ಪಟ್ಟಣದಲ್ಲಿ ಬೀಡಾಡಿ ದನಗಳ ಕಾಟಕ್ಕೆ ವಾಹನಗಳ ಸವಾರರು ಹೈರಾಣವಾಗಿದ್ದು ಪುರಸಭೆ ಹಾಗೂ ಸ್ಥಳೀಯ ಪೊಲೀಸರ ವಿರುದ್ಧ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದಲ್ಲಿ ಬೀಡಾಡಿ ದನಗಳ ಕಾಟಕ್ಕೆ ವಾಹನಗಳ ಸವಾರರು ಹೈರಾಣವಾಗಿದ್ದು ಪುರಸಭೆ ಹಾಗೂ ಸ್ಥಳೀಯ ಪೊಲೀಸರ ವಿರುದ್ಧ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಪಟ್ಟಣದ ನಡುವಿನ ಮೈಸೂರು-ಊಟಿ ಮತ್ತು ಚಾಮರಾಜನಗರ ಮತ್ತು ಕೇರಳ ರಸ್ತೆಯ ಪುರಸಭೆ ವ್ಯಾಪ್ತಿಯ ರಸ್ತೆಯಲ್ಲಿ ಬೀಡಾಡಿ ದನಗಳ ಹಾವಳಿಗೆ ಸಂಪೂರ್ಣ ಬ್ರೇಕ್‌ ಹಾಕಲು ವಿಫಲವಾಗಿದೆ.

ಕನ್ನಡಪ್ರಭ ವರದಿ ಬಳಿಕ ಎಚ್ಚೆತ್ತು ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಂದೆರಡು ದನಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದರೂ ಬಿಡಾಡಿ ದನಗಳ ಹಾವಳಿ ನಿಂತಿಲ್ಲ.

ಪಟ್ಟಣದ ಮಹದೇವಪ್ರಸಾದ್‌ ನಗರದಿಂದ ಹಿಡಿದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ತನಕ ಹೆದ್ದಾರಿ ಹಾಗೂ ಹೆದ್ದಾರಿಯ ಡಿವೈಡರ್‌ ಮೇಲೆ ಜಾನುವಾರುಗಳು ಮಲಗಿದ್ದರೆ,ಕರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡುತ್ತಿವೆ.

ಆಕ್ರೋಶ:

ಪುರಸಭೆ ಅಧಿಕಾರಿಗಳು ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ. ಆದರೂ ಬೀಡಾಡಿ ದನ ಕರುಗಳ ಮಾಲೀಕರು ಸೊಪ್ಪು ಹಾಕದೆ ಮತ್ತೆ ಬಿಟ್ಟಿದ್ದಾರೆ.ಸುಗಮ ಸಂಚಾರಕ್ಕೆ ಪುರಸಭೆ ಹಾಗೂ ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸವಾರರು, ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಸಕರೇ ನೀವಾದ್ರೂ ಸೂಚಿಸಿ:

ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ವಾಹನಗಳ ಸವಾರರು ತತ್ತರಿಸಿ ಹೋಗಿದ್ದು, ವಾಹನಗಳ ಸವಾರರು ಪಟ್ಟಣದಲ್ಲಿ ವಾಹನಗಳ ಓಡಿಸಲು ಆಗುತ್ತಿಲ್ಲ. ಶಾಸಕರೇ ನೀವಾದ್ರು ಪುರಸಭೆ ಹಾಗೂ ಪೊಲೀಸರಿಗೆ ಸೂಚನೆ ನೀಡಿ ಬೀಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಿ ಎಂದು ಸವಾರರ ಆಗ್ರಹವಾಗಿದೆ.

ಜಾನವಾರು ಬಿಡದಂತೆ ತಡೆಯಲು ಪುರಸಭೆ ನಿರ್ಲಕ್ಷ್ಯ?:

ಗುಂಡ್ಲುಪೇಟೆ ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಬ್ರೇಕ್‌ ಹಾಕಬೇಕು ಎಂಬ ಸಾರ್ವಜನಿಕರ ಆಗ್ರಹ ಕೇಳಿ ಬಂದರೂ ಪುರಸಭೆ ಹಾಗೂ ಪೊಲೀಸರು ಬೀಡಾಡಿ ದನ,ಕರುಗಳ ಹಾವಳಿಗೆ ಬ್ರೇಕ್‌ ಹಾಕಲು ಇರುವ ಅಡ್ಡಿಯಾದರೂ ಏನು ಎಂದು ಸಾರ್ವಜನಿಕರು ಪುರಸಭೆ ಹಾಗೂ ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನ,ಕರುಗಳ ಹಾವಳಿ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಳಿಕ ಒಂದೆರಡು ದಿನ ದಂಡ ಹಾಕಿ ಎಚ್ಚರಿಕೆ ನೀಡಿ.ಪುರಸಭೆ ಮತ್ತೆ ಕೈ ತೊಳೆದು ಕೊಳ್ಳುತ್ತಿದೆ.

ಜನರ ಹಾಗು ಪ್ರಾಣಿಗಳ ಸಾವು,ನೋವಾದರೂ ಬೀಡಾಡಿ ದನ,ಕರುಗಳ ಹಿಡಿದು ಪಿಂಜರಾಫೋಲ್‌ ಕಳುಹಿಸಿದರೆ ಬೀಡಾಡಿ ದನ, ಕರು ಬಿಡುವುದಿಲ್ಲ. ಆದರೂ ಪುರಸಭೆ ಅಧಿಕಾರಿಗಳು ಏಕೆ ಈ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಪಟ್ಟಣದಲ್ಲಿ ಬೀಡಾಡಿ ದನ,ಕರುಗಳ ಬಿಡದಂತೆ ಪುರಸಭೆ ಎಚ್ಚರಿಕೆ ನೀಡಿದೆ ಅಲ್ಲದೆ ದಂಡ ಕೂಡ ಹಾಕಲಾಗಿದೆ ಈಗ ಮತ್ತೆ ಎಚ್ಚರಿಕೆ ನೀಡುತ್ತೇನೆ.ಸ್ಥಳೀಯ ಪೊಲೀಸರಿಗೆ ಪತ್ರ ಬರೆದು ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಪುರಸಭೆ ಮುಖ್ಯಾಧಿಕಾರಿ ಎಸ್‌.ಶರವಣ ಹೇಳಿದ್ದಾರೆ.

ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿ ಮಿತಿ ಮೀರಿದೆ. ಈ ಬಗ್ಗೆ ಪುರಸಭೆಗಿಂತ ಸ್ಥಳೀಯ ಪೊಲೀಸರು ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವ ಕೆಲಸ ಮಾಡುತ್ತಿಲ್ಲ ಎಂದು ಗುಂಡ್ಲುಪೇಟೆ ನಿವಾಸಿ ಮಹೇಶ್‌ ದೂರಿದ್ದಾರೆ.