ ತಲುಪಿವೆ, ಕೃಷಿ ಸಚಿವರು ಪೋಡಿ ಮುಕ್ತ ಗ್ರಾಮ ಮಾಡಲು ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಮೊದಲು ಬೀಳಗಿ ತಾಲೂಕಿನ ಗ್ರಾಮಗಳು ಪೋಡಿ ಮುಕ್ತ ಗ್ರಾಮಗಳು ಆಗಬೇಕು ಎಂದು ತಹಸೀಲ್ದಾರಗೆ ಸೂಚನೆ ನೀಡಿದ್ದು, ಪೋಡಿ ಮುಕ್ತ ಗ್ರಾಮವಾಗಲಿವೆ, ಹಟ್ಟಿ ಚಿನ್ನದ ಗಣಿಯಲ್ಲಿ ಹಲವಾರು ಬದಲಾವಣೆ ತಂದು ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.ದೇವನಾಳ ಗ್ರಾಪಂ ಅಧ್ಯಕ್ಷ ಅಶೋಕ ದೇವನಾಳ, ಕೆಪಿಸಿಸಿ ಉಪಾದ್ಯಕ್ಷ ಎಂ.ಬಿ. ಸೌದಾಗಾರ್, ಕಲಾದಗಿ ಬ್ಲಾಕ್ ಅಧ್ಯಕ್ಷ ಡಾ. ಬಸುರಾಜ ಸಂಶಿ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಿವಡಿ, ಸಂಗಣ್ಣ ಮುಧೋಳ, ಆನಂದ ಹೊನ್ನಪ್ಪಗೋಳ, ಸಿದ್ದು ಕೋಲಾರ, ಹನುಮಂತ ಡೋಣಿ, ಪಾಂಡು ಪೊಲೀಸ್, ಆರ್.ಆರ್. ತುಂಬರಮಟ್ಟಿ ಇತರರು ಇದ್ದರು.