ಗುರುವಿನ ಸೇವೆಯಿಂದ ಗುರು ಕೃಪಾ: ರಾಮಕೃಷ್ಣ ಮಹಾರಾಜರು

| Published : Mar 14 2024, 02:02 AM IST

ಗುರುವಿನ ಸೇವೆಯಿಂದ ಗುರು ಕೃಪಾ: ರಾಮಕೃಷ್ಣ ಮಹಾರಾಜರು
Share this Article
  • FB
  • TW
  • Linkdin
  • Email

ಸಾರಾಂಶ

ಐಗಳಿ: ಗುರುವಿನ ಸೇವಾ ಮಾಡುವುದರಿಂದ ಗುರು ಕೃಪಾ ಆಗಲು ಸಾಧ್ಯ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ನಿಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಿರಿ ಎಂದು ಯಲ್ಲಟ್ಟಿಯ ರಾಮಕೃಷ್ಣ ಮಹಾರಾಜರು ನುಡಿದರು. ಸ್ಥಳೀಯ ಸದ್ಗುರು ನರಸಿಂಹೇಶ್ವರ ಮಹಾರಾಜರ 45ನೇ ನಾಮಸಪ್ತಾಹ ಹಾಗೂ ಮಾಜಿ ಸೈನಿಕ, ನಿವೃತ್ತ ಶಿಕ್ಷಕ, ರೈತರ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ನರಸಿಂಹೇಶ್ವರ ಮಹಾರಾಜರು ಒಬ್ಬ ವ್ಯಕ್ತಿಯಲ್ಲ ಅದು ಒಂದು ಶಕ್ತಿ. ಅವರು ಮಾತಾಡಿದಂತೆ ಅದು ಆಗುತ್ತಿತ್ತು. ಅವರ ಮೇಲೆ ನಂಬಿಕೆಯಿಟ್ಟು ಅವರನ್ನು ಆರಾಧಿಸಿದರೇ ನೀವು ಇಟ್ಟ ಗುರಿ ತಲುಪಲು ಸಾಧ್ಯ.

ಕನ್ನಡಪ್ರಭ ವಾರ್ತೆ ಐಗಳಿ

ಗುರುವಿನ ಸೇವಾ ಮಾಡುವುದರಿಂದ ಗುರು ಕೃಪಾ ಆಗಲು ಸಾಧ್ಯ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ನಿಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಿರಿ ಎಂದು ಯಲ್ಲಟ್ಟಿಯ ರಾಮಕೃಷ್ಣ ಮಹಾರಾಜರು ನುಡಿದರು.

ಸ್ಥಳೀಯ ಸದ್ಗುರು ನರಸಿಂಹೇಶ್ವರ ಮಹಾರಾಜರ 45ನೇ ನಾಮಸಪ್ತಾಹ ಹಾಗೂ ಮಾಜಿ ಸೈನಿಕ, ನಿವೃತ್ತ ಶಿಕ್ಷಕ, ರೈತರ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ನರಸಿಂಹೇಶ್ವರ ಮಹಾರಾಜರು ಒಬ್ಬ ವ್ಯಕ್ತಿಯಲ್ಲ ಅದು ಒಂದು ಶಕ್ತಿ. ಅವರು ಮಾತಾಡಿದಂತೆ ಅದು ಆಗುತ್ತಿತ್ತು. ಅವರ ಮೇಲೆ ನಂಬಿಕೆಯಿಟ್ಟು ಅವರನ್ನು ಆರಾಧಿಸಿದರೇ ನೀವು ಇಟ್ಟ ಗುರಿ ತಲುಪಲು ಸಾಧ್ಯ. ಕುಲಕರ್ಣಿ ಸಹೋದರರು ಮೂರು ಜನರನ್ನು ಗುರುತಿಸಿ ಅವರನ್ನು ಗೌರವಿಸಿದ್ದು ನಾಡಿಗೆ ಮಾದರಿಯಾಗಿದೆ. ಸೈನಿಕ, ಶಿಕ್ಷಕ, ಕೃಷಿಕ ಇವರು ಇರದಿದ್ದರೇ ನಮ್ಮ ಬದುಕು ಶೂನ್ಯವಾಗುತ್ತಿತ್ತು. ಮಕ್ಕಳಿಗೆ ಸಂಸ್ಕಾರ ಕೊಡಿಸಿರಿ. ದೇಶದ ಒಳ್ಳೆಯ ನಾಗರಿಕರನ್ನು ಮಾಡಿರಿ ಎಂದು ಸಲಹೆ ನೀಡಿದರು.

