ವಹಿವಾಟು ಮಿತಿ ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯ

| Published : Aug 08 2025, 01:01 AM IST

ವಹಿವಾಟು ಮಿತಿ ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸರಕು ಮತ್ತು ಸೇವಾ ತೆರಿಗೆ ವಹಿವಾಟು ವಾರ್ಷಿಕವಾಗಿ ₹೪೦ ಲಕ್ಷ (ಸರಕಿಗೆ), ₹೨೦ ಲಕ್ಷ (ಸೇವೆಗೆ) ದಾಟಿದರೆ ಕಡ್ಡಾಯವಾಗಿ ನೋಂದಣಿ ಪಡೆದು ವ್ಯವಹರಿಸಬೇಕೆಂದು ವಾಣಿಜ್ಯ ತೆರಿಗೆ ಉಪ ಆಯುಕ್ತ ರಾಘವೇಂದ್ರ ಸುಣಗಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರಕು ಮತ್ತು ಸೇವಾ ತೆರಿಗೆ ವಹಿವಾಟು ವಾರ್ಷಿಕವಾಗಿ ₹೪೦ ಲಕ್ಷ (ಸರಕಿಗೆ), ₹೨೦ ಲಕ್ಷ (ಸೇವೆಗೆ) ದಾಟಿದರೆ ಕಡ್ಡಾಯವಾಗಿ ನೋಂದಣಿ ಪಡೆದು ವ್ಯವಹರಿಸಬೇಕೆಂದು ವಾಣಿಜ್ಯ ತೆರಿಗೆ ಉಪ ಆಯುಕ್ತ ರಾಘವೇಂದ್ರ ಸುಣಗಾರ ತಿಳಿಸಿದರು.

ಜಿಲ್ಲಾ ಲೆಕ್ಕ ಪರಿಶೋಧಕರ ಸಂಘ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಸಹಯೋಗದಲ್ಲಿ ನಗರದ ಸಂತೆಮರಳ್ಳಿ ರಸ್ತೆಯಲ್ಲಿ ಇರುವ ಖಾಸಗಿ ಹೋಟಲ್ ನಲ್ಲಿ ಜಿ.ಎಸ್.ಟಿ ನೋದಣಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ದೇಶ ಒಂದು ತೆರಿಗೆ ಕಲ್ಪನೆಯಲ್ಲಿ ಬಂದ ಸರಕು ಮತ್ತು ಸೇವಾ ತೆರಿಗೆ ಕಾನೂನು ತುಂಬ ಸರಳ ಮತ್ತು ಸುಲಭವಾಗಿದೆ. ದೇಶದ ಅಭಿವೃದಿಗೆ ಜಿ.ಎಸ್.ಟಿಯು ಪೂರಕವಾಗಿದೆ. ಜಿ.ಎಸ್.ಟಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ ಸ್ಥಳಿಯ ವಾಣಿಜ್ಯ ತೆರಿಗೆ ಇಲಾಖೆ ಸಂರ್ಪಕಿಸಲು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಲೆಕ್ಕ ಪರಿಶೋಧಕ ಸಂಘದ ಜಿಲ್ಲಾಧ್ಯಕ್ ಸಿ.ಎಂ.ವೆಂಕಟೇಶ್, ಜಿ.ಎಸ್.ಟಿ ಯಲ್ಲಿ ಎಲ್ಲಾ ವಸ್ತುಗಳಿಗು ತೆರಿಗೆ ಒಳಪಡುವುದಿಲ್ಲ, ಮುಖ್ಯವಾಗಿ ಹಾಲು, ಹಣ್ಣುಗಳು, ತಾಜಾ ತರಕಾರಿ, ಮಾಂಸ ಮುಂತಾದವುಗಳಿಗೆ ಜಿ.ಎಸ್.ಟಿ ಇರುವುದಿಲ್ಲ. ಇದರಿಂದ ಸಣ್ಣ ವರ್ತಕರು ಮತ್ತು ತಳ್ಳುವಗಾಡಿಯ ವ್ಯಾಪಾರಸ್ಥರು ಆತಂಕ ಪಡುವ ಪಡಬಾರದು. ವಾಣ್ಯಜ್ಯ ತೆರಿಗೆ ಇಲಾಖೆಯವರು ನೀಡಿದ ನೋಟಿಸ್ ಅಥವಾ ಇಂಟಿಮೇಷನ್ ಗಳಿಗೆ ಉತ್ತರ ನೀಡದಿದ್ದರೆ ಮುಂದೆ ತೊಂದರೆಗೆ ಸಿಲುಕಬೇಕಾಗುತ್ತದೆ. ಆದರಿಂದ ನೋಟಿಸ್ ಗೆ ಮರು ಉತ್ತರ ನೀಡಬೇಕಾದುದು ಆದ್ಯ ಕರ್ತವ್ಯವಾಗಿದೆ. ವರ್ತಕರಿಗೆ ಸರಕು ಮತ್ತು ಸೇವಾ ತೆರಿಗೆ ಕಾನೂನು ಅರಿವು ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಸುಪ್ರಿತ್‌ದೇವ್, ಚಂದ್ರಶೇಖರ್, ಮಂಜುಕುಮಾರ್, ನಾಗರಾಜು ಲೆಕ್ಕ ಪರಿಶೋಧಕರಾದ ಬಿ.ಎಂ.ಪುಟ್ಟಮಾದಪ್ಪ, ಕಾರ್ಯದರ್ಶಿ ಮಂಜು, ಶ್ರೀಧರ್, ನವೀನ್, ಕಮಲ್‌ರಾಜ್, ಚಂದ್ರು, ರಂಗನಾಥ್, ಶಿವರಾಜು, ಕಾಮರಾಜು, ಮಣಿಕಂಠಸ್ವಾಮಿ, ರಂಗಸ್ವಾಮಿ, ಮುಂತಾದವರು ಇದ್ದರು.