ಗುಲ್ಬರ್ಗ ವಿವಿ ಘಟಿಕೋತ್ಸವ: 13 ಚಿನ್ನದ ಪದಕ ಪಡೆದ ಆನಂದಮ್ಮ

| Published : Aug 10 2024, 01:34 AM IST

ಗುಲ್ಬರ್ಗ ವಿವಿ ಘಟಿಕೋತ್ಸವ: 13 ಚಿನ್ನದ ಪದಕ ಪಡೆದ ಆನಂದಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಗಲ್ಬರ್ಗ ವಿವಿ 42 ನೇ ವಾರ್ಷಿಕ ಘಟಿಕೋತ್ಸವ ಇದೇ ಆ.12ರ ಸೋಮವಾರ ನಿಗದಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿಯ ಅರ್ಹ 29,307 ವಿದ್ಯಾರ್ಥಿಗಳ ಪೈಕಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಜಿ ಹಾಕಿರುವ ಅರ್ಹ 8,307 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಗಲ್ಬರ್ಗ ವಿವಿ 42ನೇ ವಾರ್ಷಿಕ ಘಟಿಕೋತ್ಸವ ಇದೇ ಆ.12ರ ಸೋಮವಾರ ನಿಗದಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿಯ ಅರ್ಹ 29,307 ವಿದ್ಯಾರ್ಥಿಗಳ ಪೈಕಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಜಿ ಹಾಕಿರುವ ಅರ್ಹ 8,307 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.

ಇಂದಿಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ ವಿವಿ ಕುಲಪತಿ ಡಾ. ದಯಾನಂದ ಅಗಸರ್‌ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈ ಬಾರಿ ವಿವಿ ಕೊಡುತ್ತಿರುವ 177 ಚಿನ್ನದ ಪದಕಗಳಲ್ಲಿ 52 ಹೆಮ್ಮಕ್ಕಳೇ ಭಾಜನರಾಗಿ ಮೇಲುಗೈ ಸಾಧಿಸಿದ್ದಾರೆ, 22 ವಪುರುಷರು ಚಿನ್ನಕ್ಕೆ ಭಾಜನರಾಗಿದ್ದಾರೆಂದು ಹೇಳಿದರು.

ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿರುವ ಆನಂದಮ್ಮ ಅತೀ ಹೆಚ್ಚಿನ 13 ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾಳೆ, ಕ್ರಮವಾಗಿ ಪ್ರಾಣಿಸಶಾಸ್ತ್ರ ವಿಭಾಗದ ಪೂರ್ವಿಕಾ ಗದ್ವಾಲ್‌ 7, ಎಂಬಿಎ ವಿಭಾಗದ ಅಭಿಷೇಕ, ಎಂಎಸ್‌ಡಬ್ಲೂ ವಿಭಾಗದ ಅಂಬಿಕಾ, ರಾಜ್ಯಶಾಸ್ತ್ರ ವಿಭಾಗದ ಪಲ್ಲವಿ ಕತಲಾ 6, ಸಸ್ಯಶಾಸ್ತ್ರದ ಅಫ್ರೀನ್‌ ಸುಲ್ತಾನಾ, ರಸಾಯನಶಾಸ್ತ್ರದಲ್ಲಿ ವಿಷ್ಣುಕಾಂತ, ಎಂಎಸಿ ನಲ್ಲಿ ಮಲ್ಕಮ್ಮ, ಮೈಕ್ರೋಬಯಾಲಜಿಯಲ್ಲಿ ಪ್ರೇಮಾ ಶರಣಪ್ಪ ತಲಾ 5 ಚಿನ್ನದ ಪಕದ ಪಡೆದಿದ್ದಾರೆ.

ಇ‍ವರೆಲ್ಲರಿಗೂ ರಾಜ್ಯಪಾಲರಾದ ಥಾವರಚಂದ್‌ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್‌ ಪದಕಗಳನ್ನು ನೀಡಿ ಗೌರವಿಸಲಿದ್ದಾರೆ, ಗೋವಾದಲ್ಲಿರುವ ಸಾಗರಶಾಸ್ತ್ರ ವಿಜ್ಞಾನಿ ಸುನೀಲ ಕುಮಾರ್ ಸಿಂಗ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆಂದು ಕುಲಪತಿ ಡಾ. ಅಗಸರ್‌ ಘಟಿಕೋತ್ಸವದ ಮಾಹಿತಿ ನೀಡಿದರು.

ಅರ್ಚನಾ ತಿವಾರಿ, ಲಕ್ಷ್ಮಣ ದಸ್ತಿ, ಲಿಂಗರಾಜಪ್ಪಗೆ ಗೌರವ ಡಾಕ್ಟರೇಟ್‌: ಗುವಿವಿ ಈ ಬಾರಿ ತನ್ನ ಘಟಿಕೋತ್ಸವದಲ್ಲಿ ನ್ಯಾಯಾಂಗದಲ್ಲಿನ ಸಾಧನೆಗಾಗಿ ಅರ್ಚನಾ ತಿವಾರಿ, ಹೋರಾಟ, ಪ್ರಾದೇಶಿಕ ಅಸಮಾನತೆ ವಿಚಾರದಲ್ಲಿನ ಹೋರಾಟಕ್ಕಾಗಿ ಲಕ್ಷ್ಮಣ ದಸ್ತಿ, ಕೃಷಿ ಉದ್ಯಮ ಶೀಲತೆಗಾಗಿ ಲಿಂಗರಾಜಪ್ಪ ಅಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಿದೆ. ಲಿಂಗರಾಜಪ್ಪ ಅಪ್ಪ ಅವರು ವಿಶ್ವ ಹಿಂದು ಪರಿಷತ್‌ನ ಉತ್ತರ ಪ್ರಾಂತದ ಅಧ್ಯಕ್ಷರೂ ಆಗಿದ್ದು ಕೆಲಸ ಮಾಡುತ್ತಿದ್ದಾರೆ. ಗೌರವ ಡಾಕ್ಟರೇಟ್‌ಗೆ ಒಟ್ಟು 15 ಸಾಧಕರ ವಿವರ ಬಂದಿದ್ದವು. ಈ ಪೈಕಿ ಪರಿಣಿತರ ಸಮೀತಿ 12 ಜನರ ಹೆಸರು ಅಂತಿಮಗೊಳಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು, ಈ ಪೈಕಿ ರಾಜ್ಯಪಾಲರು ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆಂದು ಕುಲಪತಿ ಡಾ. ಅಗಸರ್‌ ಮಾಹಿತಿ ನೀಡಿದರು.ಜ್ಞಾನಗಂಗೆ ಘಟಿಕೋತ್ಸವದಲ್ಲಿ....

29, 307- ಪದವಿ, ಸ್ನಾತಕೋತ್ತರ ಪದವಿಗೆ ಅರ್ಹರು

25, 898- ಸ್ನಾತಕ ಪದವಿಗೆ ಅರ್ಹರು

3, 225- ಸ್ನಾತಕೋತ್ತರ ಪದವಿಗೆ ಅರ್ಹರು

8, 307- ಪದವಿ, ಸ್ನಾತಕ ಪದವಿಗೆ ಅರ್ಜಿ ಹಾಕಿದವರು

25, 829- ಅರ್ಜಿ ಹಾಕದವರು, ಆದರೆ ಪದವಿಗೆ ಅರ್ಹರು

113- ಪಿಎಚ್‌ಡಿ ಪಡೆಯುವವರ ಸಂಖ್ಯೆ