ಗನ್‌ ಫೈರಿಂಗ್: ಯುವಕ ಆತ್ಮಹತ್ಯೆ

| Published : May 13 2025, 01:19 AM IST

ಸಾರಾಂಶ

ಹೊಸಕೋಟೆ: ವ್ಯವಹಾರದಲ್ಲಿ ನಷ್ಟವಾದ್ದರಿಂದ ಮನನೊಂದ ಯುವಕನೊಬ್ಬ ಸಿಂಗಲ್ ಬ್ಯಾರಲ್ ಗನ್‌ನಿಂದ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಸೊಮವಾರ ಬೆಳಿಗ್ಗೆ ನಡೆದಿದೆ.

ಹೊಸಕೋಟೆ: ವ್ಯವಹಾರದಲ್ಲಿ ನಷ್ಟವಾದ್ದರಿಂದ ಮನನೊಂದ ಯುವಕನೊಬ್ಬ ಸಿಂಗಲ್ ಬ್ಯಾರಲ್ ಗನ್‌ನಿಂದ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಸೊಮವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೇವಿಶೆಟ್ಟಿಹಳ್ಳಿ ಬೈಯೇಶ್(28) ಫೈರಿಂಗ್ ಮಾಡಿಕೊಂಡು ಮೃತಪಟ್ಟಿರುವ ಯುವಕ.

ವಿದೇಶದಲ್ಲಿ ವ್ಯಾಸಂಗ ಮುಗಿಸಿ ಬಂದಿದ್ದ ಬೈಯೇಶ್ ಸ್ವಂತ ಉದ್ಯಮ ಮಾಡಲು ಪೋಷಕರಿಂದ ಹಣ ಪಡೆದಿದ್ದ. ವ್ಯವಹಾರದಲ್ಲಿ ಸಾಕಷ್ಟು ನಷ್ಟ ಸಂಭವಿಸಿತ್ತು. ಇದರಿಂದ ಮನನೊಂದು ಸೋಮವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಗನ್‌ನಿಂದ ಫೈರಿಂಗ್ ಮಾಡಿಕೊಂಡಿದ್ದಾನೆ.

ಕುಟುಂಬಸ್ಥರೆಲ್ಲ ತಿರುಪತಿ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಸೋಮವಾರ ಬೆಳಗ್ಗೆ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಮಧ್ಯಾಹ್ನ ಯುವಕನ ಅಂತ್ಯಕ್ರಿಯೆ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ಜರುಗಿತು.

ಪೋಷಕರು ನೀಡಿದ ದೂರಿನ ಮೇರೆಗೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಫೋಟೊ: 12 ಹೆಚ್‌ಎಸ್‌ಕೆ 3

ಆತ್ಮಹತ್ಯೆ ಮಾಡಿಕೊಂಡ ಯುವಕ ಬೈಯೇಶ್