ಹೊಸಕೋಟೆ: ಪ್ರತಿಷ್ಠಿತ ವಿಆರ್ ಡೆವಲಪರ್ಸ್‌, ಪಾವನಿ ಪ್ರಾಪರ್ಟಿಸ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ನೀಡಿ ಸಮುದಾಯದ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೊಸಕೋಟೆ: ಪ್ರತಿಷ್ಠಿತ ವಿಆರ್ ಡೆವಲಪರ್ಸ್‌, ಪಾವನಿ ಪ್ರಾಪರ್ಟಿಸ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ನೀಡಿ ಸಮುದಾಯದ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸುಮಾರು 12 ಗುಂಟೆ ಜಾಗದಲ್ಲಿ ಭವನ ನಿರ್ಮಾಣ ಮಾಡುತ್ತಿದ್ದು ಭವನ ನಿರ್ಮಾಣದ ನಂತರ ಭವನಕ್ಕೆ ಮತ್ತಷ್ಟು ಅನುದಾನ ಅಗತ್ಯತೆ ಬಿದ್ದರೆ ಸರ್ಕಾರದಿಂದ ಒದಗಿಸಿಕೊಡುತ್ತೇನೆ. ಆರು ತಿಂಗಳಿನಲ್ಲಿ ಗುತ್ತಿಗೆದಾರರು ಭವನದ ಕಾಮಗಾರಿ ಪೂರ್ಣಗೊಳಿಸಬೇಕು. ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ದಿ ದೃಷ್ಠಿಯಿಂದ ನಗರದಲ್ಲಿ 2 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನವನ್ನು ಒಂದು ವರ್ಷದಲ್ಲಿ ಕಟ್ಟಿ ಉದ್ಘಾಟನೆ ಮಾಡಿದ್ದೇವೆ ಎಂದು ತಿಳಿಸಿದರು.

ಸ್ಮಶಾನ ರಸ್ತೆ ಅಭಿವೃದ್ಧಿಗೆ ಕ್ರಮ: ಗ್ರಾಮದಲ್ಲಿ ನಾಲ್ಕೈದು ಸಮುದಾಯಗಳ ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಸಿಸಿ ರಸ್ತೆ ಮಾಡಿಸುವಂತೆ ಮನವಿ ಸಲ್ಲಿಸಿದ್ದು ತ್ವರಿತವಾಗಿ ಮಾಡಿಸಿಕೊಡುತ್ತೇನೆ. ರಸ್ತೆ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟರೆ ತ್ವರಿತವಾಗಿ ಅನುದಾನವನ್ನು ಸಹ ಕೊಡಿಸುತ್ತೇನೆ. ರಸ್ತೆ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸುವ ಬಗ್ಗೆ ದೂರು ನೀಡುವ ಬದಲು ಗ್ರಾಮಸ್ಥರೆ ಒಗ್ಗಟ್ಟಾಗಿ ನಿಂತು ಅಭಿವೃದ್ದಿ ಕಾಮಗಾರಿಗೆ ಸಹಕಾರ ನೀಡಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಕೆ.ಆರ್.ದೇವರಾಜ್ ಮಾತನಾಡಿ, ತಾಲೂಕಿನ ಸೂಲಿಬೆಲೆ, ಹೊಸಕೋಟೆ ನಗರ, ಗೊಟ್ಟಿಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ವಾಲ್ಮೀಕಿ ಭವನ ಇದ್ದು ಸಮುದಾಯದ ಅಭಿವೃದ್ದಿಗೆ ಶಾಸಕರ ಸಹಕಾರ ಕೂಡ ಹೆಚ್ಚಾಗಿದೆ. ಸೂಲಿಬೆಲೆ ಹಾಗೂ ದೊಡ್ಡನಲ್ಲೂರಹಳ್ಳಿಯಲ್ಲಿ ವಾಲ್ಮೀಕಿ ಸಮುದಾಯ ಹೆಚ್ಚಾಗಿದ್ದು ಈ ಗ್ರಾಮಕ್ಕೆ ಸುಸಜ್ಜಿತ ಭವನ ನಿರ್ಮಾಣಕ್ಕೆ ವಿಆರ್ ಡೆವಲರ್ಸ್‌, ಪಾವನಿ ಪ್ರಾಪರ್ಟಿಸ್ ಅವರು ಮುಂದೆ ಬಂದಿರುವುದು ಪ್ರಶಂಶನೀಯ ಎಂದರು.

ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ವಿಆರ್‌ಡೆವಲರ‍್ಸ್ ರಮೇಶ್ ನಾಯ್ಡು, ಕಿಶೋರ್ ನಾಯ್ಡು, ಪಾವನಿ ಪ್ರಾಪರ್ಟಿಸ್ ಮಾಲೀಕ ಅಟ್ಟೂರು ನವೀನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಆದ್ಯಕ್ಷ ಹೆಚ್.ಜೆ.ಬಚ್ಚೇಗೌಡ, ಗ್ರಾಪಂ ಸದಸ್ಯರಾದ ಅಮೃತಾ ಛಲಪತಿ, ಡಿಜೆ.ನಾಗೇಶ್ ಮುಖಂಡರಾದ ನಾರಾಯಣಪ್ಪ, ದೊಡ್ಡನಾರಾಯಣಪ್ಪ, ವೆಂಕಟೇಶ್, ಚಿಕ್ಕನಾರಾಯಣಪ್ಪ, ನಾಗರಾಜ್, ಮಂಜುನಾಥ್, ಶ್ರೀನಿವಾಸ್, ಹನುಮರಾಜು, ಶ್ರೀನಿವಾಸ್‌ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಫೋಟೋ: 3 ಹೆಚ್‌ಎಸ್‌ಕೆ 5

ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ವಿಆರ್ ಡೆವಲಪರ್ಸ್‌, ಪಾವನಿ ಪ್ರಾಪರ್ಟಿಸ್ ಅನುದಾನದಲ್ಲಿ 50ಲಕ್ಷ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.