ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಂಜನಗೂಡು ಮತ್ತು ಗುಂಡ್ಲುಪೇಟೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದ್ದು, ಹೆದ್ದಾರಿಯ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಇನ್ನು ಕೆಲಸಗಳು ಹಾಗೇ ಉಳಿದಿವೆ. ಪರಿಣಾಮ ಸುಗಮ ಸಂಚಾರ ನೆರವೇರುವ ತನಕ ಕಡಕೊಳ ಬಳಿಯ ಕೆ.ಎನ್. ದೊಡ್ಡಿ ಹಾಗೂ ಸುಲ್ತಾನ್ ಬತ್ತೇರಿ ರಸ್ತೆ ಕನ್ನೇಗಾಲದಲ್ಲಿ ಟೋಲ್ ಸಂಗ್ರಹಿಸದಂತೆ ದಿನನಿತ್ಯದ ವಾಹನ ಸವಾರರು ಆಗ್ರಹಿಸಿದ್ದಾರೆ.ರಸ್ತೆ ಸಂಪೂರ್ಣ ಹದಗೆಟ್ಟಿದ್ದರೆ ಅಥವಾ ಸಂಚಾರಕ್ಕೆ ಯೋಗ್ಯವಿಲ್ಲದಿದ್ದರೆ ಟೋಲ್ ಕಡಿಮೆ ಮಾಡಬೇಕು/ನಿಲ್ಲಿಸಬೇಕೆಂದು ಹಲವು ಹೈಕೋರ್ಟ್ ತೀರ್ಪುಗಳಿವೆ. ೨೦೨೩ರಲ್ಲಿ ಕೇರಳ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಕಾರಣ ಟೋಲ್ ನಿಲ್ಲಿಸಲು ಸೂಚನೆ ನೀಡಿತ್ತು. ಆದರೆ ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ದುಸ್ತರವಾದರೆ ನ್ಯಾಯಾಲಯ ಮಧ್ಯಪ್ರವೇಶ ಮಾಡಿದ ಸಾಕಷ್ಟು ಉದಾಹರಣೆಗಳಿವೆ ಎಂದು ವಕೀಲ ಮಹೇಶ್ ತಿಳಿಸಿದ್ದಾರೆ.ರಸ್ತೆ ಅಗಲೀಕರಣವಾಗುತ್ತಿರುವ ನಂಜನಗೂಡು-ಗುಂಡ್ಲುಪೇಟೆ ತನಕ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಹೆದ್ದಾರಿಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಶಾಸಕರು ಹಾಗೂ ಚಾಮರಾಜನಗರ ಸಂಸದರು ಸಂಚರಿಸುತ್ತಿದ್ದಾರೆ. ಆದರೆ ಶಾಸಕ, ಸಂಸದರು ರಸ್ತೆ ಹದಗೆಟ್ಟಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ಕಡಿತ/ವಿನಾಯ್ತಿ ಕೊಡಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಬಹುದಿತ್ತು. ಆದರೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ನಂಜನಗೂಡು ಬಳಿಯ ಹೊಸಹಳ್ಳಿ ಗೇಟ್,ಎಲಚಗೆರೆ ಗೇಟ್ ಮೇಲ್ಸೇತುವೆ ಹಾಗೂ ತಾಲೂಕಿನ ಹಿರೀಕಾಟಿ-ತೊಂಡವಾಡಿ, ರಾಘವಾಪುರ, ಅಗತಗೌಡನಹಳ್ಳಿ ಗೇಟ್ ಹಾಗೂ ಮಳವಳ್ಳಿ ಗೇಟ್‌ನಿಂದ ಗುಂಡ್ಲುಪೇಟೆ ತನಕ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದೆ.ಮೈಸೂರು-ಊಟಿ ಹೆದ್ದಾರಿಯಲ್ಲಿ ಗುಂಡ್ಲುಪೇಟೆಯಿಂದ ನಂಜನಗೂಡು ತನಕ ೬ರಿಂದ ೭ಕಡೆ ಮಾರ್ಗ ತಿರುವು, ಧೂಳು, ವಾಹನ ದಟ್ಟಣೆಯನ್ನು ಸವಾರರು ಹಾಗೂ ಸಾರ್ವಜನಿಕರು ಅನುಭವಿಸುತ್ತಿದ್ದಾರೆ.ಆದರೂ ಕಡಕೊಳ ಬಳಿಯ ಕೆ.ಎನ್. ಹುಂಡಿ ಹಾಗೂ ಗುಂಡ್ಲುಪೇಟೆ ಬಳಿಯ ಕನ್ನೇಗಾಲ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಟೋಲ್ ದರ ಶೇ.೨೫ರಿಂದ ೭೫ರಷ್ಟು ಕಡಿತಗೊಳಿಸಬೇಕು ಎಂದಿದೆ.ಕೆಲಸ ಆಮೆನಡಿಗೆ:ನಂಜನಗೂಡು-ಗುಂಡ್ಲುಪೇಟೆವರೆಗೆ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಂತೂ ಮಂದಗತಿಯಲ್ಲಿ ಸಾಗುತ್ತಿದೆ.ಗಮನಹರಿಸಲಿ:ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು ಕೇಂದ್ರ ಸಚಿವರೊಂದಿಗೆ ಚರ್ಚಿಸಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಟ್ ಕಡಿತಗೊಳಿಸಲು/ವಿನಾಯ್ತಿ ಕೊಡಿಸಲು ಪ್ರಯತ್ನಿಸಬೇಕಿದೆ ಎಂದು ಗೂಡ್ಸ್ ಟೆಂಪೋ ಚಾಲಕ ರಾಜೇಶ್ ಒತ್ತಾಯಿಸಿದ್ದಾರೆ.---ಕಡಕೊಳ ಬಳಿಯ ಕೆ.ಎನ್. ಹುಂಡಿ, ಗುಂಡ್ಲುಪೇಟೆ ಬಳಿ ಕನ್ನೇಗಾಲದಲ್ಲಿ ವಾಹನಗಳಿಂದ ವಸೂಲಿ ಮಾಡುವ ಶುಲ್ಕವನ್ನು ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವ ತನಕ ನಿಲ್ಲಿಸಬೇಕು. ಎನ್‌ಎಚ್‌ಎಐ ಟೋಲ್ ನಿಲ್ಲಿಸದಿದ್ದಲ್ಲಿ ಸವಾರರು ಟೋಲ್ ನಿರಾಕರಣ ಚಳವಳಿ ನಡೆಸಬೇಕಾಗುತ್ತದೆ.
- ಮನುಶ್ಯಾನ್ ಭೋಗ್, ವಕೀಲರು.---7ಜಿಪಿಟಿ11ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು,ಸದ್ಯಕ್ಕೀಗ ನಿಂತಿದೆ.7ಜಿಪಿಟಿ12ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗೇಟ್ ಬಳಿ ರಸ್ತೆ ಕಾಮಗಾರಿ ಹಿನ್ನಲೆ ಟ್ರಾಫಿಕ್ ಜಾಮ್ ಆಗಿರುವುದು.೨೫ಜಿಪಿಟಿ೩ಮನುಶ್ಯಾನ್ ಭೋಗ್