ಸಾರಾಂಶ
ತರಗತಿ ಬಹಿಷ್ಕರಿಸಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚನ್ನಗಿರಿಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ನಡುವಿನ ಹಗ್ಗ ಜಗ್ಗಾಟದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳಿಲ್ಲದೇ ಕಳೆದ 20 ದಿನದಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಯ ಕೊಠಡಿಯಲ್ಲಿ ಕುಳಿತು ಎದ್ದು ಬರುವಂತಾಗಿದೆ.
ಚನ್ನಗಿರಿ ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ತರಗತಿಗಳ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಸುಮಾರು 1500ಕ್ಕೂ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತಿಲ್ಲ.ಕಾಲೇಜಿನಲ್ಲಿ 27 ಮಂದಿ ಕಾಯಂ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರಿದ್ದರೆ 44 ಮಂದಿ ಅತಿಥಿ ಉಪನ್ಯಾಸಕರಿದ್ದು, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಗೆ ಕಾಯಂ ಉಪನ್ಯಾಸಕರು ಬಿಟ್ಟರೆ ಉಳಿದ ಪಠ್ಯ ವಿಷಯಗಳಿಗೆ ಸಂಬಂಧಪಟ್ಟ ಕಾಯಂ ಉಪನ್ಯಾಸಕರು ಈ ವಿಭಾಗಗಳಲ್ಲಿ ಓದುವ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.
ಪರೀಕ್ಷೆ ಹೇಗೆ ಬರೆಯಬೇಕು?ಮುಂದಿನ 15ರಿಂದ 20ದಿನಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಲಿದ್ದು, ಈ ವರೆಗೂ ಪಾಠಗಳಾಗದೆ ಪರೀಕ್ಷೆ ಹೇಗೆ ಬರೆಯಬೇಕು ಎಂದು ತಿಳಿಯದಂತಾಗಿದ್ದು ಕಳೆದ 2020-21ರಿಂದ ಜಾರಿಗೆ ಬಂದ ಎನ್.ಇ.ಪಿ (ಹೊಸ ಶಿಕ್ಷಣ ನೀತಿ) ಯಿಂದ ಎಲ್ಲಾ ವಿಷಯಗಳ ಪಠ್ಯ ಪುಸ್ತಕಗಳು ಬದಲಾವಣೆಗೊಂಡಿದ್ದು ಹೊಸ ಶಿಕ್ಷಣ ನೀತಿಯ ಪಠ್ಯಕ್ರಮಗಳಿಗೆ ಅನುಗುಣ ವಾದ ಪುಸ್ತಕಗಳು ಈ ವರೆಗೂ ಕಾಲೇಜಿನ ಗ್ರಂಥಾಲಯದಲ್ಲಿ ತರಿಸಿಲ್ಲ ಅತಿಥಿ ಉಪನ್ಯಾಸಕರ ಮುಷ್ಕರದಿಂದ ತರಗತಿಗಳು ನಡೆಯದೆ ಮತ್ತು ಗ್ರಂಥಾಲಯದಲ್ಲಿ ಹೊಸ ಶಿಕ್ಷಣ ನೀತಿಯ ಪುಸ್ತಕಗಳಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಮನನೊಂದು ಹೇಳುತ್ತಾರೆ.
ರಾಜ್ಯದ ಸಮಸ್ಯೆ:ಈ ಬಗ್ಗೆ ಕಾಲೇಜಿನ ಪ್ರಾಚಾರ್ಯ ಅಮೃತೇಶ್ವರ್ ರನ್ನು ವಿಚಾರಿಸಿದಾಗ ಇದು ರಾಜ್ಯದ ಸಮಸ್ಯೆಯಾಗಿದ್ದು ನಮ್ಮ ಕಾಲೇಜಿನಲ್ಲಿ 27 ಮಂದಿ ಕಾಯಂ ಉಪನ್ಯಾಸಕರಿದ್ದು ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಗೆ ಪ್ರತಿದಿನ ಎರಡು ತರಗತಿಗಳು ಕಲಾ ವಿಭಾಗದಲ್ಲಿ ಮೂರು ತರಗತಿಗಳು ನಡೆಸಲಾಗುತ್ತಿದೆ ಎಂದು ಹೇಳುತ್ತಾರೆ.ನಮ್ಮ ಹೋರಾಟ ನಿಲ್ಲಿಸಲ್ಲ
ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಸುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು.ಯರಗಟ್ಟಿಹಳ್ಳಿ ಶಿವಕುಮಾರ್, ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