ಮಾಜಿ ಸೈನಿಕ ಸಂಗಪ್ಪ ನಾಗಮೋತಿ, ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ಪಾಟೀಲ, ನಿರಂತರದಲ್ಲಿದ್ದ ಕೃಷಿಕ ಹಣಮಂತ ಕರಿಗಾರ ಅವರನ್ನು ಮಹಾರಾಜರು ಹಾಗೂ ಕುಲಕರ್ಣಿ ಸಹೋದರರು ಸೇರಿ ಆದರದ ಸತ್ಕಾರ ಮಾಡಿ ಜನಮನ ಸೆಳೆದರು.

ಸತ್ಕಾರ ಸ್ವೀಕರಿಸಿದ ನಿವೃತ್ತ ಶಿಕ್ಷಕ ನಿಂಗನಗೌಡ ಪಾಟೀಲ ಮಾತನಾಡಿ, ಮಕ್ಕಳಿಗೆ ಓದು ಬರಹ ಲೆಕ್ಕಾಚಾರ ಜೊತೆ ಸಂಸ್ಕಾರ ನೀಡಿದ್ದು, ನನಗೆ ತೃಪ್ತಿ ಇದೆ. ಕುಟುಂಬದಲ್ಲಿ ಸಮಾಧಾನದಿಂದ ಕೂಡಿ ತಿನ್ನುವುದು ಹಿರಿಯರಿಗೆ ಗೌರವಿಸುವ ಕಾರ್ಯ ಮಾಡಿರಿ. ಗಳಿಸಿದರಲ್ಲಿ ಸ್ವಲ್ಪ ಭಾಗ ದಾನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಮನೆಯಲ್ಲಿ ಸೊಸೆಯನ್ನು ಸೊಸೆ ಎಂದು ತಿಳಿಯದೆ ಅವಳು ಮಗಳು ಎಂದು ಭಾವಿಸಬೇಕು. ಆಗ ಆ ಮನೆ ಮಂತ್ರಾಲಯ ಆಗಲಿದೆ. ಮಕ್ಕಳು ದಾರಿ ತಪ್ಪದಂತೆ ಅವರ ಮೇಲೆ ನಿಘಾ ವಹಿಸಬೇಕು. ಒತ್ತಡ ಜೀವನದಲ್ಲಿ ನಾವು ಪೂಜ್ಯರನ್ನು ಮಹಾರಾಜರನ್ನು ದರ್ಶನ ಪಡೆದು ಪುನೀತರಾಗಬೇಕು ಎಂದರು.

ನಿಂಗರಾಜ ಮಹಾರಾಜರು, ಚೈತನ್ಯ ಮಹಾರಾಜರು, ಹೊನವಾಡದ ಬಾಬುರಾವ ಮಹಾರಾಜರು, ಸೋಪಾನ ಮಹಾರಾಜರು ಮಾತನಾಡಿದರು. ಶ್ರೀ ಭಾಗ್ಯೋದಯ ಮಹಾರಾಜರು ದಾಸ ಭೋದ ವಾಚನ ಮಾಡಿದರು. ಸುಧೀರ ಕುಲಕರ್ಣಿ ದಂಪತಿಯಿಂದ ಗದ್ದುಗೆ ಪೂಜೆ ನೆರವೇರಿಸಿದರು. ಕೃಷ್ಣಾಜಿ ಕುಲಕರ್ಣಿ, ಡಾ.ನರಸಿಂಹ ಕುಲಕರ್ಣಿ, ಡಾ.ವಾಸುದೇವ ನೇಮಗೌಡ, ರಾಮೇಶ್ವರ ಕುಲಕರ್ಣಿ, ಜಗನ್ನಾಥ ಕುಲಕರ್ಣಿ, ಸಿದ್ರಾಮ ಸಿಂಧೂರ, ಸಿದಗೌಡ ಪಾಟೀಲ, ಸಿದಗೌಡ ನೇಮಗೌಡ, ರಾಮೇಶ್ವರ ಕುಲಕರ್ಣಿ, ಸೇರಿದಂತೆ ನೂರಾರು ಭಕ್ತರು ಇದ್ದರು. ಮಲಗೌಡ ಪಾಟೀಲ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಕೇದಾರಿಗೌಡ ಬಿರಾದಾರ ವಂದಿಸಿದರು.