ಫೆಬ್ರವರಿಯಲ್ಲಿ ಗುಲ್ಬರ್ಗ ಸಿಮೆಂಟ್ ಕಾರ್ಖಾನೆ ಕಾರ್‍ಯಾರಂಭಗೊಳಿಸಲು ಸಾರ್ವಜನಿಕ ಸಭೆಯಲ್ಲಿ ನಿರ್ಧಾರ

| Published : Aug 10 2024, 01:36 AM IST / Updated: Aug 10 2024, 01:32 PM IST

ಫೆಬ್ರವರಿಯಲ್ಲಿ ಗುಲ್ಬರ್ಗ ಸಿಮೆಂಟ್ ಕಾರ್ಖಾನೆ ಕಾರ್‍ಯಾರಂಭಗೊಳಿಸಲು ಸಾರ್ವಜನಿಕ ಸಭೆಯಲ್ಲಿ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಫೆಬ್ರವರಿಯಲ್ಲಿ ಗುಲ್ಬರ್ಗ ಸಿಮೆಂಟ್ ಕಾರ್ಖಾನೆ ಕಾರ್‍ಯಾರಂಭಗೊಳಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು 

 ಕಲಬುರಗಿ :  ಫೆಬ್ರವರಿಯಲ್ಲಿ ಗುಲ್ಬರ್ಗ ಸಿಮೆಂಟ್ ಕಾರ್ಖಾನೆ ಕಾರ್‍ಯಾರಂಭಗೊಳಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಫರಹತಾಬಾದ್ ಹತ್ತಿರ ಕಂಪನಿ ನಿರ್ಮಾಣದ ಸ್ಥಳದಲ್ಲಿ ನಡೆದ ಸಭೆಯಲ್ಲಿ ಜಮೀನು ಕಖೆದುಕೊಂಡ ರೈತರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

ಪ್ರತಿ ಎಕರೆಗೆ 12 ಲಕ್ಷ ರು. ನೀಡಿ ಜಮೀನು ಖರೀದಿಸಲಾಗಿದ್ದು, 16 ಲಕ್ಷ ರು. ನೀಡುವಂತೆ ಮನವಿ ಮಾಡಿದರು. 250 ಹೆಕ್ಟೇರ್‌ ಜಮೀನು ಖರೀದಿಸಲಾಗಿದ್ದು, ವಾರ್ಷಿಕ 2 ಮಿಲಿಯನ್ ಟನ್ ಸಾಮರ್ಥ್ಯದ ಕ್ಲಿಂಕರ್ ಮತ್ತು 25 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಉತ್ಪಾದನೆ ಜೋತೆ ವಿದ್ಯುತ್ ತಯಾರಿಕೆ ಘಟಕ ಸ್ಥಾಪಿಸಲಾಗುವುದು ಮತ್ತು ವಸತಿ ಕಾಲೋನಿ ನಿರ್ಮಿಸಲಾಗುವುದು ಎಂದು ಕಂಪನಿ ಅಧಿಕಾರಿಗಳು ಕಾರ್ಯಯೋಜನೆ ಕುರಿತು ಮಾಹಿತಿ ನೀಡಿದರು.

ಶೇ.38ರಷ್ಟು ಪ್ರದೇಶವನ್ನು ಹಸಿರು ಪ್ರದೇಶಕ್ಕೆ ಮೀಸಲಿಡಲಾಗಿದೆ. ಇಲ್ಲಿವರೆಗೂ 8760 ಸಸಿ ನಡೆಲಾಗಿದೆ. ಸರ್ಕಾರದ ನಿಗದಿತ ಮಾನದಂಡದಂತೆ ಪರಿಸರ ಮಾಲಿನ್ಯ ನಿಯಂತ್ರಿಸಲು ಕಂಪನಿ ಸಿದ್ಧತೆ ಮಾಡಿಕೊಂಡಿದೆ ಎಂದರು.

ಜಮೀನು ಪಡೆದ ಹಳ್ಳಿಗಳಲ್ಲಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಕಂಪನಿ ವತಿಯಿಂದ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ, ವೈದ್ಯಕೀಯ ಸೌಲಭ್ಯ ಒದಗುಸಲಾಗುವುದು. ಮಹಿಳಾ ಸಮಬಲೀಕರಣಕ್ಕಾಗಿ ಮಹಿಳೆಯರಿಗೆ ಹೊಲಿಗೆಯಂತ್ರ, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ತಟ್ಟೆ, ಗ್ಲಾಸ್ ವಿತರಿಸಲಾಗುವುದು ಎಂದು ಕಂಪನಿಯ ಉದ್ದೇಶ ಕುರಿತು ಮಾಹಿತಿ ನೀಡಿದರು.

ನಂತರ ಜಿಲ್ಲಾಧಿಕಾರಿ ಭಿ.ಫೌಜಿಯಾ ತನರುಮ್ ಮಾತನಾಡಿ, ಜಮೀನು ನೀಡಿದ ರೈತರಿಗೆ ಎಲ್ಲ ಸೌಲಭ್ಯ ನೀಡಬೇಕು. ಸರ್ಕಾರದ ನಿಯಮ ಪಾಲಿಸಬೇಕು ಹಾಗೂ ಕಂಪನಿಯಲ್ಲಿ ಸ್ಥಳೀಯಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಕಂಪನಿ ಮ್ಯಾನೇಜರ್ ಪು. ಶ್ರೀನಿವಾಸ, ದಿನೇಶ ಬೋಹರಾ, ಹಿರಿಯ ಪರಿಸರ ನಿಯಂತ್ರಣಾಧಿಕಾರಿ ರೇಖಾ, ಕಂಪನಿಯ ಹಿರಿಯ ಅಧಿಕಾರಿ ಸತೀಶ ಕುಮಾರ ಹಾಗೂ ರೈತರು ಪಾಲ್ಗೊಂಡಿದ್ದರು.

ಹೊನ್ನಕಿರಣಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲಿನಾಥ ಕೆ ಭೂಸ. ಫಿರೋಜೋಬಾದ ಗ್ರಾಪಂ ಅಧ್ಯಕ್ಷ ಹಾಗೂ ಸರ್ವ ಸದಸ್ಯರು. ರೈತರು ಮತ್ತು ರೈತ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷರಾದ ಸಾಯಿಬಣ್ಣ ನೀಲಪಗೂಳ. ರಮೇಶ್ ನಾಟಿಕರ. ಬಸವರಾಜ್ ಚಟ್ಟಿ. ಶರಣಪ್ಪ ಕೆ ಬೂಸ. ಶಿವಯೋಗಪ್ಪ ಸೋಮಜಾಳ. ಮಷೇಕ್ ಪಟೇಲ್. ಲತೀಫ್ ಜಾಗಿರದಾರ. ಸಿದ್ದಣ್ಣ ಅರಳಿ ಮಾತನಾಡಿದರು.