ವೃಕ್ಷಗಳನ್ನು ಬೆಳೆಯುವುದರಿಂದ ಅಂತರ್ಜಲ ಅಭಿವೃದ್ಧಿ: ಅಮರ ನಾರಾಯಣ
KannadaprabhaNewsNetwork | Published : Oct 30 2023, 12:30 AM IST
ವೃಕ್ಷಗಳನ್ನು ಬೆಳೆಯುವುದರಿಂದ ಅಂತರ್ಜಲ ಅಭಿವೃದ್ಧಿ: ಅಮರ ನಾರಾಯಣ
ಸಾರಾಂಶ
ವೃಕ್ಷಗಳನ್ನು ಬೆಳೆಯುವುದರಿಂದ ಅಂತರ್ಜಲ ಅಭಿವೃದ್ಧಿ: ಅಮರ ನಾರಾಯಣ
ಕನ್ನಡಪ್ರಭ ವಾರ್ತೆ, ತರೀಕೆರೆ ಹೆಚ್ಚು ವೃಕ್ಷಗಳನ್ನು ಬೆಳೆಯುವುದರಿಂದ ಭೂಮಿಯಲ್ಲಿ ಅಂತರ್ಜಲ ಅಭಿವೃದ್ದಿ ಆಗುತ್ತದೆ. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಆಹಾರ ಇತ್ಯಾದಿ ಹತ್ತಾರು ರೀತಿಯ ಪ್ರಯೋಜನ ಆಗುತ್ತದೆ ಎಂದು ಬೆಂಗಳೂರು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಅಧ್ಯಕ್ಷ ಕೆ.ಅಮರ ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ. ಭಾನುವಾರ ಯಶಸ್ವಿ ಚಾರಿಟಬಲ್ ಟ್ರಸ್ಟ್, ಶ್ರೀಗಂಧ ರಕ್ಷಣಾ ವೇದಿಕೆಯಿಂದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ರಾಜ್ಯ ಜಿಲ್ಲಾ ಹಾಗೂ ತರೀಕೆರೆ ತಾಲೂಕು ಸಮಿತಿ ಸಹಯೋಗದಲ್ಲಿ ಸಮೀಪದ ಹಳಿಯೂರು ಗಂಧದ ಗುಡಿ-4ರಲ್ಲಿ ಏರ್ಪಡಿಸಿದ್ದ ಶ್ರೀಗಂಧ-ಮಕಡೋಮಿಯ ಲೋಕಾರ್ಪಣೆ ಮತ್ತು ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು. ಮಕಡೋಮಿಯ ಬೆಳೆಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಈ ಪ್ರಯೋಗ ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ರೈತರು ಈ ನೂತನ ಬೆಳೆ ಪ್ರಯೋಗ ಮಾಡಬೇಕು. ಮಕಡೋಮಿಯ ಹಣ್ಣು ತುಂಬಾ ರುಚಿ. ಉತ್ಕೃಷ್ಟವಾದ ಮಿನರಲ್ಸ್ ಹೊಂದಿದೆ. ತೆಂಗು ಮತ್ತು ಹಣ್ಣುಗಳನ್ನು ಹೆಚ್ಚು ಬೆಳೆಯಬೇಕು. ಇವು ಆದಾಯದ ಮೂಲ. ಬೀಜ ಪ್ರಸರಣದಿಂದ ಮರಗಿಡಗಳನ್ನು ಹೆಚ್ಚು ಬೆಳೆಯಬಹುದು ಎಂದು ಹೇಳಿದರು. ರೈತರು ಮಾಹಿತಿ ಹಂಚಿಕೊಳ್ಳಬೇಕು, ರೈತರು ಕಷ್ಟಪಟ್ಟು ಬೆಳೆದ ಶ್ರೀಗಂಧ ಮರಗಳು ಕೇವಲ 5 ನಿಮಿಷಗಳಲ್ಲಿ ಕಳ್ಳತನವಾಗುತ್ತದೆ. ಇದರಿಂದ ಅವರಿಗೆ ಅನ್ಯಾಯವಾಗುತ್ತದೆ. ಶ್ರೀಗಂಧದ ಜೊತೆಗೆ ಹಲವಾರು ಗಿಡಗಳನ್ನು ಬೆಳೆಯಬಹುದು. ಗಿಡಗಳನ್ನು ನೆಟ್ಟು ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಗಿಡಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಯಶಸ್ವಿ ಚಾರಿಟಬಲ್ ಟ್ರ್ರಸ್ಟ್ ಮಾದರಿಯಾಗಿದೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಶ್ರೀಗಂಧ ಬೆಳೆಗಾರರ ಮತ್ತು ವನಕೃಷಿ ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಎ.