ಸಾರಾಂಶ
- ಚನ್ನಗಿರಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಸಭೆ
- - -ಚನ್ನಗಿರಿ: ಪಟ್ಟಣದ ತಾಲೂಕು ಪಂಚಾಯಿತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ತಾಲೂಕುಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಸರ್ಕಾರ ರೂಪಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಇಂತಹ ಸಭೆ ನಡೆಸುತ್ತಾ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸುವಂತೆ ಮಾಡಬೇಕಿದೆ ಎಂದು ಶ್ರೀನಿವಾಸ್ ಹೇಳಿದರು.ಜಿಲ್ಲಾಮಟ್ಟದ ಸಭೆಯಲ್ಲಿ ಚನ್ನಗಿರಿ ತಾಲೂಕು ಪಂಚ ಗ್ಯಾರಂಟಿಗಳ ಯೋಜನೆಗಳ ವಿತರಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಈ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಸಮಿತಿಯ ಜೊತೆ ಕೈ ಜೋಡಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಮ್ಮ ವ್ಯಾಪ್ತಿಗೆ ಬರುವಂತಹ ಕಾರ್ಡ್‌ಗಳ ಫಲಾನುಭವಿಗಳ ವಾಟ್ಸಪ್ ಗ್ರೂಪ್‌ಗಳನ್ನು ಮಾಡಿಕೊಂಡು ಪ್ರತಿ ತಿಂಗಳು ವಿತರಣೆ ಆಗುವಂತಹ ಪಡಿತರದ ಮಾಹಿತಿಯನ್ನು ಪಡಿತರದಾರರಿಗೆ ಹಾಕಬೇಕು ಮತ್ತು ಅಂಗಡಿಯ ಮುಂದೆ ಪಡಿತರ ಇರುವ ಬಗ್ಗೆ ನಾಮಫಲಕ ಹಾಕಬೇಕು ಎಂದರು.ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲೂಕಿನಲ್ಲಿ 36 ಜನ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ₹3.46 ಲಕ್ಷವನ್ನು ಸರ್ಕಾರ ಅವರ ಖಾತೆಗೆ ಸಂದಾಯ ಮಾಡಿರುವುದು ತಿಳಿದಿದೆ. ತಾಲೂಕಿನಲ್ಲಿ ಒಟ್ಟು 1020 ಜನ ಮರಣ ಹೊಂದಿದ್ದು, ಮರಣ ಹೊಂದಿದವರು ಹಣ ಪಡೆದಿದ್ದರೆ ಅದನ್ನು, ವಾರಸುದಾರರು ಸರ್ಕಾರಕ್ಕೆ ಜಮಾ ಮಾಡಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 79.223 ಫಲಾನುಭವಿಗಳು ಇದ್ದು ಅದರಲ್ಲಿ ಹಣ ಸಂದಾಯ ಆಗಿರುವುದು 77.172 ಜನ ಫಲಾನುಭವಿಗಳಿಗೆ 33.43 ಲಕ್ಷ ಅವರ ಖಾತೆಗಳಿಗೆ ಹಣ ಜಮೆಯಾಗಿದೆ. ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಪ್ರಾರಂಭವಾಗಿದ್ದು, ಗ್ರಾಮೀಣ ಜನರಿಗೆ ಬಸ್ ಸೌಲಭ್ಯ ಸುಲಭವಾಗಿ ಸಿಗುತ್ತಿದೆ ಎಂದರು.ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜಬೀಉಲ್ಲಾ, ಸದಸ್ಯರಾದ ಶಿವಣ್ಣ, ಮಧು, ಚಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಂ.ಆರ್.ಪ್ರಕಾಶ್ ಹಾಜರಿದ್ದರು.
- - --30ಕೆಸಿಎನ್ಜಿ2:
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))