ಸಾರಾಂಶ
ಮನುಷ್ಯನ ಮನಸ್ಸು ನಿಗ್ರಹಿಸಿ ಅಂತರಂಗದ ಆತ್ಮಜ್ಞಾನ ಹೆಚ್ಚಿಸಿ ಆಧ್ಯಾತ್ಮದೆಡೆಗೆ ಕೊಂಡೊಯ್ಯುವುದೆ ಸತ್ಸಂಗ
ಕನ್ನಡಪ್ರಭ ವಾರ್ತೆ ಸುರಪುರ
ಸಂಸ್ಕಾರ, ಸಂಸ್ಕೃತಿ, ಸನ್ನಡತೆ, ಸನ್ಮಾರ್ಗದಡೆಗೆ ಸಾಗಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಅಮೀನಗಡದ ಶಿವಶರಣೆ ಮಂಜುಳಾ ಮಾತೋಶ್ರೀ ನುಡಿದರು.ತಾಲೂಕಿನ ಕೆಂಭಾವಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗಿದ ಮಾಸಿಕ ಹುಣ್ಣಿಮೆ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಉಪನ್ಯಾಸ ನೀಡಿದರು. ಮನುಷ್ಯನ ಮನಸ್ಸು ನಿಗ್ರಹಿಸಿ ಅಂತರಂಗದ ಆತ್ಮಜ್ಞಾನ ಹೆಚ್ಚಿಸಿ ಆಧ್ಯಾತ್ಮದೆಡೆಗೆ ಕೊಂಡೊಯ್ಯುವುದೆ ಸತ್ಸಂಗ ಎಂದರು.
ಪ್ರತಿ ತಿಂಗಳು ಪ್ರೇರೇಪಣೆ ನೀಡುತ್ತಿರುವ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರ ಕಾರ್ಯ ಅಭಿನಂದನೀಯ. ಲಕ್ಷ ಕೊಟ್ಟು ಕೇಳುವ ಲಕ್ಷವಿಲ್ಲದಿದ್ದರೆ ಎಲ್ಲವೂ ಅಲಕ್ಷ್ಯ ಎನ್ನುತ್ತಾ, ಗುರು ಸನ್ನಿಧಿಯಲ್ಲಿ ಸೇರಿದಾಗ ಮಾನವ ಜೀವನ ಸಾರ್ಥಕವಾಗುತ್ತದೆ, ಪರಿಶುದ್ಧವಾಗಿ ವಿಜೃಂಭಿಸುತ್ತದೆ, ವಿಭಿನ್ನವಾಗಿ ಕಂಗೊಳಿಸುತ್ತಿದೆ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚೆನ್ನಬಸವ ಶಿವಾಚಾರ್ಯರು, ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಆಗಿ ಹುಣ್ಣಿಮೆ ದಿನದಂದು ಅನುಭವದ ಅಮೃತ ಧಾರೆ ಎರೆದು ಮಂಜುಳಾ ಅಮ್ಮನವರ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.
ಸೋಮನಾಥ ಯಾಳಗಿ, ಯಮನೇಶ ಹೆಗ್ಗನದೊಡ್ಡಿ ಹಾಗೂ ಲಕ್ಷೀ ಬಸವರಾಜ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಪ್ರಮುಖರಾದ ಪ್ರಶಾಂತ ಹಿರೇಮಠ, ನಿಜಗುಣ ವಿಶ್ವಕರ್ಮ, ಅವ್ವಣ್ಣ ಮಡಿವಾಳಕರ್, ಸೇರಿ ಆನೇಕ ಸದ್ಭಕ್ತರು ಮಹಿಳೆಯರು, ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಡಾ ಯಂಕನಗೌಡ ಪಾಟೀಲ್ ನಿರೂಪಿಸಿದರು.