ಸಾರಾಂಶ
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರೇಣುಕ ಪ್ರಸಾದ್ ಡಿ.ಎಸ್., ಉಪಾಧ್ಯಕ್ಷರಾಗಿ ಕಂಚಿ ರಾಯಿ ಟಿ.ಟಿ. ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರೇಣುಕ ಪ್ರಸಾದ್ ಡಿ.ಎಸ್., ಉಪಾಧ್ಯಕ್ಷರಾಗಿ ಕಂಚಿ ರಾಯಿ ಟಿ.ಟಿ. ಅವಿರೋಧವಾಗಿ ಆಯ್ಕೆಯಾದರು.ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ರೇಣುಕಾ ಪ್ರಸಾದ್, ರೈತರಿಗೆ ಸಿಗಬೇಕಾದಂತಹ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದಕ್ಕೆ ಬದ್ಧನಾಗಿದ್ದು, ಇಲ್ಲಿಗೆ ಬೇಕಾದಂತಹ ಅಡಿಕೆ ಗೋಡನ್, ವಾಹನ ಸಾಲ, ರೈತರಿಗೆ ನೀಡಬೇಕಾದಂತಹ ಸಾಲ, ಗೊಬ್ಬರ ಸೇರಿದಂತೆ ಎಲ್ಲ ರೀತಿಯ ಅನುಕೂಲವನ್ನು ಮಾಡಲು ನಮ್ಮೆಲ್ಲ ನಿರ್ದೇಶಕರುಗಳ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ. ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಚುನಾವಣಾ ಅಧಿಕಾರಿಯಾಗಿ ಮಾಲತೇಶ್, ಸಿಇಒ ಓಂಕಾರ ಮೂರ್ತಿ ಕೆಲಸ ನಿರ್ವಹಿಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಕಂಚಿರಾಯಿ, ಪರಶಿವಮೂರ್ತಿ, ಮಂಜುನಾಥ್ ಡಿ. ಎಂ., ಸತೀಶ್, ಮಂಜುನಾಥ್ ಎಸ್.ಎಂ., ಬಸವರಾಜು ಎಚ್., ಯೋಗೀಶ್ ಎಚ್.ಪಿ., ಭವ್ಯಾ ಎನ್.ಎನ್., ಮೋನಿಕಾ ಡಿ., ಶ್ರೀಪತಿ, ಸಿದ್ದಗಂಗಯ್ಯ ಪಿ.ಜೆ., ಡಿಸಿಸಿ ಬ್ಯಾಂಕ್ ಹಾರನಹಳ್ಳಿ ಪ್ರಭಾಕರ್ ಸೇರಿದಂತೆ ಅವರ ಅಭಿಮಾನಿಗಳು ಹಲವು ಮುಖಂಡರು ಹಾಜರಿದ್ದರು.ಫೊಟೊತಾಲೂಕಿನ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಿ.ಎಸ್. ರೇಣುಕ ಪ್ರಸಾದ್, ಉಪಾಧ್ಯಕ್ಷರಾಗಿ ಕಂಚಿ ರಾಯಿ ಟಿ.ಟಿ. ಅವಿರೋಧವಾಗಿ ಆಯ್ಕೆಯಾದರು.