ಸುಜ್ಞಾನದೆಡೆಗೆ ಕರೆದೊಯ್ಯುವುದೇ ಗುರು ಪೌರ್ಣಿಮೆ: ಶಿವಕುಮಾರ ಶ್ರೀ

| Published : Jul 13 2025, 01:18 AM IST

ಸುಜ್ಞಾನದೆಡೆಗೆ ಕರೆದೊಯ್ಯುವುದೇ ಗುರು ಪೌರ್ಣಿಮೆ: ಶಿವಕುಮಾರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಗುರು ಪೌರ್ಣಿಮೆಯ ಮಹತ್ವವಾಗಿದ್ದು, ಗುರುವನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಶ್ರೀಮಠದ ಭಕ್ತ ವೃಂದದಿಂದ ಗುರು ಪೌರ್ಣಿಮೆಯ ಗುರುವಂದನಾ ಸ್ವೀಕರಿಸಿ ಆಶೀರ್ವಚನ ನೀಡಿದರು.

ಕೊಡೇಕಲ್‌: ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಗುರು ಪೌರ್ಣಿಮೆಯ ಮಹತ್ವವಾಗಿದ್ದು, ಗುರುವನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಶ್ರೀಮಠದ ಭಕ್ತ ವೃಂದದಿಂದ ಗುರು ಪೌರ್ಣಿಮೆಯ ಗುರುವಂದನಾ ಸ್ವೀಕರಿಸಿ ಆಶೀರ್ವಚನ ನೀಡಿದರು.

ಡಾ. ಬಿ. ಬಿ. ಬಿರಾದಾರ ಮಾತನಾಡಿ, ಮಾನವೀಯ ವ್ಯಕ್ತಿತ್ವದಲ್ಲಿ ಸಮಾಜ ಸೇವೆ, ಗುರುಸೇವೆ, ಭಗವದ್ ಸೇವೆ ಹೀಗೆ ಸೇವಾ ಮುಖಗಳಲ್ಲಿ ಸೇವಾ ನಿಷ್ಠತೆಯೇ ಆಧ್ಯಾತ್ಮಿಕ ಪರಂಪರೆಯ ಗುರು ಸೇವಾ, ಗುರು ವಂದನಾ ಧಾರ್ಮಿಕತೆಯಲ್ಲಿ ಸನ್ನಡತೆಯ ವ್ಯಕ್ತಿಯ ಕಾರ್ಯಶಕ್ತಿಯಾಗಿದೆ ಎಂದರು. ಸುರೇಶ ದೇವೂರ, ಶಿಕ್ಷಕರಾದ ಗುರುರಾಜ ಜೋಷಿ, ಕೊಟ್ರೇಶ ಕೋಳೂರ ಮಾತನಾಡಿದರು.

ಸಿದ್ದಲಿಂಗಯ್ಯಸ್ವಾಮಿ, ಬಸಣ್ಣ ಬಂಗಾರಗುಂಡ, ಬಿ.ಬಿ.ಪಡಶೆಟ್ಟಿ, ಮಲ್ಲಣ್ಣ ಆರಲಗಡ್ಡಿ, ಸೋಮನಿಂಗಪ್ಪ ದೊರಿ, ವಿಶಾಲ ಅಂಗಡಿ, ವಿಜಯ ಮದರಿ, ತಿರುಪತಿ ಹಡಪದ, ಯಂಕಣ್ಣ ಹಗರಟಗಿ, ಕುಮಾರ ತೋಳನೂರ, ಶಿವಯ್ಯ ಸ್ವಾಮಿ, ಮುತ್ತು ಪಡಶೆಟ್ಟಿ, ಸಂಗು ಪಾಟೀಲ್, ಶ್ರೀಮಠದ ಮಹಿಳಾ ಭಕ್ತರಿದ್ದರು. ನಿಜಶರಣ ಹಡಪದ ಅಪ್ಪಣ್ಣನವರ ಭಾವಚಿತ್ರ ಪೂಜಿಸಿ ಜಯಂತಿಯನ್ನು ಬಸಯ್ಯ ಸ್ವಾಮಿ ಹಿರೇಮಠ ಅವರೊಂದಿಗೆ ಗುಂಡಣ್ಣ ನಗನೂರ, ಮಲ್ಲಿಕಾರ್ಜಿನ ಹಡಪದ ಭಕ್ತರ ಪರವಾಗಿ ಗುರುವಂದನಾ ಪೂಜೆ ನೆರವೇರಿಸಿದರು. ಚಂದ್ರಶೇಖರ ಐಹೊಳ್ಳಿ ನಿರೂಪಿಸಿದರು, ಹಿರಿಯ ಪತ್ರಕರ್ತ ಬಸವರಾಜ ಬ ಅಂಗಡಿ ಸ್ವಾಗತಿಸಿದರು, ರವಿ ಆರಲಗಡ್ಡಿ ವಂದಿಸಿದರು.