ಎಸ್.ಈಶ್ವರಪ್ಪ ಮಾತನಾಡಿ ತಾಲೂಕಿನಿಂದ ಸಂಘಕ್ಕೆ ಒಂದು ಸಾವಿರ ಸದಸ್ಯರನ್ನು ನೋಂದಾಯಿಸುವುದಾಗಿ ತಿಳಿಸಿದರು. ತರೀಕೆರೆ ಯಶಸ್ವಿ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಟಿ.ಆರ್.ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಮಂಜುನಾಥ್ ಮಕಡೋಮಿಯ ಬೆಳೆ ಕುರಿತು ಮಾಹಿತಿ ನೀಡಿದರು. ಅ.ಕ.ಶ್ರೀ. ವ.ಬೆ. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸದಾಶಿವಯ್ಯ, ನಿವೃತ್ತ ಮುಖ್ಯ ಶಿಕ್ಷಕ ಸಿದ್ರಾಮಪ್ಪ, ಖಜಾಂಚಿ ಜಿ.ಚಂದ್ರಶೇಖರ ಗೌಡ, ಶ್ರೀನಿವಾಸ ರೆಡ್ಡಿ, ಭೈರಪ್ಪ, ರಾಜಶೇಖರ್, ಪ್ರತಾಪ್, ರಾಮಚಂದ್ರ ಪಾಟೀಲ್, ಅ.ಕ.ಶ್ರೀ.ವ.ಬೆ.ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸದಾಶಿವಯ್ಯ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಸಂಚಾಲಕರು ಟಿ.ಎನ್.ವಿಶುಕುಮಾರ್ ಭಾಗವಹಿಸಿದ್ದರು. ---ಬಾಕ್ಸ್--- 18 ವರ್ಷಗಳಿಂದ ಶ್ರೀಗಂಧ ಮರ ಬೆಳೆದು ಮಾರಾಟ ಮಾಡಿ ಆದಾಯ ಪಡೆದಿದ್ದೇನೆ. ಮನೆ ಮನೆಗಳಲ್ಲಿ ಶ್ರೀಗಂಧ ಬೆಳೆಯಬೇಕು. 50 ಎಕರೆಯಲ್ಲಿ ಶ್ರೀಗಂಧ ಬೆಳೆದಿದ್ದೇನೆ, ಶ್ರೀಗಂಧ ಬೆಳೆಗಾರರ ಸಂಘವೂ ರಚನೆಯಾಗಿದೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಟಿ.ಎನ್. ವಿಶುಕುಮಾರ್ ಹೇಳಿದರು. ಶ್ರೀಗಂಧ ಕಳ್ಳತನ ತಡೆಯಬೇಕು. ಶ್ರೀಗಂಧ ಕಳ್ಳತನವಾದರೆ ಪೊಲೀಸರಿಗೆ ದೂರು ನೀಡಬೇಕೆಂದ ಅವರು ಮಕಡೋಮಿಯ ಬೆಳೆ ಐದು ವರ್ಷಗಳಲ್ಲಿ ಫಲ ನೀಡುತ್ತದೆ ಎಂದರು. ಮಳೆ ಕಡಿಮೆ ಇದ್ದರೂ ಈ ಬೆಳೆ ಬೆಳೆಯಬಹುದು, ಒಂದು ಎಕರೆಗೆ ನೂರು ಗಿಡಗಳನ್ನು ಬೆಳೆಯ ಬಹುದು. ನೀರು ಕಡಿಮೆ ಆದರೆ ಆದಾಯ ಹೆಚ್ಚಾಗುತ್ತದೆ ಎಂದರು. 29ಕೆಟಿಆರ್.ಕೆ.4ಃ ತರೀಕೆರೆ ಸಮೀಪದ ಹಳಿಯೂರು ಗಂಧದಗುಡಿ-4ರಲ್ಲಿ ಏರ್ಪಡಿಸಿದ್ದ ಶ್ರೀಗಂಧ-ಮಕಡೋಮಿಯ ಲೋಕಾರ್ಪಣೆ ಕಾರ್ಯಕ್ರಮ ವಿಚಾರಸಂಕಿರಣ ಉದ್ಘಾಟನೆಯನ್ನು ಬೆಂಗಳೂರು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಅಧ್ಯಕ್ಷರು ಕೆ.ಅಮರನಾರಾಯಣ ನೆರವೇರಿಸಿದರು. ಅಖಿಲ ಕರ್ನಾಟಕ ಶ್ರೀಗಂಧ ಬೆಳೆಗಾರರ ಮತ್ತು ವನಕೃಷಿ ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಎ.ಎಸ್.ಈಶ್ವರಪ್ಪ, ರಾಜ್ಯ ಸಂಚಾಲಕ ಟಿ.ಎನ್.ವಿಶುಕುಮಾರ್ ಮತ್ತಿತರರು ಇದ್ದಾರೆ.