ಸಾರಾಂಶ
ರಾಜ್ಯದ ಬಡಜನರಿಗೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಈ ಯೋಜನೆಗಳು ಬಹಳಷ್ಟು ಅನುಕೂಲವಾಗಿದ್ದು, ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಿ ಸ್ವ ಉದ್ಯೋಗ ಮಾಡುತ್ತಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕರಾದ ಜೆ.ಟಿ. ಪಾಟೀಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ರಾಜ್ಯದ ಬಡಜನರಿಗೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಈ ಯೋಜನೆಗಳು ಬಹಳಷ್ಟು ಅನುಕೂಲವಾಗಿದ್ದು, ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಿ ಸ್ವ ಉದ್ಯೋಗ ಮಾಡುತ್ತಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕರಾದ ಜೆ.ಟಿ. ಪಾಟೀಲ ತಿಳಿಸಿದರು.ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯಡಿ ೫೦೦ ಕೋಟಿ ಪ್ರಯಾಣಿಕರು ಸಂಚರಿಸಿದ ಹಿನ್ನೆಲೆ ಸೋಮವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಸಾರಿಗೆ ಬಸ್‌ಗಳ ಪೂಜೆ ನೆರವೇರಿಸಿ ಅವರು ಮಾತನಾಡಿದರು.
೨೦೨೩ರ ಜುಲೈನಲ್ಲಿ ಆರಂಭವಾದ ಶಕ್ತಿ ಯೋಜನೆಯಿಂದ ಸಾಕಷ್ಟು ಮಹಿಳೆಯರಿಗೆ ತಮ್ಮ ನಿತ್ಯದ ಕೆಲಸಗಳಿಗೆ ಅನುಕೂಲವಾಗಿದೆ. ಬೀಳಗಿ ತಾಲೂಕಿನ ಬೀಳಗಿ ವಿಭಾಗದಿಂದ ಇಲ್ಲಿಯವರಿಗೂ ಸುಮಾರು ೧ ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ, ವಿಭಾಗಕ್ಕೆ ಸಾಕಷ್ಟು ಆದಾಯ ಬಂದಿದ್ದು, ಇನ್ನೂ ಮೂರು ವರ್ಷಗಳ ಕಾಲ ಯಾವ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಶಾಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪ್ರಯಾಣ ನೀಡುವ ಕುರಿತು ಚಿಂತನೆ ನಡೆದಿದ್ದು, ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ತಿಳಿಸಿದರು.ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ ಪರಿಶೀಲಿಸಿದ ಶಾಸಕರು, ಅಲ್ಲಿನ ಅಸ್ವಚ್ಛತೆ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಯೋಜನೆ ತಯಾರಿಸಿ ಅದಕ್ಕೆ ಬೇಕಾದ ಅನುದಾನ ನೀಡಲಾಗುವುದು ಎಂದ ಶಾಸಕರು, ಬಸ್ ನಿಲ್ದಾಣ ಎದುರು ಅಟೋ ಸ್ಟ್ಯಾಂಡ್ ನಿರ್ಮಾಣ ಮಾಡುವ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಮುತ್ತು ಬೋರಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ, ತಾಲೂಕಾಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಬಿ.ಆರ್. ಸೊನ್ನದ, ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ರಾಜು ಬೊರಜಿ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ, ಅಜ್ಜು ಭಾಯಿಸರ್ಕಾರ, ಶಿವಾನಂದ ಮಾದರ, ರೇಖಾ ಕಟ್ಟೇಪ್ಪನವರ, ಡಿಪೋ ಮ್ಯಾನೇಜರ್ ಖೇಡದ, ಸಾರಿಗೆ ನಿಯಂತ್ರಕರಾದ ಗಿರೀಶ ಅರಕೇರಿ, ಶಿವು ಢವಳೇಶ್ವರ, ಪ್ರಕಾಶ್ ಮೋದಿ ಸೇರಿದಂತೆ ಇತರರು ಇದ್ದರು.₹೨.೫೦ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ:
ಲೊಕೋಪಯೋಗಿ ಇಲಾಖೆ ವತಿಯಿಂದ ಸುಮಾರು ₹೨.೫೦ ಕೋಟಿ ವೆಚ್ಚದಲ್ಲಿ ತಾಲೂಕಿನ ತುಂಬರಮಟ್ಟಿ ಹೆರಕಲ್ ನಡುವಿನ ರಸ್ತೆ ಡಾಂಬರೀಕರಣ, ರಸ್ತೆ ಸುಧಾರಣೆ ಹಾಗೂ ರಸ್ತೆಯ ನಾಲ್ಕು ಕಡೆಯಲ್ಲಿ ಸಿಡಿ ನಿರ್ಮಾಣ ಕಾಮಗಾರಿಗೆ ತುಂಬರಮಟ್ಟಿ ಗ್ರಾಮದಲ್ಲಿ ಭೂಮಿ ಪೂಜೆಯನ್ನು ಶಾಸಕ ಜೆ.ಟಿ. ಪಾಟೀಲ ನೆರವೇರಿಸಿದರು. ಹಿರಿಯರಾದ ಮಲ್ಲಯ್ಯ ಕಂಬಿ, ರಸೂಲ್ ಮುಜಾವರ, ಗುತ್ತಿಗೆದಾರ ನಾರಾಯಣ ಹಾದಿಮನಿ ಸೇರಿದಂತೆ ಹಿರಿಯರು ಇದ್ದರು.