ಸಾರಾಂಶ
ಕಾಗವಾಡ : ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಪಂಚ್ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಮುಂಬರುವ 20 ವರ್ಷಗಳು ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರಲಿದ್ದು, ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ಪಂಚ್ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆವರೆಗೆ ಮಾತ್ರ ಸೀಮಿತವಾಗಿರುತ್ತವೆ. ನಂತರ ಅವುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿರೋಧ ಪಕ್ಷದವರು ಆರೋಪಿಸುತ್ತಿರುವುದು ಶುದ್ಧ ಸುಳ್ಳು. ರಾಜ್ಯದಲ್ಲಿ ಮುಂದಿನ 5 ವರ್ಷವೂ ನಮ್ಮ ಕಾಂಗ್ರೆಸ್ ಸರ್ಕಾರವೇ ಇರಲಿದೆ. ನಮ್ಮ ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಯೋಜನೆಯು ಶೇ. 98.88 ರಷ್ಟು ಅನುಷ್ಠಾನಗೊಂಡಿದೆ ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ನೂತನವಾಗಿ ಕಾಗವಾಡ ತಾಲೂಕಿನಲ್ಲಿ ಆಯ್ಕೆಗೊಂಡಿರುವ 36 ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ಈ ವೇಳೆ ತಹಸೀಲ್ದಾರ್ ರಾಜೇಶ ಬುರ್ಲಿ, ತಾಪಂ ಈಒ ವೀರಣ್ಣ ವಾಲಿ, ಸಿಡಿಪಿಒ ಸಂಜೀವಕುಮಾರ ಸದಲಗಿ, ಪಪಂ ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಮುಖಂಡರಾದ ಶಂಕರ ವಾಘೊಡೆ, ರಮೇಶ ಚೌಗಲಾ, ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ಪ್ರಕಾಶ ಪಾಟೀಲ, ಸೌರಭ ಪಾಟೀಲ, ಸುಭಾಶ ಪಾಟೀಲ, ಉಮೇಶಗೌಡ ಪಾಟೀಲ, ರಾಜು ಮದನೆ, ರಾಜೇಂದ್ರ ಚೌಗುಲಾ, ಪ್ರಕಾಶ ಹೆಮಗೀರೆ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ
ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ ಅಕಿವಾಟೆ, ಸತೀಶ ಯರಂಡೋಲೆ, ಪ್ರಕಾಶ ಗಾಣಿಗೇರ, ಅಮರ ಪಾಟೀಲ, ಮಹಾಂತೇಶ
ಬಡಿಗೇರ, ಅಕ್ಷಯ ಪಾಟೀಲ, ಅರವಿಂದ ನರೋಟಿ, ಮುರುಗೇಶ ಕುಂಬಾರ, ಮಹಾದೇವಿ ಮಾಕಣ್ಣವರ, ಗುರುಪಾದ ಮಗದುಮ್ಮ, ವಿದ್ಯಾನಂದ ತೇಲಿ, ರಾವಸಾಬ ಪಾಟೀಲ, ಅಜೀತ್ ಕಟಗೇರಿ, ಸತೀಶ ಬಿರಾದಾರ, ರೋಹಿತ ಚನ್ನಬಸಯ್ಯ, ರೋಹಿತ ಬಸನಾಯ್ಕ, ಅಣ್ಣಾಸಾಬ ಖೋತ ಸೇರಿದಂತೆ ತಾಲೂಕಿನ ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಅಧಿಕಾರಿಗಳು ಉಪಸ್ಥಿತರಿದ್ದರು.
ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆವರೆಗೆ ಮಾತ್ರ ಸೀಮಿತವಾಗಿರುತ್ತವೆ. ನಂತರ ಅವುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿರೋಧ ಪಕ್ಷದವರು ಆರೋಪಿಸುತ್ತಿರುವುದು ಶುದ್ಧ ಸುಳ್ಳು. ರಾಜ್ಯದಲ್ಲಿ ಮುಂದಿನ 5 ವರ್ಷವೂ ನಮ್ಮ ಕಾಂಗ್ರೆಸ್ ಸರ್ಕಾರವೇ ಇರಲಿದೆ. ನಮ್ಮ ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಯೋಜನೆಯು ಶೇ. 98.88 ರಷ್ಟು ಅನುಷ್ಠಾನಗೊಂಡಿದೆ.
- ರಾಜು ಕಾಗೆ, ಶಾಸಕ.