ಹುಕ್ಕೇರಿ ಹಿರೇಮಠದಲ್ಲಿ ಗುಡ್ಡಾಪುರ ದಾನಮ್ಮದೇವಿ ಪುರಾಣ

| Published : Sep 23 2024, 01:27 AM IST

ಹುಕ್ಕೇರಿ ಹಿರೇಮಠದಲ್ಲಿ ಗುಡ್ಡಾಪುರ ದಾನಮ್ಮದೇವಿ ಪುರಾಣ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ ಹಿರೇಮಠದಲ್ಲಿ ದಸರಾ ಉತ್ಸವ ಅ.3 ರಿಂದ 12ರವರೆಗೆ ನಿತ್ಯ ಸಂಜೆ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹುಕ್ಕೇರಿ ಹಿರೇಮಠದ ಪೀಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಹುಕ್ಕೇರಿ ಹಿರೇಮಠದಲ್ಲಿ ದಸರಾ ಉತ್ಸವ ಅ.3 ರಿಂದ 12ರವರೆಗೆ ನಿತ್ಯ ಸಂಜೆ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹುಕ್ಕೇರಿ ಹಿರೇಮಠದ ಪೀಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಐಗಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ದಸರಾ ಉತ್ಸವ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿ, ನವರಾತ್ರಿಯಲ್ಲಿ ಗುಡ್ಡಾಪುರ ದಾನಮ್ಮಾ ದೇವಿ ಪುರಾಣವನ್ನು ಸಿದ್ದಲಿಂಗ ಕೈವಲ್ಯಾಶ್ರಮ ಹುಣಶಾಳ ಪಿ.ಜಿ. ಪೀಠಾಧ್ಯಕ್ಷ ನಿಜಗುಣದೇವ ಸ್ವಾಮೀಜಿ ಪಠಣ ಮಾಡುವರು. 3ರಂದು ದಸರಾ ಉತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಜನಪ್ರತಿನಿಧಿಗಳು, ವಿವಿಧ ಮಠಾಧೀಶರು ಆಗಮಿಸುವರು. ಸಾಧಕರಿಗೆ ಸನ್ಮಾನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿವೆ. ಕೋಹಳ್ಳಿ ಗ್ರಾಮದ ಹಿರಿಯ ಭಕ್ತ ಶಿವರಾಯ ಮಂಟೂರ ಮಾತನಾಡಿ, ಹಿರೇಮಠದಲ್ಲಿ ನಡೆಯುವ ದಸರಾ ಉತ್ಸವದಲ್ಲಿ ಸುಮಾರು 100 ಜನ ಭಕ್ತರು ಲಿಂಗ ದೀಕ್ಷೆ ಪಡೆಯಲಿದ್ದೇವೆ ಎಂದು ಹೇಳಿದರು.ಮಹಾನಿಂಗಪ್ಪ ಮಂಟೂರ, ಚನಬಸು ಕನಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಗೌಡ ಪಾಟೀಲ, ಅಪ್ಪಾಸಾಬ ಕನಶೆಟ್ಟಿ, ಪ್ರಶಾಂತ ಕನಶೆಟ್ಟಿ, ಮುರುಘೇಶ ಕನಶೆಟ್ಟಿ, ಶ್ರೀಶೈಲ ಕನಶೆಟ್ಟಿ, ಧರಿಗೌಡ ಪಾಟೀಲ ಅನೇಕರು ಇದ್ದರು.