ಸಾರಾಂಶ
ನೆಚ್ಚಿನ ನಾಯಕರಾದ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಬಿಜೆಪಿ ಪಕ್ಷದ ಸಕ್ರಿಯ ಸದಸ್ಯರೆಲ್ಲರೂ ತಾಯಿಯಂದಿರ ಹೆಸರಿನಲ್ಲಿ ತಮ್ಮ ಹೊಲಗದ್ದೆಗಳಲ್ಲಿ ಹಾಗೂ ಮನೆ ಮುಂಭಾಗ ಹಿಂಭಾಗ ಒಂದೊಂದು ಗಿಡ ನೆಡಬೇಕೆಂಬ ಸಂಕಲ್ಪ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಪ್ರಸ್ತುತ ಭೂಮಿ ತಾಪಮಾನ ಹೆಚ್ಚಳದಿಂದ ಅಂತರ್ಜಲ ಕುಸಿಯುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಆರ್. ಅಶೋಕ್ ಕುಮಾರ್ ಆತಂಕ ವ್ಯಕ್ತಪಡಿಸಿದರು.ಕೋಡಿಪುರ ಗೇಟ್ ಬಳಿ ಶ್ಯಾಮ್ ಪ್ರಸಾದ್ ಮುಖರ್ಜಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಾತನಾಡಿ, ನೆಚ್ಚಿನ ನಾಯಕರಾದ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಬಿಜೆಪಿ ಪಕ್ಷದ ಸಕ್ರಿಯ ಸದಸ್ಯರೆಲ್ಲರೂ ತಾಯಿಯಂದಿರ ಹೆಸರಿನಲ್ಲಿ ತಮ್ಮ ಹೊಲಗದ್ದೆಗಳಲ್ಲಿ ಹಾಗೂ ಮನೆ ಮುಂಭಾಗ ಹಿಂಭಾಗ ಒಂದೊಂದು ಗಿಡ ನೆಡಬೇಕೆಂಬ ಸಂಕಲ್ಪ ಮಾಡಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಭೂಮಿ ತಾಪಮಾನ ಏರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕುಡಿಯುವ ನೀರು ಹಾಗೂ ವ್ಯವಸಾಯ ತೊಂದರೆಯಾಗುತ್ತಿದೆ ಹಾಗೂ ವಾತಾವರಣವೂ ಹಾಳಾಗುತ್ತಿದೆ. ನಮ್ಮಗಳ ಹಿತಕ್ಕಾಗಿ ಬಿಜೆಪಿ ಪಕ್ಷ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಗಿಡ ನೆಡಲು ಕರೆ ನೀಡಲಾಗಿದೆ ಎಂದರು.ಗಿಡ ನೆಟ್ಟು ಭೂಮಿ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಈ ಸಂಕಲ್ಪಕ್ಕೆ ಕೈಜೋಡಿಸಿ ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗಿಡ ನೆಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಹುಸ್ಕೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ಪರಮೇಶ್, ಜಿಲ್ಲಾ ಕಾರ್ಯದರ್ಶಿ ವೈರಮುಡಿ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಮಧು, ಸಿದ್ದರಾಜು, ಮುಖಂಡರಾದ ಮರಿಸ್ವಾಮಿ, ಲಿಂಗರಾಜು, ಅಶೋಕ್ ಹಂಚೀಪುರ ಸೇರಿದಂತೆ ಹಲವರು ಭಾಗವಹಿಸಿದ್ದರು.ರಸ್ತೆ, ಚರಂಡಿ ಕಾಮಗಾರಿಗೆ ನರೇಂದ್ರಸ್ವಾಮಿ ಗುದ್ದಲಿ ಪೂಜೆಹಲಗೂರು:ಹಲಗೂರು ಹಾಗೂ ಧನಗೂರು ಮುಸ್ಲಿಂ ಬ್ಲಾಕ್‌ನಲ್ಲಿ 1 ಕೋಟಿ, 75 ಲಕ್ಷ ರು. ವೆಚ್ಚದ ಸಿಸಿ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅನುದಾನದಡಿಯಲ್ಲಿ ಅನುದಾನವನ್ನು ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಇದೇ ವೇಳೆ ಗ್ರಾಪಂ ಅಧ್ಯಕ್ಷೆ ಟಿ.ರಕ್ಷಿತ ಜೀವನ್ ಕುಮಾರ್, ಉಪಾಧ್ಯಕ್ಷೆ ಲತಾ ಮಹದೇವ್, ಸದಸ್ಯರಾದ ಆರ್.ಶಶಿಕಲಾ, ಲಿಯಾಕತ್ ಅಲಿ, ಜಮೀಲ್, ಸದ್ರುಲ್, ಬಾಬು, ಗುಲ್ನಾಜ್ ಭಾನು, ಮುಖಂಡರಾದ ಪದ್ಮನಾಬ್, ಎಚ್.ವಿ.ರಾಜ್, ಬಾ.ಗೋ ಕುಮಾರ್, ಕೆಂಪಣ್ಣ ಇತರರು ಇದ್ದರು.