ಸಾರಾಂಶ
ಗುರುಮಠಕಲ್ ಪಟ್ಟಣದ ಪ್ರಸಿದ್ಧ ನಗರೇಶ್ವರ ದೇವಸ್ಥಾನ ಶ್ರೀರಾಮ ದೇವರಿಗೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಬಹುನಿರೀಕ್ಷಿತ ರಾಮೋತ್ಸವದಲ್ಲಿ ಭಕ್ತರು ಪಾಲ್ಗೊಳ್ಣುವ ಮೂಲಕ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.ಪಟ್ಟಣದ ಹಾಗೂ ಪ್ರತಿಹಳ್ಳಿಗಳಲ್ಲಿ ಭಕ್ತರಿಂದ ರಾಮನಾಮಗಳಿಂದ ಸಂಪನ್ನಗೊಂಡಿತು. ಪಟ್ಟಣದ ಪ್ರಸಿದ್ಧ ನಗರೇಶ್ವರ ದೇವಸ್ಥಾನ, ಮಹಾಲಕ್ಷ್ಮಿ ದೇವಾಲಯ, ತಿಮ್ಮಣ್ಣ ದೇವಸ್ಥಾನ, ಅಂಕಮ್ಮ ದೇವಸ್ಥಾನ, ಕೆಎಚ್ ಡಿಸಿ ಕಾಲೊನಿ, ಕಾಕಲವಾರಬೇಸ್ ಆಂಜನೇಯಸ್ವಾಮಿ, ಲಕ್ಷ್ಮೀನಗರದ ಲಕ್ಷ್ಮೀ ದೇವಸ್ಥಾನ, ಈಶ್ವರ ದೇವಾಲಯ ಸೇರಿ ವಿವಿಧ ಬಡಾವಣೆಗಳ ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಪೂಜೆ ಮಹಾಮಂಗಳಾರತಿ, ಅನ್ನದಾಸೋಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಾಯಂಕಾಲ ಮನೆಗಳಲ್ಲಿ ದೀಪಗಳಿಂದ ಅಲಂಕಾರ ಹಾಗೂ ದೇವಾಲಯಗಳಲ್ಲಿ ಸಾಮೂಹಿಕ ದೀಪಾರಾಧನೆ ನಡೆಯಿತು. ಐತಿಹಾಸಿಕ ಶ್ರೀರಾಮೋತ್ಸವಕ್ಕಾಗಿ ಎಲ್ಲಾ ದೇವಸ್ಥಾನಗಳಲ್ಲಿ ಭಜನೆ ಸಾಮೂಹಿಕ ರಾಮನಾಮಜಪ ಹಾಗೂ ಹನುಮಾನ ಚಾಲೀಸಾ ಪಠಣ ನಡೆಯಿತು. ವಿವಿಧ ಸಮಾಜ ದೇವಾಲಯಗಳು ವಿದ್ಯುತ್ ಅಲಂಕಾರ ಹಾಗೂ ಹೂಗಳ ಅಲಂಕಾರಗಳಿಂದ ಭಕ್ತರ ಮನ ಸೆಳೆದವು. ಈ ಸಂದರ್ಭದಲ್ಲಿ ಪಟ್ಟಣದ ಸಮಸ್ತ ರಾಮ ಭಕ್ತರು ದರ್ಶನ ಪಡೆದರು.
ಭಾರತದ ಅಸ್ಮಿತೆಯಾದ ಶ್ರೀರಾಮಮಂದಿರ ಉದ್ಘಾಟನೆಗೆ ಶತಮಾನಗಳಿಂದ ನಿರೀಕ್ಷಿಸುತ್ತಿರುವ ಶ್ರೀ ರಾಮೋತ್ಸವದಲ್ಲಿ ಭಾಗಿಯಾಗುತ್ತಿರುವುದು ಪ್ರತಿಯೊಬ್ಬರ ಸೌಭಾಗ್ಯವಾಗಿದೆ.ರಾಜಾ ರಮೇಶಗೌಡ, ಸಮಾಜ ಸೇವಕರು ಗುರುಮಠಕಲ್