ಸಾರಾಂಶ
ಕಣ್ಣಿಗೆ ಕಾಣುವ ಗುರುವನ್ನು ಅಲಕ್ಷ್ಯ ಮಾಡಬೇಡಿ.
ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಕೋಲ ಶಾಂತೇಶ್ವರ ಮಠದಲ್ಲಿ ಮೂರು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂತಿಮ ದಿನ ಸೋಮವಾರ 108 ಸ್ವಾಮೀಜಿಗಳ ಪಾದ ಪೂಜೆಯನ್ನು ಭಕ್ತರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಂಬಳ -ಗದಗದ ಡಾ.ತೋಂಟದ ಸಿದ್ದರಾಮ ಶ್ರೀ, ಕಾಣದೇ ಇರುವ ದೇವರನ್ನು ನೋಡಲು ಗುಡಿಗಳಿಗೆ ಹೋದರೆ ಏನೂ ಪ್ರಯೋಜನವಿಲ್ಲ. ಕಾಣುವ ದೇವರೆಂದರೆ ಅದು ಗುರು ಮಾತ್ರ ಎಂದು ಹೇಳಿದರು.ಕಣ್ಣಿಗೆ ಕಾಣುವ ಗುರುವನ್ನು ಅಲಕ್ಷ್ಯ ಮಾಡಬೇಡಿ. ಶಾಂತಲಿಂಗ ದೇಶೀಕೇಂದ್ರ ಶ್ರೀ ಛಲದಿಂದ ಇಂತಹ ಮಹತ್ವ ಕಾರ್ಯಗಳನ್ನು ಮಾಡಿದ್ದಾರೆ. ನಾವು ಗುರುವನ್ನು ಆಶ್ರಯಿಸಬೇಕು. ಸಮಾಜದಲ್ಲಿ ಗುರುವೇ ಶ್ರೇಷ್ಠ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಸುಮಾರು 3 ಕಿ.ಮೀ.ವರೆಗೆ ವಿವಿಧ ವಾದ್ಯಗಳಾದ ಕಂಸಾಳೆ, ಚಂಡಿಮೇಳ, ಕುದುರೆ, ನಂದಿಕೋಲು, ಸಮಾಳ, ಹಲಗೆ, ಡಿಜೆಗೆ ಯುವಕರು ನೃತ್ಯ ಮಾಡುತ್ತಾ, ಮಹಿಳೆಯರ ಕಳಸ, ಕುಂಭದೊಂದಿಗೆ 108 ಸ್ವಾಮಿಗಳಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.ವಿವಿಧ ಮಠಾಧೀಶ್ವರರು ಊರಿನ ಗ್ರಾಮಸ್ಥರು ಶಾಂತಲಿಂಗ ದೇಶೀಕೇಂದ್ರ ಶ್ರೀಗಳನ್ನು ಸನ್ಮಾನಿಸಿದರು.
ಬಸವಪ್ರಭು ಶ್ರೀ ದಾವಣಗೆರೆ, ವರಸದ್ಯೋಜಾತ ಶ್ರೀ ತೆಗ್ಗಿನಮಠ ಹರಪನಹಳ್ಳಿ, ಗುರುಬಸವ ಶ್ರೀ ಪಾಂಡೋಮಟ್ಟಿ- ಕಮ್ಮತ್ತಹಳ್ಳಿ, ಕರೀವೃಷಭೇಂದ್ರ ಶ್ರೀ ನೊಣವಿನಕೆರೆ, ಪ್ರಭು ಶ್ರೀ ಸಂಡೂರು, ಚನ್ನಬಸವ ಶಿವಯೋಗಿಗಳು ನೀಲಗುಂದ, ಮಾಜಿ ಸಂಸದರಾದ ವೈ.ದೇವೇಂದ್ರಪ್ಪ, ಎನ್.ಕೊಟ್ರೇಶ್, ಅಬಕಾರಿ ಕಮೀಷನರ್ ವೈ.ಡಿ. ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ನೆಲಗೊಂಡನಹಳ್ಳಿ ಭರತ್, ಇಟಗಿಹಳ್ಳಿ ಬಸವರಾಜ್, ಸಿದ್ದಪ್ಪ, ಶಾಂತ್ ಪಾಟೀಲ್, ನವೀನ್, ಶಿವಾನಂದ ಸ್ವಾಮಿ ಇದ್ದರು.ಹರಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ 108 ಸ್ವಾಮೀಜಿಗಳ ಪಾದ ಪೂಜೆಯನ್ನು ಭಕ್ತರು ನೆರವೇರಿಸಿದರು.