ಜಿ.ಎಸ್.ಶ್ಯಾಮ್‌ ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ

| Published : Feb 23 2024, 01:50 AM IST

ಸಾರಾಂಶ

ಮಾಯಕೊಂಡದ ಜಿ.ಎಸ್.ಶ್ಯಾಮ್‌ರಿಗೆ ನೂತನ ಜವಾಬ್ದಾರಿ ವಹಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ನೀಡಿದ ಮಹತ್ವದ ಜವಾಬ್ದಾರಿ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ಜೊತೆಗೆ ತಳ ಮಟ್ಟದಿಂದ ಸಂಘಟಿಸುವಂತೆ, ಮುಂಬರುವ ಎಲ್ಲಾ ಸವಾಲುಗಳ ಸಮರ್ಥವಾಗಿ ಎದುರಿಸುವಂತೆ ಸೂಚಿಸಿ, ನೇಮಕಾತಿ ಆದೇಶ ನೀಡಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಮಾಯಕೊಂಡ ಕ್ಷೇತ್ರದ ಯುವ ಮುಖಂಡ ಜಿ.ಎಸ್‌.ಶ್ಯಾಮ್‌ ನೇಮಕಗೊಂಡಿದ್ದಾರೆ.

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ನೂತನ ರಾಜ್ಯ ಉಪಾಧ್ಯಕ್ಷರಾಗಿ ಜಿ.ಎಸ್. ಶ್ಯಾಮ್‌ರನ್ನು ನೇಮಿಸಿ, ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾಯಕೊಂಡದ ಜಿ.ಎಸ್.ಶ್ಯಾಮ್‌ರಿಗೆ ನೂತನ ಜವಾಬ್ದಾರಿ ವಹಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ನೀಡಿದ ಮಹತ್ವದ ಜವಾಬ್ದಾರಿ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ಜೊತೆಗೆ ತಳ ಮಟ್ಟದಿಂದ ಸಂಘಟಿಸುವಂತೆ, ಮುಂಬರುವ ಎಲ್ಲಾ ಸವಾಲುಗಳ ಸಮರ್ಥವಾಗಿ ಎದುರಿಸುವಂತೆ ಸೂಚಿಸಿ, ನೇಮಕಾತಿ ಆದೇಶ ನೀಡಲಾಯಿತು.

ನೂತನವಾಗಿ ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕವಾದ ಮಾಯಕೊಂಡದ ಜಿ.ಎಸ್.ಶ್ಯಾಮ್, ಪಕ್ಷವು ತಮಗೆ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷನಾಗಿ ನೇಮಕ ಮಾಡಿರುವುದು ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಪಕ್ಷದ ನೂತನ ಜವಾಬ್ಧಾರಿ ವಹಿಸಿಕೊಂಡು, ಪಕ್ಷ ಸಂಘಟನೆ, ಬಲವರ್ಧನೆ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ನನಗೆ ಜವಾಬ್ಧಾರಿ ನೀಡಿದ ಎಲ್ಲಾ ನಾಯಕರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರನ್ನಾಗಿ ಪಕ್ಷವು ನನಗೆ ನೇಮಿಸಿರುವುದು ಸಂತಸ ತಂದಿದೆ. ಪಕ್ಷ ಸಂಘಟಿಸುವ ಜವಾಬ್ದಾರಿ ಹೊತ್ತು ಪಕ್ಷಕ್ಕಾಗಿ ದುಡಿಯುವೆ. ಜವಾಬ್ದಾರಿ ನೀಡಿದ ಪಕ್ಷದ ಎಲ್ಲ ನಾಯಕರಿಗೆ ಧನ್ಯವಾದ ತಿಳಿಸುವೆ.

ಜಿ.ಎಸ್.ಶ್ಯಾಮ್, ರಾಜ್ಯ ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